ಡೈಲಿ ವಾರ್ತೆ: 04/Mar/2024

ವರದಿ: ವಿದ್ಯಾಧರ ಮೊರಬಾ

ಬೇಲೇಕೇರಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಬೋಟ್ ಮುಳುಗಡೆ – ಕೋಟ್ಯಾಂತರ ರೂ. ನಷ್ಟ, ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆ

ಅಂಕೋಲಾ : ತಾಲೂಕಿನ ಬೇಲೇಕೇರಿ ಸಮೀಪದ ಸಮುದ್ರದಲ್ಲಿ ಕುಕ್ಕಡ ಗುಡ್ಡದ ಹತ್ತಿರ ಬೋಟ್‍ವೊಂದು ಗಾಳಿಯ ರಭಸಕ್ಕೆ ಮುಳುಗಿದ ಪರಿಣಾಮವಾಗಿ ಕೋಟ್ಯಾಂತರ ರೂಪಾಯ ಹಾನಿಯಾಗಿರುವ ಕುರಿತು ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ಸಲ್ಲಿಕೆಯಾಗಿದೆ.

ತಾಲೂಕಿನ ಹಾರವಾಡ ಸೀರ್ಬಡ್ ಕಾಲೋನಿಯ ಇಂದು ಚಂದ್ರು ತಾಂಡೇಲ ಇವರ ಮಾಲಿಕತ್ವದ ಓಂ ನಮಃ ಶಿವಾಯ ಹೆಸರಿನ ಪರ್ಶಿಯನ್ ಬೋಟ್ ಸೋಮವಾರ ಬೆಳಗಿನ ಜಾವದಲ್ಲಿ ಕುಕ್ಕಡ ಗುಡ್ಡದ ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಬೋಟ್ ಎಂಜಿನ ಬಂದ್‍ಬಿದ್ದು ಗಾಳಿಯ ರಭಸಕ್ಕೆ ಬೋಟ್ ಮುಳುಗಿದೆ. ಪರಿಣಾಮ ಬೋಟ್‍ನಲ್ಲಿರುವ 1.19 ಕೋಟಿ ರೂ. ಮೌಲ್ಯದ ವಿವಿಧ ಪರಿಕರಗಳು ಸೇರಿದಂತೆ ಹಾನಿಯಾಗಿದೆ ಎಂದು ಹಾರವಾಡ ಸೀಬರ್ಡ್ ಕಾಲೋನಿಯ ನಿವಾಸಿ ದೀಪಕ ಚಂದ್ರು ತಾಂಡೇಲ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸ್ ಮಹಿಳಾ ಸಿಬ್ಬಂದಿ ಪದ್ಮಾ ವಿ. ಗಾಂವಕರ ದೂರು ಸ್ವೀಕರಿಸಿದ್ದಾರೆ.