ಡೈಲಿ ವಾರ್ತೆ: 03/April/2024

ಚರ್ಚ್ ನೆಲದಲ್ಲಿ ಓಂ, ಸ್ವಸ್ತಿಕ್ ಚಿಹ್ನೆಯ ಟೈಲ್ಸ್‌ : ವಿವಾದ ಸೃಷ್ಟಿಸಿದ ಈ ವಿಡಿಯೋ

ಆಂಧ್ರಪ್ರದೇಶ: ಹಿಂದೂ ಧರ್ಮದಲ್ಲಿ ಸ್ವಸ್ತಿಕ, ಓಂ ಚಿಹ್ನೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಯಾವುದೇ ಪೂಜೆ, ಪುನಸ್ಕಾರದ ಸಮಯದಲ್ಲಿ, ಸ್ವಸ್ತಿಕ, ಓಂ ಚಿಹ್ನೆಗಳನ್ನು ಬರೆಯಲಾಗುತ್ತದೆ. ಆದರೆ ಇದೀಗ ಸಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ಆಂಧ್ರಪ್ರದೇಶದ ಚರ್ಚ್ ಒಂದರ ಮುಂಭಾಗದಲ್ಲಿ ಹಾಕಲಾಗಿರುವ ಟೈಲ್ಸ್‌ನಲ್ಲಿ ಓಂ ಮತ್ತು ಸ್ವಸ್ತಿಕ್ ಚಿಹ್ನೆ ಬಳಸಿರುವುದನ್ನು ಕಾಣಬಹುದು. ಹಿಂದು ಧರ್ಮದಲ್ಲಿ ಮಂಗಳಕರವೆಂದು ಪರಿಗಣಿಸಲಾಗುವ ಸ್ವಸ್ತಿಕ, ಓಂ ಚಿಹ್ನೆಯನ್ನು ಜನರು ತುಳಿದುಕೊಂಡು ಹೋಗುವ ಟೈಲ್ಸ್‌ನಲ್ಲಿ ಹಾಕಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ರಾಜ್ಯದ ಮಂಗಳಾಪುರ ಪ್ರದೇಶದಲ್ಲಿರುವ ಚರ್ಚ್ ಎಂದು ಗುರುತಿಸಲಾಗಿದೆ.

@arunpudur ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಏಪ್ರಿಲ್ 2ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 95 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ವೈರಲ್ ಆದ ವಿಡಿಯೋದಲ್ಲಿ ಚರ್ಚ್ ಆವರಣದಲ್ಲಿ ಟೈಲ್ಸ್‌ ಹಾಕಿರುವುದನ್ನು ಕಾಣಬಹುದು. ಅದರ ನಡು ನಡುವೆ ಸ್ವಸ್ತಿಕ, ಓಂ ಚಿಹ್ನೆಗಳ ಟೈಲ್ಸ್‌ಗಳನ್ನು ಕಾಣಬಹುದು. ಹಿಂದೂ ಧರ್ಮದಲ್ಲಿ ದೈವಿಕವೆಂದು ಪರಿಗಣಿಸಲಾಗಿರುವ ಓಂ ಮತ್ತು ಸ್ವಾತಿಸ್ಕ್ ಚಿಹ್ನೆಗಳನ್ನು ಈ ರೀತಿ ಬಳಸಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಒಂದು ಧರ್ಮಕ್ಕೆ ಅಗೌರವ ತೋರಿರುವವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದಾರೆ.