ಡೈಲಿ ವಾರ್ತೆ: 20/Mar/2024
ಉಡುಪಿ ಜಿಲ್ಲೆಯಲ್ಲಿ ಬೌದ್ಧರ ವಿಶೇಷ ಗೃಹಪ್ರವೇಶ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆ ಗ್ರಾಮದಲ್ಲಿ.ಸಾಮಾಜಿಕ ಹೋರಾಟಗಾರ ಶೇಖರ್ ಹಾವಂಜೆ ರವರು ತಮ್ಮ ಬೌದ್ಧ ಧಮ್ಮಕ್ಕೆ ಹೊಂದಿಕೊಳ್ಳುವ ವಿನ್ಯಾಸದಲ್ಲಿ ನೈಸರ್ಗಿಕವಾಗಿ ಕೊಜೆ ಮಣ್ಣಿನ ಹೆಂಚಿನ ಚಾವಣಿ. ಮತ್ತು ಕಟ್ಟಡ ಕಲ್ಲಿನ
ನೆಲಹೊಂದಿರುವ ಮನೆಯನ್ನು ನಿರ್ಮಿಸಿ.ಹಾಲ್ ನಲ್ಲಿ ಭಗವಾನ್ ಬುದ್ಧರ ಕಂಚಿನ ಪ್ರತಿಮೆ ಸ್ಥಾಪಿಸಿ, ಮನೆಗೆ ತಾಗಿಕೊಂಡೇ ಒಂದು ಅದ್ಬುತವಾದ ಗ್ರಂಥಾಲಯ, ನಿರ್ಮಾಣ ಮಾಡಿದ್ದಾರೆ.
ಇನ್ನೊಂದು ವಿಶೇಷವೆಂದರೆ ಶೇಖರ್ ಹಾವಂಜೆ ರವರ ಮೊದಲನೆ ಮಗ (ಭರತ್)ಬೌದ್ಧ ಧರ್ಮದ ದೀಕ್ಷೆ ಪಡೆದು. ನಂತರ ಬೆಂಗಳೂರಿನ ಮಹಾಬೋಧಿ ಬುದ್ಧ ವಿಹಾರದಲ್ಲಿ ಬಿಕ್ಕು ದೀಕ್ಷೆ ಪಡೆದು ಪೂಜ್ಯ ಧಮ್ಮೊವರೋ ಭಂತೇಜಿಯಾಗಿ ಉಡುಪಿ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಮಾ. 16 ರಂದು ಶೇಖರ್ ಹಾವಂಜೆ, ಕುಟುಂಬಸ್ಥರು ಹಾವಂಜೆ ಯಲ್ಲಿ ನಿರ್ಮಾಣ ಮಾಡಿರುವ ಬೋಧಿಸತ್ವ ಹೆಸರಿನ ಮನೆಯ ಗೃಹ ಪ್ರವೇಶವನ್ನು ಪೂಜ್ಯ ಧಮ್ಮೊವರೋ ಭಂತೇಜಿ, (ಭರತ್),ಬಿಕ್ಕು ಭಂತೇಜಿ ಗಳಾದ ಪೂಜ್ಯ ದಮ್ಮಾನಂದ ಭಂತೇಜಿ, ಪೂಜ್ಯ ನ್ಯಾನಾನಂದ ಭಂತೇಜಿ ರವರ ಸಾನಿಧ್ಯದಲ್ಲಿ ಬೋಧಿ ವೃಕ್ಷ ನೆಟ್ಟು , ಬುದ್ಧರ ಕಂಚಿನ ಪ್ರತಿಮೆ ಪ್ರತಿಷ್ಠಾಪನೆ ಗೊಳಿಸಿ ಬುದ್ದವಂದನೆ, ಪರಿತ್ತ ಸುತ್ತ ಪಠಣ,ತ್ರಿಸರಣ ಪಂಚಶೀಲ ಮತ್ತು ಬುದ್ಧರ ಬೋಧನೆಗಳ ಧಮ್ಮೋಪದೇಶ ನೀಡುವ ಮೂಲಕ ನೆರವೇರಿಸಿದ್ದಾರೆ.
ಈ ವಿಶೇಷ ಗೃಹಪ್ರವೇಶಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ಗಣ್ಯವ್ಯಕ್ತಿಗಳು, ನೂರಾರು ಬೌದ್ಧ ಅನುಯಾಯಿಗಳು, ಅನೇಕ ಬೌದ್ಧ ಧಮ್ಮಾಚಾರಿಗಳು, ಆಗಮಿಸಿ ಶುಭ ಹಾರೈಸಿದರು.ಹಾಗೂ ಮತ್ತೊಂದು ವಿಶೇಷವೆಂದರೆ ಈ ಗೃಹಪ್ರವೇಶಕ್ಕೆ ಸ್ಪಂದನ ವಿಶೇಷ ಚೇತನ ಶಾಲೆ ಸಾಲ್ಮರ ಮತ್ತು ನೇಜಾರಿನ ನೂರಾರು ವಿಶೇಷ ಚೇತನ ಮಕ್ಕಳನ್ನು ಆಹ್ವಾನಿಸಿ ಆ ಮಕ್ಕಳಿಗೆ, ಪೋಷಕರಿಗೆ ಬೌದ್ಧ ಬಿಕ್ಕುಗಳಿಂದ ಆಶಿರ್ವಾದ ನೀಡಿ ಊಟ ಉಪಚಾರ ಮಾಡಿರುವುದು.ಮಾತ್ರವಲ್ಲದೆ.
ನೂರಾರು ಜನರಿಗೆ ವಸ್ತ್ರಗಳನ್ನು ದಾನ ಮಾಡಿ ನಿಜವಾದ ಅರ್ಥದಲ್ಲಿ ಬೌದ್ಧ ಧಮ್ಮದವರ ಬೋಧಿಸತ್ವ ಹೆಸರಿನ ಮನೆಯ ಗೃಹ ಪ್ರವೇಶವನ್ನು ಮಾಡಿ ಶೇಖರ್ ಹಾವಂಜೆ ರವರು ಈಡೀ ರಾಜ್ಯಕ್ಕೆ, ಜಿಲ್ಲೆಗೆ
ಮಾದರಿ ಯಾಗಿದ್ದಾರೆ.