ಡೈಲಿ ವಾರ್ತೆ: 01/Feb/2024
ಹಸಿ ಈರುಳ್ಳಿ ಸೇವನೆಯಿಂದ ಆಗುವ ಪ್ರಯೋಜನಗಳು..!
ಈರುಳ್ಳಿಯನ್ನು ಬಹುತೇಕರು ಇಷ್ಟ ಪಟ್ಟರೆ ಇನ್ನು ಕೆಲವರು ಇಷ್ಟ ಪಡುವುದಿಲ್ಲ. ಈ ಹಸಿ ಈರುಳ್ಳಿ ಸೇವನೆ ಮಾಡಿದರೆ, ಬಾಯಿಯು ಹಸಿ ಈರುಳ್ಳಿ ವಾಸನೆ ಬರುತ್ತದೆ ಎನ್ನುವ ಕಾರಣಕ್ಕೆ ಹಸಿಯಾಗಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಈ ಈರುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ಬಯೋಟಿನ್ ಫೋಲಿಕ್ ಆಸಿಡ್, ಕ್ರೋಮಿಯಂ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ತಾಮ್ರ, ರಂಜಕ, ಮ್ಯಾಂಗನೀಸ್ ಮತ್ತು ಫೈಬರ್ ಅಂಶಗಳು ಹೇರಳವಾಗಿದೆ. ಈ ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಆರೋಗ್ಯವು ಲಾಭವು ಅಧಿಕವಾಗಿದೆ.
ಹಸಿ ಈರುಳ್ಳಿ ಸೇವನೆಯಿಂದ ಆಗುವ ಪ್ರಯೋಜನಗಳು
* ಹೃದಯದ ಆರೋಗ್ಯ ಹೆಚ್ಚಿಸಲು ಸಹಕಾರಿ : ಈರುಳ್ಳಿಯಲ್ಲಿ ಫ್ಲೋವೊನೈಡ್ ಗಳು ಮತ್ತು ಥಿಯೋಸೆಲ್ಫಿನೇಟ್ ಗಳು ಸಮೃದ್ಧವಾಗಿದೆ. ಫ್ಲೋವೊನೈಡ್ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
* ಮೂಳೆಗಳನ್ನು ಬಲಪಡಿಸುತ್ತದೆ : ಈರುಳ್ಳಿಯಲ್ಲ ಕ್ಯಾಲ್ಸಿಯಂ ಅಂಶವು ಅಧಿಕವಾಗಿದ್ದು, ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಮೂಳೆಗಳನ್ನು ಬಲ ಪಡಿಸುತ್ತದೆ.
* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ : ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಿ, ಆರೋಗ್ಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುತ್ತದೆ.
* ಚರ್ಮದ ಆರೋಗ್ಯಕ್ಕೆ ಸಹಕಾರಿ : ಈರುಳ್ಳಿಯಲ್ಲಿರುವ ವಿಟಮಿನ್ ಸಿ ಮತ್ತು ಕೆ, ಹಾಗೂ ಜೀವಸತ್ವಗಳು ಪಿಗ್ಮೆಂಟೇಶನ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಿ ಚರ್ಮವನ್ನು ಆರೋಗ್ಯಯುತವಾಗಿರಿಸುತ್ತದೆ. ಕೆಲವರು ಚರ್ಮದ ಆರೋಗ್ಯವನ್ನು ಕಾಪಾಡಲು ಈರುಳ್ಳಿಯನ್ನು ಫೇಸ್ ಪ್ಯಾಕ್ ಆಗಿ ಬಳಸುತ್ತಾರೆ.
* ಕೂದಲಿನ ಆರೋಗ್ಯ ಕಾಪಾಡುತ್ತದೆ : ಈರುಳ್ಳಿ ನಿತ್ಯದ ಆಹಾರದಲ್ಲಿ ಬಳಸುವುದಲ್ಲದೆ ಹಸಿಯಾಗಿ ಸೇವನೆ ಮಾಡುವುದರಿಂದ ಕೂದಲಿನ ಆರೋಗ್ಯವು ಸುಧಾರಣೆಯಾಗುತ್ತದೆ. ಅದಲ್ಲದೇ ಹಸಿ ಈರುಳ್ಳಿಯ ರಸವನ್ನು ತಲೆಗೆ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆಗೆ ಮುಕ್ತಿ ಸಿಗುತ್ತದೆ.
* ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ : ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ನಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಕ್ಯಾನ್ಸರ್ ಸಂಬಂಧಿ ಆರೋಗ್ಯ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
* ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ : ಹಸಿ ಈರುಳ್ಳಿಯಲ್ಲಿ ಆಹಾರದ ನಾರಿನಾಂಶ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆ, ಮೂಲವ್ಯಾಧಿ ಸೇರಿದಂತೆ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ.