ಡೈಲಿ ವಾರ್ತೆ: 12/Mar/2024
ಹೀರೆಕಾಯಿ ತಿನ್ನುವುದರಿಂದ ಅರೋಗ್ಯಕ್ಕಾಗುವ ಪ್ರಯೋಜನಗಳು
ಹೀರೇಕಾಯಿಂದ ತಯಾರು ಮಾಡುವ ಚಟ್ನಿ, ಸಾಂಬಾರ್, ಬಜ್ಜಿ, ಪಕೋಡ ಎಲ್ಲವೂ ಬಾಯಿಯಲ್ಲಿ ನೀರೂರಿಸುತ್ತದೆ. ಯಾವುದೇ ಮದುವೆ ಮನೆಗಳಿಗೆ ಹೋದರೆ ಅಲ್ಲಿನ ಸಾಂಬಾರ್ ಗಳಿಗೆ ಹೀರೆಕಾಯಿ ಇಲ್ಲದೆ ಅಡಿಗೆ ಮಾಡಿರುವುದಿಲ್ಲ.
ಹೀರೆಕಾಯಿ ನೋಡಲು ಸ್ವಲ್ಪ ಮೇಲ್ಭಾಗದಲ್ಲಿ ಮೆತ್ತನೆಯ ಮುಳ್ಳಿನ ಆಕಾರವಿದ್ದರೂ ಕೂಡ, ಹೀರೆಕಾಯಿಯ ಒಳ ಭಾಗ ಬೇಯಿಸಿ ತಿನ್ನುವುದರಲ್ಲಿ ತುಂಬಾ ಒಳ್ಳೆಯ ರುಚಿ ಕೊಡುತ್ತದೆ.
ಹೀರೆಕಾಯಿಯ ಆರೋಗ್ಯ ಪ್ರಯೋಜನಗಳು ಕೂಡ ಇತರ ತರಕಾರಿಗಳಿಗೆ ಸರಿಸಾಟಿಯಾಗಿ ನಮ್ಮ ಆರೋಗ್ಯವನ್ನು ಕಾಪಾಡಬಲ್ಲ ಶಕ್ತಿ ಪಡೆದಿವೆ.
ಹಿರೇಕಾಯಿಯ ಪ್ರಯೋಜನಗಳು:
ನಾವು ಮಧ್ಯಾಹ್ನದ ಸಮಯದಲ್ಲಿ ಆಹಾರ ತಯಾರಿಕೆಯಲ್ಲಿ ಬಳಸುವ ಹಲವಾರು ತರಕಾರಿಗಳ ಆರೋಗ್ಯ ಪ್ರಯೋಜನಗಳು ನಮಗೆ ಕೆಲವೊಮ್ಮೆ ಗೊತ್ತೇ ಇರುವುದಿಲ್ಲ. ಆದರೂ ಕೂಡ ಆರಾಮವಾಗಿ ಟಿವಿ ನೋಡುತ್ತಾ ಕುಳಿತು ತಿನ್ನುತ್ತೇವೆ.
ತರಕಾರಿಗಳು ನಮ್ಮ ದೇಹ ಸೇರಿದ ಮೇಲೆ ತಮ್ಮ ಸಕಾರಾತ್ಮಕ ಪ್ರಭಾವಗಳನ್ನು ಉಂಟು ಮಾಡಲು ಪ್ರಾರಂಭ ಮಾಡುತ್ತವೆ. ಹೀರೆಕಾಯಿಯ ವಿಚಾರದಲ್ಲೂ ಕೂಡ ಇದೇ ರೀತಿ ಆಗಿ ನಮಗೆ ಸಾಕಷ್ಟು ಲಾಭಗಳು ಸಿಗುತ್ತವೆ. ಈ ಲೇಖನದಲ್ಲಿ ನಮಗೆ ನಿಮಗೆ ಗೊತ್ತಿಲ್ಲದ ಹಿರೇಕಾಯಿಯ ಆರೋಗ್ಯ ಲಾಭಗಳನ್ನು ಒಂದೊಂದಾಗಿ ತಿಳಿಸಲಾಗಿದೆ.
ಹೀರೆಕಾಯಿ ಬಳ್ಳಿಯ ನಿರ್ವಹಣೆ
ಕಣ್ಣಿನ ದೃಷ್ಟಿ ವೃದ್ಧಿಯಾಗುತ್ತದೆ:
ಹೀರೆಕಾಯಿಯಲ್ಲಿ ವಿಟಮಿನ್ ‘ ಎ ‘ ಅಂಶ ಗಣನೀಯ ಪ್ರಮಾಣದಲ್ಲಿ ಹೇರಳವಾಗಿದ್ದು, ಕಣ್ಣಿನ ದೃಷ್ಟಿಗೆ ತುಂಬಾ ಸಹಕಾರಿಯಾಗಿ ಇದೆಯೆಂದು ಸ್ವತಃ ಕಣ್ಣಿನ ತಜ್ಞರೇ ಹೇಳುತ್ತಾರೆ.
ಮುಖ್ಯವಾಗಿ ವಯಸ್ಸಾದವರಲ್ಲಿ ಎದುರಾಗುವ ಕಣ್ಣಿನ ಪೊರೆ ಸಮಸ್ಯೆಯನ್ನು ಹೀರೆಕಾಯಿಯಲ್ಲಿರುವ ಬೀಟಾ – ಕ್ಯಾರೋಟಿನ್ ಎಂಬ ವಿಟಮಿನ್ ‘ ಎ ‘ ಅಂಶದ ರೂಪ ಸರಿ ಪಡಿಸುತ್ತದೆ. ಇದರ ಜೊತೆಗೆ ಕಣ್ಣಿನ ಹಲವು ಸಮಸ್ಯೆಗಳನ್ನು ಹೀರೆಕಾಯಿ ಯಲ್ಲಿರುವ ಔಷಧೀಯ ಪರಿಣಾಮಗಳು ಸರಿ ಮಾಡುತ್ತವೆ.
ಹೀರೆಕಾಯಿ ಒಂದು ಆಂಟಿ – ಆಕ್ಸಿಡೆಂಟ್ ಕೂಡ ಆಗಿದ್ದು, ಇದರಲ್ಲಿರುವ ಬೀಟಾ – ಕ್ಯಾರೋಟಿನ್ ಅಂಶ ಕಣ್ಣಿನ ನರಗಳನ್ನು ಮತ್ತು ಕಣ್ಣಿಗೆ ಸಂಪರ್ಕ ಮಾಡುವ ರಕ್ತ ನಾಳಗಳನ್ನು ಯಾವುದೇ ವಿಷಕಾರಿ ಅಂಶಗಳಿಂದ ಪ್ರಭಾವಿತ ಆಗದಂತೆ ನೋಡಿಕೊಂಡು ಫ್ರೀ ರಾಡಿಕಲ್ ಗಳ ಹಾನಿಯಿಂದ ಕಣ್ಣುಗಳ ರಕ್ಷಣೆ ಮಾಡುತ್ತವೆ.
ಅನಿಮಿಯ ಸಮಸ್ಯೆಗೆ ರಾಮಬಾಣ:
ಹೀರೆಕಾಯಿಯಲ್ಲಿ ಕಬ್ಬಿಣದ ಅಂಶ ಸಾಕಷ್ಟಿದೆ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನೀವು ಪ್ರತಿ ದಿನ ಸಾಂಬಾರ್ ಅಥವಾ ಸಾಗು ತಯಾರು ಮಾಡುವ ನೆಪದಲ್ಲಿ ಬಳಸಬಹುದು. ನೀವು ಇಡೀ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ದೇಹದಲ್ಲಿನ ಕಬ್ಬಿಣದ ಅಂಶದ ಕೊರತೆಯನ್ನು ನೀಗಿಸುತ್ತದೆ.
ಅದು ಅಲ್ಲದೆ ಹೀರೆಕಾಯಿಯಲ್ಲಿ ವಿಟಮಿನ್ ‘ ಬಿ6 ‘ ಅಂಶ ಹೆಚ್ಚಾಗಿದ್ದು, ಇದು ದೇಹದಲ್ಲಿ ಕಂಡು ಬರುವ ಕೆಂಪು ರಕ್ತ ಕಣಗಳ ಆರೋಗ್ಯವನ್ನು ಕಾಪಾಡುತ್ತದೆ. ಇಡೀ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ರಕ್ತ ಸಂಚಾರ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ಯಾವುದೇ ಬಗೆಯ ನೋವು ಮತ್ತು ಆಯಾಸವನ್ನು ದೂರ ಮಾಡುತ್ತದೆ.
ದೇಹದ ತೂಕ ಕಡಿಮೆ ಮಾಡುತ್ತದೆ:
ಹೀರೆಕಾಯಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಲಭ್ಯವಿದ್ದು, ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ ಕೂಡ ಸಾಕಷ್ಟು ಕಡಿಮೆ ಇದೆ. ಹಾಗಾಗಿ ಪ್ರತಿ ದಿನ ನೀವು ಆಹಾರ ಸೇವನೆ
ಮಾಡುವಾಗ ಜೊತೆಗೆ ಹೀರೆಕಾಯಿಯ ಖಾದ್ಯಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ
ಆಹಾರದ ಮೂಲಕ ಸೇರುವ ಪ್ರೊಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಅಂಶಗಳನ್ನು ಸರಿಯಾಗಿ ಜೀರ್ಣ ಮಾಡಿ ವಿಪರೀತ ಕೊಬ್ಬಿನ ಅಂಶಗಳು ನಿಮ್ಮ ದೇಹದಲ್ಲಿ ಸೇರ್ಪಡೆ ಆಗುವುದನ್ನು ತಪ್ಪಿಸಿ ನಿಮ್ಮ ಸೊಂಟದ ಸುತ್ತ ಮುತ್ತ ಅಡಗಿರುವ ಬೊಜ್ಜಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಇದರ ಜೊತೆಗೆ ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣದ ಉತ್ಪತ್ತಿಯನ್ನು ಹೆಚ್ಚು ಮಾಡಿ ನಿಮ್ಮ ದೇಹದ ರಕ್ತದ ಸಕ್ಕರೆ ಮಟ್ಟವನ್ನು ತಗ್ಗಿಸಿ ನಿಮ್ಮ ಮಧುಮೇಹ ಸಮಸ್ಯೆಯನ್ನು ದೂರ ಮಾಡುವುದರ ಜೊತೆಗೆ ನಿಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚು ಮಾಡುತ್ತದೆ.
ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡುತ್ತದೆ:
ಹೀರೆಕಾಯಿಯಲ್ಲಿ ನೀರಿನ ಅಂಶ ಅಧಿಕವಾಗಿದೆ. ಹಾಗಾಗಿ ಮೊಟ್ಟ ಮೊದಲಿಗೆ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಇಲ್ಲವಾಗುತ್ತದೆ. ಸೇವಿಸಿದ ಯಾವುದೇ ಆಹಾರವನ್ನು ಸರಿಯಾಗಿ ಜೀರ್ಣ ಮಾಡುವಷ್ಟು ನೀರಿನ ಪ್ರಮಾಣ ದೇಹದಲ್ಲಿ ಲಭ್ಯ ಆಗುತ್ತದೆ. ಇದರ ಜೊತೆಗೆ ಹೀರೆಕಾಯಿಯಲ್ಲಿ ‘ ಸೆಲ್ಯುಲೋಸ್ ‘ ಎಂಬ ನೈಸರ್ಗಿಕ ನಾರಿನ ಅಂಶ ಇರುವುದರಿಂದ ಆಹಾರವನ್ನು ಸರಿಯಾಗಿ ಜೀರ್ಣ ಮಾಡುವಂತಹ ಪ್ರಕ್ರಿಯೆ ನಡೆಯುತ್ತದೆ.
ಕೆಲವು ಆಹಾರ ತಜ್ಞರು ಹೇಳುವ ಹಾಗೆ ಮಧ್ಯಾಹ್ನದ ಸಮಯದಲ್ಲಿ ಊಟ ಮಾಡಿದ ನಂತರ ಒಂದು ಗ್ಲಾಸ್ ಹೀರೆಕಾಯಿ ಜ್ಯೂಸ್ ಗೆ ಸ್ವಲ್ಪ ಜೇನು ತುಪ್ಪ ಮಿಶ್ರಣ ಮಾಡಿ ಕುಡಿಯುವುದರಿಂದ ಮಲಬದ್ಧತೆಯ ಸಮಸ್ಯೆ ದೂರವಾಗಿ ದೇಹದಲ್ಲಿ ಕರುಳಿನ ಚಲನೆ ಉತ್ತಮಗೊಂಡು ಅಜೀರ್ಣತೆಯ ಸಮಸ್ಯೆ ಇಲ್ಲವಾಗುತ್ತದೆ.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.