ಡೈಲಿ ವಾರ್ತೆ: 06/Mar/2024

ಲೋಕಸಭಾ ಚುನಾವಣೆ: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ

ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾಗಲು ಇನ್ನೇನು ಕೆಲವೇ ದಿನ ಬಾಕಿ ಇದೆ. ಈಗಾಗಲೇ ಬಿಜೆಪಿ ಪ್ರಮುಖ 195 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈಗ ಕಾಂಗ್ರೆಸ್ ಸಹ ಮೊದಲನೇ ಪಟ್ಟಿಯಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಗುರುವಾರ ಮತ್ತು ಶುಕ್ರವಾರ ದೆಹಲಿಯಲ್ಲಿ ಮಹತ್ವದ ಸಭೆಯನ್ನು ಕಾಂಗ್ರೆಸ್ ನಡೆಸಲಿದೆ.

ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಯಂ ಡಿ ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖರು ಭಾಗಿಯಾದಲಿದ್ದಾರೆ.
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

ಬೆಂಗಳೂರು ಗ್ರಾಮಾಂತರ: ಡಿ.ಕೆ. ಸುರೇಶ್
ತುಮಕೂರು: ಮುದ್ದಹನುಮೇಗೌಡ
ಮಂಡ್ಯ: ಸ್ಟಾ‌ರ್ ಚಂದ್ರು
ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ
ಕೋಲಾರ: ಕೆ.ಎಚ್.ಮುನಿಯಪ್ಪ
ಬೆಂಗಳೂರು ಸೆಂಟ್ರಲ್:ಎನ್ ಐ ಹ್ಯಾರಿಸ್
ಬೆಂಗಳೂರು ಉತ್ತರ: ಡಾ. ಸುಧಾಕರ್ (ಕಾಂಗ್ರೆಸ್‌ಗೆ ಬಂದರೆ)
ಬೆಂಗಳೂರು ದಕ್ಷಿಣ: ಸೌಮ್ಯ ರೆಡ್ಡಿ
ಉತ್ತರ ಕನ್ನಡ: ಶಿವರಾಮ್ ಹೆಬ್ಬಾರ್/ ಕಾಂಗ್ರೆಸ್‌ ಗೆ ಬಂದರೆ) ಅಥವಾ ಅಂಜಲಿ ನಿಂಬಾಲ್ಕರ್
ಚಾಮರಾಜನಗರ: H.C ಮಹದೇವಪ್ಪ ಅಥವಾ ಸುನೀಲ್ ಬೋಸ್
ಹಾಸನ: ಶ್ರೇಯಸ್‌ ಪಟೇಲ್
ಉಡುಪಿ-ಚಿಕ್ಕಮಗಳೂರು: ಜಯಪ್ರಕಾಶ ಹೆಗ್ಡೆ
ಶಿವಮೊಗ್ಗ: ಗೀತಾ ಶಿವರಾಜಕುಮಾರ್
ದಾವಣಗೆರೆ: ಪ್ರಭಾ ಮಲ್ಲಿಕಾರ್ಜುನ್ ಅಥವಾ ವಿನಯ್ ಕುಮಾರ್
ಚಿತ್ರದುರ್ಗ: ಬಿ.ಎನ್.ಚಂದ್ರಪ್ಪ
ಹಾವೇರಿ: ಡಿ.ಆ‌ರ್.ಪಾಟೀಲ್ ಅಥವಾ ಸಲೀಂ ಅಹಮದ್
ವಿಜಯಪುರ: ರಾಜು ಆಲಗೂರು
ಬೀದ‌ರ್: ರಾಜಶೇಖರ ಪಾಟೀಲ್
ಬಳ್ಳಾರಿ: ಸಚಿವತುಕರಾಂ ಪುತ್ರಿ ಚೈತನ್ಯ
ಬಾಗಲಕೋಟೆ: ಆನಂದ್ ನ್ಯಾಮಗೌಡ ಅಥವಾ ವೀಣಾ ಕಾಶಪ್ಪನವರ್ ಅಥವಾ ಸಂಯುಕ್ತಾ
ದಕ್ಷಿಣ ಕನ್ನಡ: ವಿನಯ ಕುಮಾರ್ ಸೊರಕೆ
ರಾಯಚೂರ: ಕುಮಾ‌ರ್ ನಾಯ್
ಕಲಬುರಗಿ: ರಾಧಕೃಷ್ಣ
ಕೊಪ್ಪಳ: ಅಮರೇಗೌಡ ಬಯ್ಯಾಪುರ ಅಥವಾ ರಾಜಶೇಖರ್ ಹಿಟ್ನಾಳ್
ಮೈಸೂರು – ಕೊಡಗು: ಎಂ. ಲಕ್ಷ್ಮಣ
ಬೆಳಗಾವಿ: ಸತೀಶ್ ಜಾರಕಿಹೊಳಿ ಅಥವಾ ಅವರ ಮಗಳು ಪ್ರಿಯಾಂಕಾ ಜಾರಕಿಹೊಳಿ
ಚಿಕ್ಕೋಡಿ: ಅಂತಿಮವಾಗಿಲ್ಲ
ಧಾರವಾಡ: ರಜತ್ ಉಳ್ಳಾಗಡ್ಡಿ ಮಠ (ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ)