ಡೈಲಿ ವಾರ್ತೆ: 05/Feb/2024
ದೈಹಿಕ,ಮಾನಸಿಕ ಸದೃಡತೆಗೆ ಕ್ರೀಡಾಕೂಟ ಅವಶ್ಯ. ಯಾಸಿರ್ ಕೆ.ಎಸ್
ಡೈಲಿ ವಾರ್ತೆ: 05/Feb/2024
ದೈಹಿಕ,ಮಾನಸಿಕ ಸದೃಡತೆಗೆ ಕ್ರೀಡಾಕೂಟ ಅವಶ್ಯ. ಯಾಸಿರ್ ಕೆ.ಎಸ್
ಬಂಟ್ವಾಳ : ದೇಹ ಮತ್ತು ಮನಸ್ಸನ್ನು ಸದೃಡವಾಗಿ ಇಟ್ಟುಕೊಳ್ಳುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಕ್ರೀಡಾಕೂಟ ಅವಶ್ಯ ಎಂದು ಕಲ್ಲಡ್ಕ ಮ್ಯೂಸಿಯಂ ನ ಸಂಸ್ಥಾಪಕ , ಕ್ರೀಡಾಪಟು ಕೆ.ಎಸ್.ಯಾಸೀರ್ ಅಭಿಪ್ರಾಯಪಟ್ಟರು.
ಅವರು ಸಮನ್ವಯ ಶಿಕ್ಷಕರ ಸಂಘ ಬಂಟ್ವಾಳ ಘಟಕದ ವತಿಯಿಂದ ಮಾರ್ನಬೈಲಿನ ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಲಾದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಶಿಕ್ಷಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿವಿಧ ಹಂತಗಳ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕ ಶಿಕ್ಷಕಿಯರು ಯಾವುದೇ ಪದವಿ ಅಥವಾ ಹುದ್ದೆಗಳ ತಾರತಮ್ಯ ಇಲ್ಲದೆ ಒಂದೆಡೆ ಸೇರಿ ವಿವಿಧ ಸ್ಪರ್ಧೆಗಳನ್ನು ಕ್ರೀಡಾ ಸ್ಫೂರ್ತಿಯಿಂದ ಆಯೋಜನೆ ಮಾಡಿರುವುದಕ್ಕೆ ಅವರು ಈ ಸಂದರ್ಭದಲ್ಲಿ ಆಯೋಜಕರನ್ನು ಅಭಿನಂದಿಸಿದರು.
ಸಮನ್ವಯ ಶಿಕ್ಷಕರ ಸಂಘದ ಬಂಟ್ವಾಳ ಘಟಕಾಧ್ಯಕ್ಷ ಮೊಹಮ್ಮದ್ ಮನಾಝಿರ್ ಮುಡಿಪು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಎಸ್, ನಿವೃತ್ತ ಶಿಕ್ಷಕ ಹೈದರ್ ಪಡಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಶಿಕ್ಷಕರಾದ ಅಬ್ದುಲ್ ರಝಾಕ್ ಅನಂತಾಡಿ, ಬಿ.ಎಂ.ತುಂಬೆ, ಫಕ್ರುದ್ದೀನ್, ಅಬ್ದುಲ್ ಹಮೀದ್, ಸಮೀಯುಲ್ಲಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಅಬ್ದುಲ್ ಸಲಾಂ ಕಿರಾತ್ ಪಠಿಸಿದರು. ಕಾರ್ಯದರ್ಶಿ ಮೊಹಮ್ಮದ್ ಇರ್ಷಾದ್ ಮೆಲ್ಕಾರ್ ಸ್ವಾಗತಿಸಿದರು. ಕೋಶಾಧಿಕಾರಿ ಸಲೀಂ ಇಬ್ರಾಹಿಂ ಆಲಡ್ಕ ವಂದಿಸಿದರು. ಮೊಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು.