ಡೈಲಿ ವಾರ್ತೆ: 03/Feb/2024

ನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್ ನ 2024ನೇ ವಿದ್ಯಾರ್ಥಿ ವೇತನ ಕಾರ್ಯಕ್ರಮ

ಉಡುಪಿ: ನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್  ನ 2024ನೇ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಬನ್ನಂಜೆ ಬಿಲ್ಲವ ಸಂಘದ ಶಿವಗಿರಿ ಸಭಾಭವನದಲ್ಲಿ‌ ನಡೆಯಿತು.

ಕಾರ್ಯಕ್ರಮದಲ್ಲಿ ಸುಮಾರು 114 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ವೇತನವನ್ನು ವಿತರಿಸಲಾಯಿತು.ಈ ಸಂಧರ್ಭದಲ್ಲಿ ಸಂಪನ್ಮೋಲ ವ್ಯಕ್ತಿಯಾಗಿ  ಭಾಗವಹಿಸಿ ಮಾತನಾಡಿದ ಶಿಕ್ಷಕ  ದೀಪಕ್  ಕೆ ಬೀರಾ ,ಇಂದಿನ ವಿದ್ಯಾರ್ಥಿಗಳಲ್ಲಿ ಪುಸ್ತಕದ ಜ್ಞಾನ‌ ಇದೆ ಅದ್ರೆ..  ಸಾಮಾಜಿಕ‌ ಜ್ಞಾನದ ಕೊರತೆ ಇದೆ. ಹೆತ್ತವರು ಮಕ್ಕಳಲ್ಲಿ ಸಮಾನ್ಯ ಜ್ಞಾನ ಸಮಾಜಿಕ ಜ್ಞಾನ ಬೆಳೆಸುವ ಪ್ರಯತ್ನ ಮಾಡಬೇಕಾಗಿದೆ.

ಉಡುಪಿಯ ಬಿಲ್ಲವ ಸಂಘ ಹಲವಾರು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ.ವಿದ್ಯಾರ್ಥಿಗಳು ವಿದ್ಯೆಯ ಮೂಲಕ ಸಬಲೀಕರಣವಾಗಬೇಕು ಎನ್ನುವ ಆಶಯ ಸಂಘದ್ದಾಗಿದೆ,ನಾರಾಯಣ ಗುರು ಶ್ರೀ ಗಳ ಅದರ್ಶಗಳನ್ನು ನಾವು ಅಳವಡಿಸಕೊಳ್ಳಬೇಕು.ವಿದ್ಯಾರ್ಥಿ ವೇತನ ಗಳನ್ನು ಪಡೆದು ಕೊಂಡ ವಿದ್ಯಾರ್ಥಿ ಗಳು  ಇದರ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಉನ್ನತ ಹುದ್ದೆಗಳನ್ನು ಏರಬೇಕು,ಮತ್ತು ಸಂಘದ ಪರ ಅಭಿಮಾನವನ್ನಿಟ್ಟುಕೊಂಡು ಭವಿಷ್ಯದ  ದಿನದಲ್ಲಿ ಇನ್ನಷ್ಟು ಮಕ್ಕಳಿಗೆ ಸಹಾಯ ಮಾಡುವಂತೆ ನೀವು ಕೂಡ ಜೋಡಿಸುವಂತೆ ಕರೆ ನೀಡಿದರು.

ಈ‌ ಸಂಧರ್ಭದಲ್ಲಿ ದೀಪಕ್ ಕೆ ಬೀರಾ ರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಬನ್ನಂಜೆ ಬಿಲ್ಲವ ಸೇವಾ ಸಂಘ ಅಧ್ಯಕ್ಷರಾದ ಮಾಧವ ಬನ್ನಂಜೆ
ಗೌ ಪ್ರ ಕಾರ್ಯದರ್ಶಿ ಶಶಿಧರ ಎಂ ಅಮೀನ್ ,ಉಪಾಧ್ಯಕ್ಷರಾದ ಸದಾನಂದ ಪೂಜಾರಿ,ಕೋಶಾಧಿಕಾರಿ ಕೆ.ಗೋಪಾಲ ಪೂಜಾರಿ, ಸದಸ್ಯರುಗಳಾದ ಆನಂದ ಪೂಜಾರಿ, ನಾರಾಯಣ ಜತ್ತನ್,ಬಿ ಬಿ ಪೂಜಾರಿ,ಕೃಷ್ಣಪ್ಪ ಅಂಚನ್,ಉದಯ ಪೂಜಾರಿ, ಪೂರ್ಣಿಮಾ ಅಂಚನ್ ನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್ ಸದಸ್ಯರಾದ ಸದಾನಂದ ಅಮೀನ್,ಲಕ್ಷ್ಮಣ ಪೂಜಾರಿ, ದಯಾನಂದ ಬನ್ನಂಜೆ, ಪ್ರಭಾಕರ ಪೂಜಾರಿ ಉಪಸ್ಥಿತರಿದ್ದರು.
ಶಶಿಧರ್ ಎಂ ಅಮೀನ್ ಸ್ವಾಗತಿಸಿದರು.
ಪ್ರಸ್ತಾವನೆ ಮಾಧವ ಬನ್ನಂಜೆ ಧನ್ಯವಾದ ಸದಾನಂದ ಅಮೀನ್ ಸಲ್ಲಿಸಿದರು. ದಯಾನಂದ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.