



ಡೈಲಿ ವಾರ್ತೆ: 03/Feb/2024


ಉಕ್ಕುಡ : ಅಲ್ – ಮುರಾಫಖಃ 2024 ಅದ್ದೂರಿಯ ಚಾಲನೆ

ವಿಟ್ಲ: ಉಕ್ಕುಡ ಬದ್ರಿಯಾ ಜುಮಾ ಮಸೀದಿಯಲ್ಲಿ ಕಾರ್ಯಾಚರಿಸುತ್ತಿರುವ ಮುಹ್ಯಿಸ್ಸುನ್ನ ದರ್ಸ್ ಕಲಾ ಸಾಹಿತ್ಯ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ ಧ್ವಜಾರೋಹಣ ಮೂಲಕ ಉದ್ಘಾಟಿಸಲಾಯಿತು.
“ಭವಿಷ್ಯದ ಭರವಸೆ” ಎಂಬ ಶೀರ್ಷಿಕೆ ಅಡಿಯಲ್ಲಿ ಮೂರು ದಿನಗಳಿಂದ ವಿವಿಧ ಮೂರು ವಿಭಾಗಗಳಾಗಿ ನೂರೈವತ್ತಕ್ಕೂ ಮಿಕ್ಕ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆಗಳು ಬಹಳ ಆಕರ್ಷಣೀಯ ರೀತಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಸಯ್ಯಿದ್ ಆಟ ಕೋಯ ತಂಙಳ್ ಕುಂಬೊಳ್ ಹಾಗೂ ಕೇರಳದ ಪ್ರತಿಷ್ಠಿತ ವಿದ್ಯಾಸಂಸ್ಥೆ ಜಾಮಿಅಃ ಹಿಕಮಿಯ್ಯದ ಸಾರಥಿ ಶೈಖುನಾ ಮುಹ್ಯಿಸುನ್ನಃ ಪೊನ್ಮಳ ಉಸ್ತಾದರು ಕಾರ್ಯಕ್ರಮದ ಫೆಬ್ರವರಿ 4 ರಂದು ಆಗಮಿಸಲಿದ್ದಾರೆ.
ಕಾರ್ಯಕ್ರಮ ಅಂಗವಾಗಿ ಖಬರ್ ಝಿಯಾರತ್, ಬೃಹತ್ ಖತ್ಮುಲ್ ಖುರ್‌ಆನ್, ಬದ್ರಿಯತ್ ವಾರ್ಷಿಕ, ಬುರ್ದಾ ವಾರ್ಷಿಕ, ಬಿರುದುದಾರಿಗಳಿಗೆ ಸನ್ಮಾನ, ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳುವ ಮುತಅಲ್ಲಿಮರಿಗೆ ಬೀಳ್ಕೊಡುಗೆ ಸಮಾರಂಭ, ಪೂರ್ವ ವಿದ್ಯಾರ್ಥಿ ಸಂಗಮ ನೆರವೇರಲಿದೆ.
ಹಾಫಿಲ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್ ಹಿಕಮಿಯವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್, ಬದ್ರಿಯಾ ಜುಮಾ ಮಸೀದಿ ಕಮಿಟಿ ಅಧ್ಯಕ್ಷರಾದ ಅಬ್ಬಾಸ್ ಟಿ.ಎಚ್.ಎಂ.ಎ, ಕಾರ್ಯದರ್ಶಿ ಯು. ಶರೀಫ್, ಜಲಾಲಿಯ್ಯ ಕಮೀಟಿ ಅಧ್ಯಕ್ಷ ಹೈದರ್ ಉಕ್ಕುಡ, ಸ್ಥಳೀಯ ಸದರ್ ಮುಅಲ್ಲಿಮರಾದ ಆಶ್ರಫ್ ಸಖಾಫಿ ಮುಅಲ್ಲಿಮರಾದ ಬಶೀರ್ ಮುಸ್ಲಿಯಾರ್, ಹಮೀದ್ ಮದನಿ, ಸ್ವಲಾತ್ ಕಮೀಟಿ ಅಧ್ಯಕ್ಷ ಮುನೀರ್ ದರ್ಬೆ, ಹಿರಿಯರಾದ ಹಮೀದ್ ಕೆ ಎಸ್, ಅಬ್ದುರ್ರಹ್ಮಾನ್ ದರ್ಬೆ, ಅಬೂಬಕ್ಕರ್ ಟೆಲಿಪೋನ್, ಶರೀಫ್ ಫಿಶ್, ಇಕ್ಬಾಲ್ ಉಕ್ಕುಡ, ಗ್ರೀನ್ ಮಸೀದಿ ಕುಂದಾಪುರದ ಖತೀಬ್ ಇಸ್ಮಾಯಿಲ್ ಸಖಾಫಿ ಕೋಡಿ, ಕಡಬಕೆರೆ ಮುದರ್ರಿಸ್ ಫಾರುಕ್ ಸಖಾಫಿ, ಕೊಪ್ಪ ಖತೀಬ್ ಅನ್ಸಾರ್ ಸಖಾಫಿ, ಸಂಘಟನೆ ನಾಯಕರಾದ ಫಹದ್ ಫಾಳಿಲಿ ಕಾರ್ಕಳ , ಮುಹಮ್ಮದ್ ಮುಸ್ಲಿಯಾರ್ ಮಳಲಿ ಹಾಗೂ ಹಿದಾಯ ಫ್ರೆಂಡ್ಸ್ ಸದಸ್ಯರು,ಮುಂತಾದ ಹಲವಾರು ಉಲಮಾ, ಉಮರಾ, ನೇತಾರರು ಉಪಸ್ಥಿತರಿದ್ದರು.