



ಡೈಲಿ ವಾರ್ತೆ: 07/Feb/2024


ಪ್ರವಾಸಕ್ಕೆಂದು ಬಂದಿದ್ದ ಜಪಾನ್ ಮೂಲದ ಮಹಿಳೆ ಗೋಕರ್ಣದಲ್ಲಿ ನಾಪತ್ತೆ
ಕಾರವಾರ: ಪ್ರವಾಸಕ್ಕೆಂದು ಆಗಮಿಸಿದ್ದ ಜಪಾನ್ ಮೂಲದ ಮಹಿಳೆ ನಾಪತ್ತೆಯಾದ ಘಟನೆ ಗೋಕರ್ಣದಲ್ಲಿ ನಡೆದಿದೆ.
ಎಮಿ ಯಮಾಝಕಿ (40) ನಾಪತ್ತೆಯಾದ ಜಪಾನ್ ಮೂಲದ ಮಹಿಳೆ. ಫೆಬ್ರವರಿ 05 ರಂದು ಮಹಿಳೆ ತನ್ನ ಪತಿಯೊಂದಿಗೆ ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕ್ಯಾಂಪಸ್‌ನಲ್ಲಿ ತಂಗಿದ್ದರು. ಮರುದಿನ ಮುಂಜಾನೆ 10:30ರ ಸುಮಾರಿಗೆ ನೇಚರ್ ಕ್ಯಾಂಪಸ್‌ನಿಂದ ಹೊರಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ.