ಡೈಲಿ ವಾರ್ತೆ: 19/Jan/2024

ಲಕ್ಷ್ಮೇಶ್ವರ: ಸ. ಮಾ. ಪ್ರಾ. ಕ. ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರದಲ್ಲಿ ಮಹಾತಪಸ್ವಿ ಯೋಗಿ ವೇಮನರ ಜಯಂತಿ ಆಚರಣೆ

ಲಕ್ಷ್ಮೇಶ್ವರ: ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಲಕ್ಷ್ಮೇಶ್ವರದಲ್ಲಿ ಇಂದು ಮಹಾತಪಸ್ವಿ ಯೋಗಿ ವೇಮನರ ಜಯಂತಿಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಶಾಲೆಯ ಗುರುಮಾತೆಯರಾದ ಎಚ್ ಡಿ ನಿಂಗರೆಡ್ಡಿ ಮಾತನಾಡಿ ಯೋಗಿ ವೇಮನ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೊಂಡವೀಡು ಬಳಿ ಇರುವ ಮೂಗುಚಿಪಲ್ಲಿಯಲ್ಲಿ ಜನಿಸಿದರು ತಂದೆ ವೇಮ ಭೂಪಾಲ ತಾಯಿ ಮಲ್ಲಮಾಂಬೆ ಇವರು ರಾಜನ ಮಗನಾಗಿದ್ದರೂ ಸಹ ಸುಖದ ಸುಂಪತ್ತಿಗೆಯಲ್ಲಿ ಇರದೆ ಬಟ್ಟೆ ಇಲ್ಲದೆ ಊರೂರು ತಿರುಗಿ ಭಿಕ್ಷಾನ್ನಗಳನ್ನು ಉಂಡು ಜನರ ನೋವು ನಲಿವು ಕಂಡು ಕಾವ್ಯಗಳನ್ನು ರಚಿಸಿದ್ದಾರೆ ಕ್ರಿ.ಶ 1412 ರಲ್ಲಿ ಜನಿಸಿದ ಇವರು ತ್ರಿಪದಿ ಕವಿ ಸರ್ವಜ್ಞನಂತೆ ಲೋಕ ಸಂಚಾರಿ ಯಾಗಿ ತೆಲುಗಿನಲ್ಲಿ ಚೌಪದಿಗಳನ್ನು ರಚಿಸಿದ್ದಾರೆ ಅವರ ಕಾವ್ಯದಲ್ಲಿ ಸತ್ವ ಅಡಗಿದೆ ಸಮಾಜದಲ್ಲಿ ಪದ ಕಟ್ಟುವ ಮೂಲಕ ಜನರ ತಪ್ಪು ಒಪ್ಪುಗಳನ್ನು ತಿಳಿಸಿ ಸರಿದಾರಿಗೆ ತರಲು ಪ್ರಯತ್ನಿಸಿದ ಒಬ್ಬ ಶ್ರೇಷ್ಠ ತೆಲುಗು ಸಾಹಿತ್ಯ ತತ್ವಜ್ಞಾನಿ ಎಂದು ಹೇಳಿದರು ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಬಿ ಎಮ್ ಕುಂಬಾರ ಅವರು ಜನಸಾಮಾನ್ಯರ ಬದುಕಿನಲ್ಲಿ ಯೋಗ ಬುದ್ಧಿವಂತಿಕೆ ಹಾಗೂ ನೈತಿಕತೆ ವಿಷಯಗಳನ್ನು ಹೆಚ್ಚಾಗಿ ಪ್ರತಿಪಾದಿಸಿದ ಯೋಗಿ ವೇಮಣ್ಣ ಭಾರತೀಯ ತತ್ವಜ್ಞಾನಿಗಳ ಸಾಲಿನಲ್ಲಿ ಒಬ್ಬರಾಗಿದ್ದಾರೆ ಎಂದರು ಈ ಸಂದರ್ಭದಲ್ಲಿ ಸಿ ಆರ್ ಸಿ ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಸರ್ ಆರ್ ಎಂ ಶಿರಹಟ್ಟಿ ಸ್ವಪ್ನ ಕಾಳೆ ಅತಿಥಿ ಶಿಕ್ಷಕರಾದ ಪೂರ್ವಿ ಮುದುಕಣ್ಣವರ ರಾಮಣ್ಣ ಉಪನಾಳ ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.