ಡೈಲಿ ವಾರ್ತೆ: 01/April/2024
” ಕನಸು ಕಂಡ ಬದುಕಿಗೆ ಕಣ್ಣೀರ ಶಾಪವಾದ -“ಬ್ರೇನ್ ಥಾಲಾಮಿಕ್ ಬ್ಲಿಡ್”ಸಮಸ್ಯೆ…!” ಬಡತನದ ಬೇಗುದಿಗೆ ಅರ್ಧಕ್ಕೆ ಮುಟಕುಗಳಿಸಿದ ಬ್ರೈನ್ ಚಿಕಿತ್ಸೆ…!” ಕುಂದಾಪುರದ ಹಳ್ನಾಡು ಗ್ರಾಮದ ಶಕುಂತಲಾ ಅವರ ನೋವಿನ ಕಣ್ಣೀರ ಕಹಾನಿ…!” ಬಡತನದ ಕಣ್ಣೀರ ನಿಗಿಸಲು ಬೇಕು ಸಹಾಯ ಹಸ್ತದ ಮಾನವೀಯತೆ…!” ಪ್ಲೀಸ್, ಹೆಲ್ಪ್ ಮೀ…!”
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ಉಡುಪಿ ಜಿಲ್ಲೆ( ಪತ್ರಕರ್ತರು/ ಮಾಧ್ಯಮ ವಿಶ್ಲೇಷಕರು)email:santhoshmolahalli @gmail.com
ಸುದ್ದಿ : ಕಂಡ್ಲೂರು (ಹಳ್ನಾಡು) :-
ಸ್ವಚ್ಛಂದ ಕರಾವಳಿಯಲ್ಲಿ ತಣ್ಣನೆಯ ಗಾಳಿ, ಸುಡು ಸುಡು ಬಿಸಿಲಿನ ಮಧ್ಯೆ ಜೀವಜಲದ ಆಹಾಕಾರ, ಅಲ್ಲೊಂದು ಇಲ್ಲೊಂದು ಮನೆಯ ಸೂರು, ಬಂದು ಬಳಗದವರು ನೆಂಟರಿಷ್ಟರು ಸ್ನೇಹಿತರು ಎಲ್ಲರೂ ಪ್ರಪಂಚದಲ್ಲಿ ಎಲ್ಲರಂತೆಯೇ ಬದುಕುತ್ತಿದ್ದಾರೆ. ಆದರೆ, ಒಬ್ಬೊಬ್ಬರ ಹಣೆಬರಹದಲ್ಲಿ ಈ ರೀತಿ ಬ್ರಹ್ಮ ಬರೆದರೆ, ಹೇಗೆ ಬದುಕುವುದು ಎನ್ನುವುದು ಬಡ ಕುಟುಂಬವೊಂದರ ನರಕ ಯಾತನೆಯ ಕಹಾನಿ. ಅಂತಹ ಯಾತನೆಯಲ್ಲಿ ಮರುಗುತ್ತಿದ್ದ ಕುಟುಂಬವೊಂದರ ಕಣ್ಣೀರ ಕಥೆ ಹೇಳಲಾಗದೆ, ಹೇಳಿಯೂ ಸ್ಪಂದಿಸದ ಈ ಸಮಾಜದ ನಡುವೆ ಬದುಕಲೇಬೇಕಾದ ಅನಿವಾರ್ಯ.., ಬಂದ ಕಷ್ಟವನ್ನು ಬಂದಹಾಗೆ ಸ್ವೀಕರಿಸುವುದು ಮಾನವ ಧರ್ಮವಾದರೂ, ಸಹಿಸುವಂತಹ ಶಕ್ತಿ ಕೊಟ್ಟಾನೇ ಭಗವಂತ….? ಆದರೆ ತುತ್ತು ಅನ್ನಕ್ಕಾಗಿ ದಿನಗೂಲಿಯ ನೌಕರರಾಗಿ ಕೆಲಸ ನಿರ್ವಹಿಸಿ, ಅಂದಿನದ ಹಣದಲ್ಲಿ ಅಂದೇ ಬದುಕುವ ವ್ಯಕ್ತಿಗೆ ಈ ರೀತಿ ಆದರೆ ಕಾಪಾಡುವವರಾರು….? ಇಂತಹ ವ್ಯಕ್ತಿಗಳಿಗೆ ಅನಾರೋಗ್ಯ ಪೀಡಿತವಾದರೆ ರಕ್ಷಿಸುವರರಾರು….? ದೇವರೇ ಕಾಪಾಡಬೇಕು. ಅಂತಹ ನೋವಿನ ಅನಾರೋಗ್ಯದ ಸಮಸ್ಯೆಯಲ್ಲಿ ಬಳಲುತ್ತಿರುವುದು ಉಡುಪಿ ಜಿಲ್ಲೆಯ
ಕುಂದಾಪುರ ತಾಲೂಕಿನ ಹಳ್ನಾಡು ನಿವಾಸಿ
ಶ್ರೀಮತಿ ಶಕುಂತಲಾ ಮೊಗವೀರ(48 ವರ್ಷ ) ಇದೀಗ ಅನಾರೋಗ್ಯ ಪೀಡಿತರಾಗಿ ನರಳುತ್ತಿರುವುದು ಇವರೇ ಶ್ರೀಮತಿ ಶಕುಂತಲಾ (48 ವರ್ಷ ).ಚೆನ್ನಾಗಿಯೇ ಬದುಕು ನಡೆಸುತ್ತಿದ್ದ ಶಕುಂತಲಾ ಇವರಿಗೆ ಬರ ಸಿಡಿಲಿನಂತೆ ಬಂದೇರಗಿದ್ದು ಬಹುಕಾಲದ ತಲೆನೋವು ಕಾಣಿಸಿಕೊಂಡಿತು. ಸ್ಥಳೀಯ ವೈದ್ಯರ ತೀರ್ಮಾನದ ಮೂಲಕ ಮಣಿಪಾಲದ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಮಣಿಪಾಲ ಆಸ್ಪತ್ರೆಯಲ್ಲಿ ಶಕುಂತಲಾ ಅವರಿಗೆ ತಲೆಯ ಭಾಗದಲ್ಲಿ ಆಗಿರುವಂತಹ ಸಮಸ್ಯೆಗೆ ವೈದ್ಯರು ತಿಳಿ ಹೇಳಿದರು. ಗಾಬರಿಗೊಂಡ ಕುಟುಂಬಸ್ಥರು ರೋಧನೆ ಪಟ್ಟರು ಮರುಕ ಕೊಟ್ಟರು. ಆದರೆ ಭಗವಂತನ ಮೇಲೆ ಧೈರ್ಯವನ್ನು ಮಾಡಿ ಮಣಿಪಾಲ ಆಸ್ಪತ್ರೆ ಯಲ್ಲಿ ಬ್ರೇನ್ ಥಾಲಾಮಿಕ್ ಬ್ಲಿಡ್ ವಿರುದ್ಧ ಇಂಟ್ರಾ ವೆಂಟ್ರಿಕಲ್ ವಿಸ್ತಾರದೊಂದಿಗೆ ನ್ಯೂರೋ ಸರ್ಜರಿ ಚಿಕಿತ್ಸೆ ಪಡೆಯುತ್ತಿದ್ದು,ಈ ಚಿಕಿತ್ಸೆಗೆ ಸರಿಸುಮಾರು 5 ಲಕ್ಷ ವೆಚ್ಚ ಬರಿಸಬೇಕಾಗುತ್ತದೆ. ಒಂದೆಡೆ ಬಡತನ, ಇನ್ನೊಂದೆಡೆ ಸಮರ್ಪಕವಾಗದ ಉದ್ಯೋಗವಿಲ್ಲದೆ ಕುಟುಂಬ ಕಂಗಾಲಾಗಿ ಹೋಗಿದೆ. ಪತಿ ಶಂಕರ ಮೊಗವೀರ , ಅಂಚೆ ಇಲಾಖೆಯಲ್ಲಿ ಹೊರ ನೌಕರನಾಗಿ 35 ವರ್ಷ ಅಧಿಕ ಸೇವೆ ಸಲ್ಲಿಸುತ್ತಿದ್ದು, ಆರ್ಥಿಕ ಸ್ಥಿತಿ ತುಂಬಾ ಕಷ್ಟಕರವಾಗಿತ್ತು,, ಬಂದ ಅಲ್ಪಸಲ್ಪ ಸಂಬಳದಲ್ಲಿ, ಜೀವನ ಸಾಗಿಸುತ್ತಿದ್ದು, ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದರು, ಶಂಕರ್ ಮೊಗವೀರ ಬಾಳ ಸರಳ ಸಜ್ಜನ ವ್ಯಕ್ತಿತ್ವದ, ವ್ಯಕ್ತಿಯಾಗಿದ್ದು, ಈ ದಿನ ಅವರ ಮನೆಯ ಕಷ್ಟಗಳನ್ನು ನೋಡಿದರೆ, ಕರುಳು ಹಿಂಡುವಂತಿತ್ತು, ಕಾರಣ ಶಂಕರ ಮೋಗವಿರ ಇವರು ಬಾಳ ದಾಕ್ಷಿಣ್ಯ ಸ್ವಭಾವ, ಇಂಥ ಕಷ್ಟದಲ್ಲೂ, ಬಂಧುಗಳ ಜೊತೆಯಾಗಲಿ, ಹಿತೈಷಿಗಳ ಜೊತೆಯಾಗಲಿ, ಊರಿನ ಶ್ರೀಮಂತರ ಬಳಿಯಾಗಲಿ, ತನ್ನ ಕಷ್ಟ ನೋವನ್ನು ಹಂಚಿಕೊಂಡಿಲ್ಲ,
ಹಣದ ಕೊರತೆ ರೋಗಿ ಡಿಸ್ಚಾರ್ಜ್:-
ತುತ್ತು ಅನ್ನಕ್ಕಾಗಿ ಪರದಾಟವಾದ ಕುಟುಂಬ, ಒಂದೆಡೆಯಾದರೆ, ಇನ್ನೊಂದೆಡೆ ಕೈಯಲ್ಲಿ ಹಣವಿಲ್ಲದೆ ಪರದಾಡುತ್ತಿದೆ. ಉತ್ತಮವಾದ ಚಿಕಿತ್ಸೆ ಹಾಗೂ ಗುಣಮುಖರಾದರೆ ಮಣಿಪಾಲದಂತಹ ಆಸ್ಪತ್ರೆಗಳಲ್ಲಿ ಸಾಧ್ಯ ಎನ್ನುವುದು ಸ್ಥಳೀಯ ವೈದ್ಯರ ಸಲಹೆಯಾಗಿತ್ತು. ಅದೇ ರೀತಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದರು ಹಣದ ಕೊರತೆಯಿಂದಾಗಿ ನೋವಿನಲ್ಲಿಯೇ ಶಕುಂತಲಾ ಅವರನ್ನು ಡಿಸ್ಚಾರ್ಜ್ ಮಾಡಿಕೊಂಡು ಬಂದಿದ್ದಾರೆ. ಮನೆಯಲ್ಲಿ ನರಕಯಾತನೆಯ ಬದುಕನ್ನ ಕಾಣುತ್ತಿರುವ ಈ ಕುಟುಂಬಕ್ಕೆ ಸಹಾಯ ಹಸ್ತ ನೀಡಬೇಕಿದೆ. ಬದುಕಿನಲ್ಲಿ ನೊಂದು ಬೆಂದು ಹತಾಶರಾಗಿರುವ ಕುಟುಂಬಕ್ಕೆ ಶಕ್ತಿಯ ದ್ಯೋತಕ ನೀಡಬೇಕಿದೆ. ನಾವು ಎಲ್ಲೆಲ್ಲಿಯೂ ದುಂದು ವೆಚ್ಚ ಮಾಡುವ ಹಣವನ್ನ ಈ ಕುಟುಂಬಕ್ಕಾಗಿ ಮೀಸಲಿಡೋಣ. ಸಂಸಾರದಲ್ಲಿ ನೋವಿನ ಹತಾಶೆಯಲ್ಲಿ ಬಿಂದು ಹೋದ ಕುಟುಂಬಕ್ಕೆ ಜೀವ ಕೊಡೋಣ. ಕಂಡು ಕೇಳಿರದ ಕುಟುಂಬದ ಈ ಭವಣೆ ಹೇಳತಿರದು.ಚಿಕಿತ್ಸೆಗೆ ಹಣವನ್ನು ಹೊಂದಿಸಲಾಗದೆ ಅರ್ಧಂಬರ್ಧ ಚಿಕಿತ್ಸೆಯನ್ನು ಕೊಡಿಸಿ ವಾಪಸ್ ಆಗಿದ್ದಾರೆ.
ಆಸ್ಪತ್ರೆಯಿಂದಲೇ, ಡಾಕ್ಟರ ಬಳಿ ಕಣ್ಣೀರು ಹಾಕಿ, ಡಿಸ್ಚಾರ್ಜ್ ಮಾಡಿಕೊಂಡು ಮನೆಗೆ ಬಂದಿದ್ದಾರೆ, ಆ ಕುಟುಂಬಕ್ಕೆ ಈಗ ಮಾನವೀಯತೆ ದೃಷ್ಟಿ ಸಹಾಯ ಮಾಡುವುದಿದ್ದರೆ, ಆಸ್ಪತ್ರೆಗೆ ಮರಳಿ ಅಡ್ಮಿಟ್ ಮಾಡಬಹುದು, ಆದ್ದರಿಂದ ದಯವಿಟ್ಟು, ಈ ಕುಟುಂಬಕ್ಕೆ ಹಾರ್ದಿಕ ಸಹಾಯ ನೀಡುವ ಕುರಿತು, ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ, ಜೊತೆಗೆ ಬ್ಯಾಂಕ್ ಅಕೌಂಟ್ ನಂಬರ್ ಕೂಡ ನೀಡಿದ್ದಾರೆ,
ಹೊಟ್ಟೆ ತುಂಬಿದ ಮೇಲೆ ತಿನ್ನುವ ಆಹಾರಕ್ಕಿಂತ, ಹೊಟ್ಟೆ ಇಲ್ಲದವನ ಹಸಿವು ನೀಗಿಸಿದರೆ, ಪರಮಾತ್ಮ ನನ್ನ ಪ್ರತ್ಯಕ್ಷವಾಗಿ ಕಾಣಬಹುದು ಅಂದಹಾಗೆ, ಈ ಕುಟುಂಬಕ್ಕೆ ನೆರಳು ನೀಡುವುದು, ಭಗವಂತನ ಕಾರ್ಯ ಮಾಡಿದಷ್ಟು ಪುಣ್ಯ ಅಂದುಕೊಂಡಿದ್ದೇನೆ.
ಶ್ರೀಮತಿ ಶಕುಂತಲಾ ಅವರು ಮೊದಲಿನ ಹಾಗೆ ಬದುಕಲು ನಾವೆಲ್ಲರೂ ಕೈಜೋಡಿಸಬೇಕಿದೆ. ಮಾನವೀಯ ನೆಲೆಯಲ್ಲಿ ಸಹಾಯ ವನ್ನು ನೀಡಿ ಮನುಷ್ಯತ್ವವನ್ನು ಮೆರೆಯಬೇಕಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಳ್ನಾಡು ಗ್ರಾಮದ ಶಕುಂತಲಾ ಅವರ ಬದುಕು ಎಲ್ಲರಂತಾಗಲಿ. ಸಂಪೂರ್ಣ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಬೇಕು. ಅವರ ನೋವಿನಲ್ಲಿ ನಾವೆಲ್ಲರೂ ಭಾಗಿಯಾಗುವುದರ ಮೂಲಕ ಅವರ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡೋಣ. ಸುಖ-ದುಃಖಗಳ ನಡುವಿನ ಮನುಷ್ಯತ್ವದಲ್ಲಿ ನಾವೆಲ್ಲರೂ ಇವರ ಕುಟುಂಬಕ್ಕೆ ನೆರವಾಗುವ ಮನೋಭಾವ ನಮ್ಮಲ್ಲಿ ಬೆಳೆಯಲಿ. ಆರೋಗ್ಯವಾದ ಅಂತಹ ಜೀವನವನ್ನು ಬೇಡುತ್ತಾ,ನೊಂದು ಬೆಂದು ಹತಾಶರಾದ ಕುಟುಂಬಕ್ಕೆ ಶಕ್ತಿಯನ್ನು ನೀಡೋಣ. ಆ ಶಕ್ತಿಯ ಹಿಂದೆ ನಾವೆಲ್ಲರೂ ಕೈಜೋಡಿಸಿ, ನೋವಿನ ಸಾಗರದಲ್ಲಿರುವ ಕುಟುಂಬವನ್ನ ಮೇಲೆತ್ತುವ ಪ್ರಯತ್ನ ಮಾಡೋಣ. ನಮ್ಮ ಮನೆಯ ಸದಸ್ಯರಂತೆ ಅವರನ್ನು ನೋಡಿಕೊಳ್ಳೋಣ ನೀವೆಲ್ಲರೂ ಸಹಾಯ ಹಸ್ತವನ್ನು ಜಾಚುತ್ತೀರಿ ಎಂಬ ವಿಶ್ವಾಸ ನಮಗಿದೆ. ಸಾಧ್ಯವಾದರೆ ಸಾಂತ್ವನದ ಕರೆಗಳು ಅವರತ್ರ ಸಾಗಲಿ. ಸಂಪರ್ಕಕ್ಕಾಗಿ ಶಂಕರ್ ಮೊಗವೀರ :8722734302.
ಮಾನವೀಯ ನೆಲೆಯಲ್ಲಿ ಸಹಾಯ ಹಸ್ತವನ್ನು ನೀಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ತಮ್ಮ ಅಮೂಲ್ಯ ಮೊತ್ತವನ್ನು ನೀಡಿ ಸಹಕರಿಸಿ.
ಖಾತೆ ಸಂಖ್ಯೆ :81890100012184
IFSC:BARBVJKAUD
BANK OF BARODA.
” ನೋವಿನ ಕುಟುಂಬಕ್ಕೆ ಸಾಂತ್ವನದ ನುಡಿಗಳ ಜೊತೆಗೆ, ಸಹಾಯ ಹಸ್ತ ವನ್ನು ನೀಡೋಣ. ಬದುಕಿನಲ್ಲಿ ನೋವಿಂದ ಕುಟುಂಬಗಳಿಗೆ ಶಕ್ತಿಯಾಗಿ ನಿಲ್ಲೋಣ. ಬೇಗ ಗುಣಮುಖರಾಗಿ ಶಕುಂತಲಾ ಅವರ ಬದುಕು ಮೊದಲಿನಂತಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.