ಡೈಲಿ ವಾರ್ತೆ: 04/Mar/2024

ವೀರಕಂಭ – ಮಜಿ ಸರಕಾರಿ ಪ್ರಾಥಮಿಕ ಶಾಲೆಗೆ ಕಲ್ಕಡ್ಕ ಮ್ಯೂಸಿಯಂ ನ ಯಾಶೀರ್ ಕಲ್ಲಡ್ಕ ಅವರಿಂದ ಸ್ಮಾರ್ಟ್ ಟಿವಿ ಹಸ್ತಾಂತರ

ಬಂಟ್ವಾಳ : ತಾಲೂಕಿನ ಕಲ್ಲಡ್ಕ ಸಮೀಪದ ವೀರಕಂಭ -ಮಜಿ ಸರಕಾರಿ ಪ್ರಾಥಮಿಕ ಶಾಲೆಗೆ ಕಲ್ಕಡ್ಕ ಮ್ಯೂಸಿಯಂ ನ ಯಾಶೀರ್ ಕಲ್ಲಡ್ಕ ಅವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಟಿವಿ ಯನ್ನು ಶಾಲೆಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭ ಅವರನ್ನು ಶಾಲಾ ವತಿಯಿಂದ ಅಭಿನಂಧಿಸಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್.ಜಿ. ಮಾತನಾಡಿ ಯಾವುದೇ ಅಭಿಲಾಷೆ ಇಲ್ಲದೆ ವಿದ್ಯೆಗೆ ಮಾಡುವ ಸಹಾಯ ದೇವರು ಮೆಚ್ಚುತ್ತಾನೆ. ಅದೇ ರೀತಿ ಮಾಡಿದ ಸಹಾಯವನ್ನು ಹೇಳಿಕೊಳ್ಳದೆ ಎಲೆ ಮರೆಯ ಕಾಯಿಯಾಗಿ ಸದಾ ಹಲವಾರು ಕೆಲಸ ಕಾರ್ಯಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿರುವವರು ಕಲ್ಲಡ್ಕ ಮ್ಯೂಸಿಯಂ ಮಾಲಕ ಯಾಶೀರ್ ಕಲ್ಲಡ್ಕ ಅವರು ಒಂದು ಉತ್ತಮ ಉದಾಹರಣೆ. ತನ್ನ ವಿಶಿಷ್ಟವಾದ ಸಂಗ್ರಹಣಾ ಕಲೆಯಿಂದ ಪ್ರಖ್ಯಾತಿ ಪಡೆದಿರುವ ಇವರು ಮಕ್ಕಳ ವಿದ್ಯಾಭ್ಯಾಸಕ್ಕೆ ಏನಾದರೂ ಸಹಾಯ ಮಾಡಬೇಕು ಎನ್ನುವ ಇವರ ಅಭಿಲಾಷೆಯು ಮೆಚ್ಚುವಂತದ್ದು ಎಂದರು.

ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ಲಲಿತಾ, ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಶಾಲಾಭಿವೃಡಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ್, ವಿಟ್ಲ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೂಪಕಲಾ, ಕಲ್ಲಡ್ಕ ಕ್ಲಸ್ಟರ್ ಸಿ.ಅರ್.ಪಿ ಜ್ಯೋತಿ, ಗೋಳ್ತಮಜಲು ಸರಕಾರಿ ಪ್ರೌಢಶಾಲಾ ಶಿಕ್ಷಕ ಸತ್ಯಶಂಕರ್ ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಬೆನಡಿಕ್ಟಾ ಸ್ವಾಗತಿಸಿ, ಸಹ ಶಿಕ್ಷಕಿ ಸಂಗೀತ ಶರ್ಮ ಪಿ.ಜಿ ವಂದಿಸಿದರು.