ಡೈಲಿ ವಾರ್ತೆ: 25/Jan/2024

ಅಪರಿಚಿತ ಮೃತ ಕೃಷ್ಣಪ್ಪ ಎಂಬವರ ವಾರಿಸುದಾರರ ಪತ್ತೆಗೆ ಪೊಲೀಸ್ ಇಲಾಖೆ ಮನವಿ

ಬಂಟ್ವಾಳ : ಅಂದಾಜು 70 ವರ್ಷ ಪ್ರಾಯದ ಕೃಷ್ಣಪ್ಪ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು ಇವರ ಮೃತದೇಹವು ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಇದ್ದು ಮೃತ ಅಪರಿಚಿತ ಕೃಷ್ಣಪ್ಪ ಎಂಬವರ ವಾರಿಸುದಾರರ ಪತ್ತೆಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ

ಉಸಿರಾಟದ ತೊಂದರೆ ಚಿಕಿತ್ಸೆಗೆ ಜ.9 ರಂದು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ಇವರು ವಿಪರೀತ ಅಸ್ವಸ್ಥಗೊಂಡಿದ್ದು ಮಾತನಾಡಲು ಆಗದೆ ಇದ್ದುದರಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ 108 ಅಂಬುಲೆನ್ಸ್ ವಾಹನದಲ್ಲಿ ಮಂಗಳೂರು ಜಿಲ್ಲಾ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅದೇ ದಿನ ಸಂಜೆ ವೇಳೆಗೆ ಅವರು ಮೃತಪಟ್ಟಿರುತ್ತಾರೆ.

ಅಪರಿಚಿತ ಕೃಷ್ಣಪ್ಪರವರ ಗುರುತು ಪತ್ತೆಯಾದರೆ ಬಂಟ್ವಾಳ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಬಂಟ್ವಾಳ
ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ತಿಳಿಸಿದ್ದಾರೆ.