ಡೈಲಿ ವಾರ್ತೆ: 05/April/2024

ಡಾ ಬಾಬು ಜಗಜೀವನ ರಾಮ್ 117ನೇ ಜಯಂತಿ

“ಬಾಬೂಜಿ” ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು.ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ಆ ಕಾಲದ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು.ಆ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ನಾಯಕರಾಗಿದ್ದು ಎಂದು ಶಾಲೆಯ ಪ್ರಧಾನ ಗುರುಗಳಾದ ಶ್ರೀ ಬಿ ಎಮ್ ಕುಂಬಾರ ಅವರು ಸ ಮಾ ಹೆ ಮ ಶಾಲೆ ಲಕ್ಷ್ಮೇಶ್ವರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಾ ಬಾಬು ಜಗಜೀವನ ರಾಮ್ 117ನೇ ಜಯಂತಿಯ ಕುರಿತು ಮಾತನಾಡಿದರು.


ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಭಾರತದ ಮಾಜಿ ಉಪಪ್ರಧಾನಮಂತ್ರಿಗಳಾದ ಡಾ.ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ಯುವಪೀಳಿಗೆಗೆ ಪರಿಚಯಿಸಬೇಕಾಗಿದೆ ಎಂದು ಬಿ ಆರ್ ಪಿ ಬಸವರಾಜ ಎಮ್ ಯರಗುಪ್ಪಿ ಅವರು ಡಾ ಬಾಬು ಜಗಜೀವನರಾಂ ಅವರ 117ನೇ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಬಿ ಆರ್ ಪಿ ಈಶ್ವರ ಮೆಡ್ಲೇರಿ ಮಾತನಾಡಿ, ನಾಲ್ಕು ದಶಕಗಳ ಕಾಲ ಸಂಸತ್ ಸದಸ್ಯರಾಗಿ ಅಪರಿಮಿತವಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ, ರಾಷ್ಟ್ರದ ಕೃಷಿ ಸಚಿವರಾಗಿ ಹಸಿರು ಕ್ರಾಂತಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ.ಸ್ವಾತಂತ್ರೋತ್ತರ ಭಾರತದಲ್ಲಿ ಆಹಾರ ಕೊರತೆ ಎದುರಾದಾಗ ಸುಧಾರಿತ ಬಿತ್ತನೆ ಬೀಜ ಹಾಗೂ ಸುಧಾರಿತ ತಳಿಗಳನ್ನು ಅಳವಡಿಸಿಕೊಂಡು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ, ಹಸಿರುಕ್ರಾಂತಿಯ ಹರಿಕಾರ ಎಂದೇ ಖ್ಯಾತಿಯಾಗಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನ ಗುರುಗಳಾದ ಬಿ ಎಮ್ ಕುಂಬಾರ, ಬಿ ಆರ್ ಪಿ ಯವರಾದ ಐ ಎಸ್ ಮೆಡ್ಲೇರಿ, ಬಿ ಎಮ್ ಯರಗುಪ್ಪಿ, ಸಿ ಆರ್ ಪಿ ಯವರಾದ ಸತೀಶ ಬೊಮಲೆ, ಉಮೇಶ ನೇಕಾರ, ಆರ್ ಎಮ್ ಶಿರಹಟ್ಟಿ, ಶ್ರೀಮತಿ ಎಚ್ ಡಿ ನಿಂಗರೆಡ್ಡಿ, ಶ್ರೀಮತಿ ಎಸ್ ಸಿ ಕಾಳೆ, ಆರ್ ಕೆ ಉಪನಾಳ, ಶ್ರೀಮತಿ ಐ ಆರ್ ಕುಲಕರ್ಣಿ, ಬಿ ಬಿ ಹುಲಗೂರ.,ವಿ ವಿ ಗೊಲ್ಲರ, ಎನ್ ಪಿ ಪ್ಯಾಟಿಗೌಡರ, ಡಾ ಶಿವಾನಂದ ಹೂವಿನ, ಐ ಎಸ್ ಮಡಿವಾಳರ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.