ಡೈಲಿ ವಾರ್ತೆ: 21/Jan/2024
ವಡ್ಡರ್ಸೆ ಶ್ರೀ ನಾರಾಯಣಗುರು ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ: ಸರಕಾರ ಯಾವುದೇ ಇರಲಿ ರಾಜಕೀಯ ರಹಿತವಾದ ಆಡಳಿತ ನೀಡಬೇಕು ಆಗ ಮಾತ್ರ ತಳಮಟ್ಟದ ಹಳ್ಳಿಗಳು ಅಭಿವೃದ್ಧಿ ಹೊಂದಿದಲು ಸಾಧ್ಯ: ಸಚಿವ ಡಾ.ಎಚ್ ಸಿ ಮಹದೇವಪ್ಪ
ಕೋಟ: ಸರಕಾರ ಯಾವುದೇ ಇರಲಿ ರಾಜಕೀಯ ರಹಿತವಾದ ಆಡಳಿತ ನೀಡಬೇಕು ಆಗ ಮಾತ್ರ ತಳಮಟ್ಟದ ಹಳ್ಳಿಗಳು ಅಭಿವೃದ್ಧಿ ಹೊಂದಿದಲು ಸಾಧ್ಯ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್ ಸಿ ಮಹದೇವಪ್ಪ ಹೇಳಿದರು.
ವಡ್ಡರ್ಸೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ
ಜಿಲ್ಲಾಡಳಿ ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ,ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ನಾರಾಯಣಗುರು ವಸತಿ ಶಾಲೆಯ ನೂತನ ಕಟ್ಟಡ ಕಾಮಗಾರಿ ಶಂಕು ಸ್ಥಾಪನೆ ನೆರವೆರಿಸಿ ಮಾತನಾಡಿ ಆಗಿನ ಕಾಲದಲ್ಲೆ ಲೋಕೋಪಯೋಗಿ ಇಲಾಖೆ,ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಬಾರಿ ಮಂತ್ರಿಯಾಗಿ ಜನಪರ ಕಾರ್ಯಕ್ರಮಗಳನ್ನು ಪಕ್ಷಭೇದ ಮರೆತು ನೀಡಿದ್ದೇನೆ.ಅದರಂತೆ ಸಿದ್ಧರಾಮಯ್ಯನವರ ಸರಕಾರ ಬಡವರ ,ಶೋಷಿತರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ,ರಾಜ್ಯದಲ್ಲಿ ನಮ್ಮದೆ ಸರಕಾರ ಕಾರ್ಯನಿರ್ವಹಿಸುತ್ತಿದೆ ಅತ್ತ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ ಸರಕಾರ ಪ್ರಸ್ತುತ ಜನಸಾಮಾನ್ಯರಿಗೆ ಬೇಕಾಗಿರುವ ಸುರಕ್ಷಿತ ಕುಡಿಯುವ ನೀರು,ರಸ್ತೆ ದುರ್ಬಲರ ಪರವಾಗಿ ಕಾರ್ಯನಿರ್ವಹಿಸಬೇಕು.ಧರ್ಮದ ಆಧಾರದಲ್ಲಿ ಸರಕಾರಗಳು ಕಾರ್ಯನಿರ್ವಹಿಸಬಾರದು ಸೌಹಾರ್ದತೆಯ ಮೂಲಕ ಆಡಳಿತ ನೀಡಬೇಕು,ಅಂಬೇಡ್ಕರ್ ರವರ ಸಂವಿಧಾನ ಹಾಗೂ ನಾರಾಯಣಗುರುಗಳ ತತ್ವ ಸಿದ್ಧಾಂತಗಳ ಮೇಲೆ ಆಡಳಿತ ನಡೆಯುವಂತ್ತಾಗಬೇಕು,ನಾರಾಯಣಗುರುಗಳು ಸಮಾನತೆಗಾಗಿ ಅಸ್ಪೃಶ್ಯತೆಯ ವಿರುದ್ಧ ಧ್ವನಿಯಾಗಿ ಶಿಕ್ಷಣದಿಂದ ನೈಜ ಬದುಕು ಕಾಣಬಹುದು ಎಂದು ಜಗತ್ತಿಗೆ ತೊರಿಸಿಕೊಟ್ಟಿದ್ದಾರೆ.ಜೀವನದಲ್ಲಿ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಆ ಮೂಲಕವೇ ಮಾನವ ಧರ್ಮ ಶ್ರೇಷ್ಠ ಎಂಬುವುದನ್ನು ಜಗತ್ತಿಗೆ ಪಸರಿಸಬೇಕು ಎಂದರಲ್ಲದೆ ಅದೇ ರೀತಿ ಜಗತ್ತಿಗೆ ಒಂದೆ ಜಾತಿ ಧರ್ಮ ಸಾರಿದ ನಾರಾಯಣಗುರುಗಳ ಹೆಸರಿನಲ್ಲಿ ವಸತಿ ಶಾಲೆ ನಿರ್ಮಾಣಗೊಳ್ಳುತ್ತಿದೆ ಇದು ಬಡ ಹಾಗೂ ಮಧ್ಯಮವರ್ಗ ಮಕ್ಕಳ ಶೈಕ್ಷಣಿಕ ಬದುಕಿಗೆ ಬೆಳಕಾಗಾಗಲಿದೆ ಎಂದರು.
ಮುಖ್ಯ ಅಭ್ಯಾಗತರಾಗಿ ರಾಜ್ಯದ ಹಿಂದುಗಳಿ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ ಸಮಾನತೆಗಾಗಿ ನಾರಾಯಣಗುರುಗಳು ಜಗತ್ತಿಗೆ ನೈಜ ಸಂಸ್ಕಾರವನ್ನು ಸಾರಿದ್ದಾರೆ,ಪ್ರತಿಯೊಬ್ಬರಿಗೂ ಮೊದಲು ಬೇಕಾಗಿರುವುದು ಶಿಕ್ಷಣ ಮತ್ತು ಆರೋಗ್ಯ ಈ ಎರಡು ಸರಕಾರದ ಮೂಲ ಧ್ಯೇಯವಾಗಲಿ ಅದು ಈ ಬಾರಿಯ ಬಜೆಟ್ ನಲ್ಲಿ ಮೂಲರೂಪಕ್ಕೆ ಬರಲಿ ,ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಕಾಯ್ದಿರಿಸುವ ಹಾಗೂ ಶಿಕ್ಷಕರ ಒಲ್ಡ್ ಪೆನ್ಷನ್ ನೀತಿ ಜಾರಿಗೊಳಿಸಲು ಸಚಿವರಲ್ಲಿ ಮನವಿ ಮಾಡಿದರು.
ಅಧ್ಯಕ್ಷತೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ,ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ,ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್,ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಮಡ್ಲೂರ್,ಗುತ್ತಿಗೆದಾರ ವಿಜಯಕುಮಾರ್ ಶೆಟ್ಟಿ, ಇಲಾಖೆಯ ಇಂಜಿನಿಯರ್ ಗಳಾದ ರಾಮು,ಜನಾರ್ದನ್ ,ವಸತಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಶೈಲಜಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್ ಲಮಾಣಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಗಣೇಶ್ ನಿರೂಪಿಸಿ ವಂದಿಸಿದರು.
ವಡ್ಡರ್ಸೆ ನೆನಪಿಸಿದ ಸಚಿವ ಮಹಾದೇವಪ್ಪ
ಪತ್ರಿಕಾರಂಗದಲ್ಲಿ ಆಗಿನ ಕಾಲದಲ್ಲೆ ಕ್ರಾಂತಿ ಪಸರಿಸಿದ ವಡ್ಡರ್ಸೆ ರಘುರಾಮ ಶೆಟ್ಟಿಯವ ಪ್ರತಿಕಾರಂಗದ ನೈಜ ಬದುಕಿನ ಆಯಾಮವನ್ನು ವೇದಿಕೆಯಲ್ಲಿ ತೆರೆದಿಟ್ಟು ಇಂತಹ ಊರಿಗೆ ಆಗಮಿಸಿದ ನಾನೇ ಧ್ಯನ್ಯ ಎಂದು ಸಭೆಯಲ್ಲಿ ನೆನಪಿಸಿದರು.