ಡೈಲಿ ವಾರ್ತೆ: 21/Jan/2024

ಕೋಟ ಅಮೃತೇಶ್ವರೀ ದೇಗುಲಕ್ಕೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಭೇಟಿ

ಕೋಟ: ಕೋಟ ಅಮೃತೇಶ್ವರೀ ದೇಗುಲಕ್ಕೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ರವಿವಾರ ಭೇಟಿ ನೀಡಿದರು.
ಈ ಸಂದರ್ಭ ಸಚಿವರನ್ನು ದೇಗುಲದ‌ ವತಿಯಿಂದ ಗೌರವಿಸಿ ಬರಮಾಡಿಕೊಳ್ಳಲಾಯಿತು, ದೇಗುಲದ ಇತಿಹಾಸದ ಕುರಿತು ತಿಳಿಸಲಾಯಿತು ಹಾಗೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಬಾಕಿ ಇದ್ದು ಈ ಬಗ್ಗೆ ಸೂಕ್ತ ಅನುದಾನ ನೀಡುವಂತೆ ಕೋರಲಾಯಿತು. ಈ ಬಗ್ಗೆ ಸಹಕಾರ ನೀಡುವುದಾಗಿ‌ ಸಚಿವರು ತಿಳಿಸಿದರು.

ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಆನಂದ‌ ಸಿ. ಕುಂದರ್, ಕಾರ್ಯನಿರ್ವಹಣಾಧಿಕಾರಿ ಪ್ತಶಾಂತ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಮೊದಲಾದವರಿದ್ದರು.