ಡೈಲಿ ವಾರ್ತೆ: 11/April/2024
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ – ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜು ಶೇ.97 ಫಲಿತಾಂಶ
ಬಂಟ್ವಾಳ : 2024ರ ಮಾರ್ಚ್ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜು 97 ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ .
ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಲ್ಲಿ ಒಟ್ಟು 190 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 184 ವಿದ್ಯಾರ್ಥಿಗಳು ತೇರ್ಗಡೆಗೊಂಡಿರುತ್ತಾರೆ. 34 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿರುತ್ತಾರೆ ಹಾಗೂ 134 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಲಾ ವಿಭಾಗದಲ್ಲಿ ಶೇಕಡಾ 95, ವಾಣಿಜ್ಯ ವಿಭಾಗದಲ್ಲಿ ಶೇಕಡಾ 99 ಮತ್ತು ವಿಜ್ಞಾನ ವಿಭಾಗದಲ್ಲಿ ಶೇಕಡಾ 97 ಫಲಿತಾಂಶ ದಾಖಲಾಗಿರುತ್ತದೆ. ಕಲಾ ವಿಭಾಗದಲ್ಲಿ 74 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 70 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕುಮಾರಿ ಶಾಹಿನಾ ರೆಹಮಾನ್ 549 ಅಂಕ, ಕುಮಾರಿ ರಾಝಿಯಾ 548 ಅಂಕ, ಕುಮಾರಿ ಮುನಾಸಿದಾ ಬಾನು 529, ತ್ರಿಜೇಶ್ ಎಂ 524 ಅಂಕ, ಶಿವಪ್ರಸಾದ್ 521 ಅಂಕ, ರಾಯಿಫತ್ ಸಫಾ 519 ಅಂಕ, ಫಾತಿಮತ್ ಸ್ವಾಲಿಹತ್ 518 ಅಂಕ, ವಿದ್ಯಾಶ್ರೀ 517 ಅಂಕ ಹಾಗೂ ಅರೆಲ್ ಅವಿತ್ ಪಿರೇರಾ 515 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ 79 ವಿದ್ಯಾರ್ಥಿಗಳಲ್ಲಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕುಮಾರಿ ಕಾವ್ಯ 569 ಅಂಕ, ಧೀರಜ್ 553 ಅಂಕ, ಕುಮಾರಿ ತಸ್ಫಿಯಾ 544 ಅಂಕ, ಯತೀಶ್ 543 ಅಂಕ, ಪ್ರೇಕ್ಷಾ 542 ಅಂಕ, ನವ್ಯ 538 ಅಂಕ, ವಿಶ್ವಾಸ್ 538 ಅಂಕ, ಶೋಹಿಮಾ ತಸ್ರಿ 537 ಅಂಕ, ಕೀರ್ತನ್ ಎ 532 ಅಂಕ, ಫಾತಿಮತ್ ರಾಬಿಯಾ 531 ಅಂಕ, ಸ್ವಾತಿ 529 ಅಂಕ, ರಕ್ಷಿತಾ 528 ಅಂಕ, ಯಶ್ವಿತ್ ಎಸ್ 528 ಅಂಕ, ಸ್ರುಜನ್ 527 ಅಂಕ, ಕೀರ್ತನ್ 525 ಅಂಕ, ಲೋಕೇಶ್ 525 ಅಂಕ, ಅಂಕಿತ್ 524 ಅಂಕ, ಭರತ್ ಬಿ 524 ಅಂಕ, ನಿವೇದಿತಾ 524 ಅಂಕ, ಎನ್ ಬಿ ನಾಫಿಯಾ 523 ಅಂಕ, ಹಾಜಿರತ್ ಝಾಹಿಮಾ 515 ಅಂಕ, ಲಕ್ಷಿತ್ 518 ಅಂಕ ಮತ್ತು ಕೃತಿ ಎಸ್ 512 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 37 ವಿದ್ಯಾರ್ಥಿಗಳಲ್ಲಿ 36 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಚರಣ್ ಕುಲಾಲ್ 543 ಅಂಕ ಮತ್ತು ಫಾತಿಮಾ ರಿಶಾನ 523 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿ ಪಡೆದಿರುತ್ತಾರೆ.