ಡೈಲಿ ವಾರ್ತೆ: 16/Jan/2024
ವರದಿ: ವಿದ್ಯಾಧರ ಮೊರಬಾ
ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಿ : ಪ್ರಶಾಂತಕುಮಾರ್
ಅಂಕೋಲಾ : ಯಾವುದೇ ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಬೇಕು. ಹಾಗೇ ಕಡತಗಳನ್ನು ವಿಳಂಬ ಮಾಡದೇ ಆಯಾ ಸಂದರ್ಭದಲ್ಲಿಯೇ ವಿಲೇವಾರಿ ಮಾಡಬೇಕು. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗದಂತೆ ತ್ವರಿತ ಗತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ಕೊಡಬೇಕು. ಅಧಿಕಾರಿಗಳು ಕೂಡ ಜನರ ಕಷ್ಟ-ನಷ್ಟಗಳ ಬಗ್ಗೆ ಅರಿವಿರಬೇಕು ಎಂದು ಸರ್ಕಾರದ ಆಪ್ತ ಕಾರ್ಯದರ್ಶಿ ಪ್ರಶಾಂತಕುಮಾರ ನಾಯಕ ಹೇಳಿದರು.
ತಾ.ಪಂ. ಸಭಾಭವನದಲ್ಲಿ ಸರ್ಕಾರದ ಯೋಜನೆಗಳ ಅನುಷ್ಠಾನ ಕುರಿತು ಮಂಗಳವಾರ ಆಯೋಜಿಸಿದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ, ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಅವರು ಮಾತನಾಡಿದರು.
ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರದ ಗ್ಯಾರೆಂಟಿ ಯೋಜನೆಯು ಅರ್ಹ ಫಲಾನುಭವಿಗಳಿಗೆ ಲಭ್ಯವಾಗಿರುವ ಅಧಿಕಾರಿಗಳಿಂದ ಚರ್ಚೆಸಲಾಯಿತು. ತಾಲೂಕಿನಲ್ಲಿ ವಿವಿಧ ಯೋಜನೆ ಕುಂದು ಕೊರತೆ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು. ಅತಿ ಮುಖ್ಯವಾಗಿ ಬಡವರಿಗೆ ಅನು ಕೂಲವಾಗುವಂತೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರ ಸಮಸ್ಯೆ ಕುರಿತು ಸಂಬಂಧಿಸಿದ ಇಲಾಖೆಯ ಸಚಿವರಿಗೆ ಮತ್ತು ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು ಎಂದರು.
ಈ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಕಲ್ಯಾಣ ಕಾಂಬ್ಳೆ, ತಹಸೀಲ್ದಾರ್ ಅನಂತ ಶಂಕರ ಬಿ., ಗ್ರೇಡ್-2 ತಹಸೀಲ್ದಾರ್ ಬಿ.ಜಿ.ಕುಲಕಣ ್, ತಾಪಂ.ಇಓ ಸುನೀಲ ಎಂ., ಕೃಷಿ ಅಧಿಕಾರಿ ಶ್ರೀಧರ ನಾಯ್ಕ, ಬಿಇಓ ಮಂಗಳಲಕ್ಷ್ಮೀ ಪಾಟೀಲ, ಲೋಕೋಪಯೋಗಿ ಇಲಾಖೆಯ ಎಇಇ ಮುಹಮ್ಮದ ಇಸಾಖ್ ಸೈಯದ್, ಪಿಆರ್‍ಡಿ ಎಇಇ ರಾಮು ಗುನಗಿ, ಹೆಸ್ಕಾಂ ಇಲಾಖೆಯ ಎಇಇ ಪ್ರವೀಣ ನಾಯ್ಕ, ಸಿಡಿಪಿಓ ಸವಿತಾ ಶಾಸ್ತ್ರೀಮಠ, ಬಿಸಿಎಂ ಇಲಾಖೆಯ ತಾಲೂಕು ಕಲ್ಯಾಣಧಿಕಾರಿ ಮನೋಹರ ಅರ್ಗೇಕರ್, ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಪಿಎಸ್‍ಐ ಉದ್ದಪ್ಪ ಧರೆಪ್ಪನವರ್, ಪಿಡಿಓ ನೀಲಕಂಠ ನಾಯಕ, ವಿಎ ಭಾರ್ಗವ ನಾಯಕ ಸೇರಿದಂತೆ ವಿವಿಧ ಅಧಿಕಾರಿಗಳ ಉಪಸ್ಥಿತರಿದ್ದು, ಚರ್ಚಿಸಲಾಯಿತು. ಸಭೆಯ ಪೂರ್ವದಲ್ಲಿ ಇಲ್ಲಿಯ ಸರ್ಕಾರಿ ಆಸ್ಪತ್ರೆ, ವಂದಿಗೆ ಆಗೇರ ಕೇರಿಯ ಸರ್ಕಾರಿ ಕಿರಿಯ ಪ್ರಾಥ ಮಿಕ ಶಾಲೆ ಮತ್ತು ಬೊಳೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.