ಡೈಲಿ ವಾರ್ತೆ: 03/Mar/2024
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ. ಕುಂದಾಪುರ.
ಮೊಳಹಳ್ಳಿ ಕರಗುಡಿ: ಶ್ರೀವರ ಬ್ರಹ್ಮ, ಶ್ರೀ ಸ್ವರ್ಣ ಯಕ್ಷಿ, ಶ್ರೀ ನಾಗ ದೇವತೆ ಮತ್ತು, ಸಹ ಪರಿವಾರ ದೇವರುಗಳ ವಾರ್ಷಿಕ ಹಾಲು ಹಬ್ಬ ಸೇವೆ ಸಂಪನ್ನ
ಧಾರ್ಮಿಕ ಮೌಲ್ಯಗಳು ಇಂತಹ ದೇವಸ್ಥಾನಗಳಿಂದ ಮಾತ್ರ ಉಳಿಯಲು ಸಾಧ್ಯ, ಅಂತಹ ಚಿಂತನೆಗಳು ಸದೃಢ ಮನಸ್ಸುಗಳಲ್ಲಿ ಬೆಳೆಯಲು, ಈ ನಿಟ್ಟಿನಲ್ಲಿ ಧಾರ್ಮಿಕತೆಯ ಶಕ್ತಿ ಇಂತಹ ಶ್ರದ್ಧಾ ಕೇಂದ್ರಗಳಿಂದ ಹೊರ ಬರುವುದು ಅತ್ಯಗತ್ಯ, ಇಂತಹ ಶಕ್ತಿಶಾಲಿ ದೇಗುಲಗಳ ದರ್ಶನ ಪಡೆಯುವಂತದ್ದು ನಮ್ಮ ಪುಣ್ಯ ಎನ್ನುವುದೇ ನೆನಪಾಗುತ್ತಿದೆ. ಪ್ರತಿಯೊಬ್ಬರಲ್ಲಿ ಧಾರ್ಮಿಕತೆಯ ಒಲವು ಮೂಡುವುದು ಇಂದಿನ ಸಮಾಜಕ್ಕೆ ಪ್ರಸ್ತುತ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೆಬ್ರಿ ಬಂಟರ ಸಂಘದ ಉಪಾಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಬಿಜೆಪಿ ವಕ್ತಾರರಾದ ಮುಟ್ಲು ಪಾಡಿ ಸತೀಶ್ ಶೆಟ್ಟಿ ಅವರು ತಮ್ಮ ಅಭಿಪ್ರಾಯದಲ್ಲಿ ಹೇಳಿದರು.ಕಾರ್ಯಕ್ರಮ ದಲ್ಲಿ ಹೋರಾಟಗಾರ ಅಣ್ಣಪ್ಪ ಕುಲಾಲ್ ಮಂಡಾಡಿ ಜಡ್ಡು, ಹಾಗೂ ಪಬ್ಲಿಕ್ ಫೈಲ್ ಪತ್ರಿಕೆಯ ಸಂಪಾದಕರಾದ ಎಂ.ಎನ್ ಕೊಟ್ಟಾರಿ, ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳ್ತೂರು, ಮೊಳಹಳ್ಳಿ ಶಾಲೆಯ ಹಿರಿಯ ಶಿಕ್ಷಕಿ ಶೋಭಾ ಸಿ. ಶೆಟ್ಟಿ, ಪಬ್ಲಿಕ್ ಫೈಲ್ ಪತ್ರಿಕೆಯ ಹೆಬ್ರಿ ವರದಿಗಾರರಾದ ಪ್ರವೀಣ್ ಸೂಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅದೇ ರೀತಿ ವರ್ಷಂ ಪ್ರತಿ ನಡೆಯುವ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಫೆಬ್ರವರಿ 28 ಮತ್ತು 29 ರಂದು ನಡೆಯಿತು.
ವರ್ಷಂ ಪ್ರತಿ ಅಂತೆ ನಡೆಯುವ ಜಾತ್ರಾ(ಹಾಲು ಹಬ್ಬ ) ಧಾರ್ಮಿಕ ಕಾರ್ಯಕ್ರಮ ಈ ಬಾರಿ ಫೆಬ್ರವರಿ 28/02/2024 ಬುಧವಾರ ಮತ್ತು 29/02/2024 ಗುರುವಾರ ರಂದು ವಿಜೃಂಭಣೆಯಿಂದ ಜರುಗುವುದರೊಂದಿಗೆ ಧಾರ್ಮಿಕ ಸಭಾ ಕಾರ್ಯಕ್ರಮವು ವಿಶೇಷವಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ದೇಗುಲಕ್ಕೆ ವಿಶೇಷವಾಗಿ ಸೇವ ನೀಡಿದ ಕುಟುಂಬಸ್ಥರಿಗೆ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ, ಅಭಿನಂದಿಸಲಾಯಿತು.
ಅದೇ ರೀತಿ ದಿನಾಂಕ 28/02/2024 ಬೆಳಿಗ್ಗೆ ರಂದು ದೇಗುಲದ ಆವರಣದಲ್ಲಿ ಶ್ರೀ ವರ ಬ್ರಹ್ಮ ಮತ್ತು ನಾಗದೇವತೆಗೆ ಕಲಾ ಹೋಮ ಸೇವೆ. ಅದೇ ದಿನ ಮಧ್ಯಾಹ್ನ ಶ್ರೀ ಸ್ವರ್ಣ ಯಕ್ಷಿ ಮತ್ತು ಸಹ ಪರಿವಾರ ದೇವರುಗಳಿಗೆ ಕಲಾ ಹೋಮ ಪೂಜಾ ಕಾರ್ಯಕ್ರಮ ಪುರೋಹಿತರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು . ಈ ಬಾರಿ ಪಬ್ಲಿಕ್ ಫೈಲ್ ಕನ್ನಡ ಪಕ್ಷಿಕ ಪತ್ರಿಕೆಯ ಆಡಳಿತ ಮಂಡಳಿಯ ಸಮಸ್ತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ದೇಗುಲದಲ್ಲಿ ಗೆಂಡ ಸೇವೆ, ಅನ್ನದಾನ, ವಾರ್ಷಿಕ ಪೂಜಾ ವಿಧಿ ವಿಧಾನಗಳು ನಡೆಯಿತು ಪೂಜಾ ಕಾರ್ಯಕ್ರಮ, ವಿವಿಧ ಸ ಪರಿವಾರ ದೇವರುಗಳಿಗೆ ಪೂಜೆ, ದೇವರುಗಳಿಗೆ ಮಹಾಪೂಜೆ, ಹಣ್ಣು ಕಾಯಿ ಪ್ರಸಾದ ವಿನಿಯೋಗ ಹಾಗೂ ಧಾರ್ಮಿಕ ವಿಧಿ ವಿಧಾನದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು ಹಾಗೂ 29ರ ಬೆಳಿಗ್ಗೆ 8.00 ಗಂಟೆಗೆ ವರ್ಷಾ ಪ್ರತಿಯಂತೆ ನಡೆಯುವ ಡಮರುಗ ಸೇವೆ( ಡಕ್ಕೆ ಬಲಿ ), ಹರಿಕೆಯಂತೆ ನಡೆಯುವ ತುಲಾಭಾರ ಸೇವೆ, ಹಣ್ಣು ಕಾಯಿ ಸಮರ್ಪಣೆ, ದರ್ಶನ, ನಡೆಯಲಿದೆ. ಎಲ್ಲಾ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಂತರ ಕೊನೆಯದಾಗಿ ಕೋಳಿ ಬಲಿಕೊಡುವಂತಹ ಸೇವೆ ವರ್ಷಂ ಪ್ರತಿಯಂತೆ ದೇಗುಲದ ಹೊರಭಾಗದಲ್ಲಿ ನಡೆಯಿತು. ಈ ವರ್ಷದ ಹಾಲು ಹಬ್ಬದ ನಂತರ (2024) ದೇಗುಲದ ಪೂಜಾ ಉಸ್ತುವಾರಿಯನ್ನು ಅರ್ಚಕರಾದ ಶಿವರಾಮ ವಹಿಸಿಕೊಂಡಿರುತ್ತಾರೆ.
ಪ್ರಸ್ತುತ ಅರ್ಚಕರಾದ ಶ್ರೀಧರ ಉಡುಪ, ಹಾಗೂ ಅರ್ಚಕರ ಕುಟುಂಬಸ್ಥರು, ನಂಬಿದಂತಹ ಭಕ್ತಾಭಿಮಾನಿಗಳು, ಊರವರು ಪರ ಊರ ಭಕ್ತಾಭಿಮಾನಿಗಳು, ಹಿರಿಯವರು ಹಾಗೂ ಸಂಬಂಧಪಟ್ಟಂತಹ ದೇಗುಲದ ಕುಟುಂಬಸ್ಥರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ದೇಗುಲದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪತ್ರಕರ್ತರಾದ ಕೆ. ಸಂತೋಷ ಶೆಟ್ಟಿ ಮೊಳಹಳ್ಳಿ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.