ಡೈಲಿ ವಾರ್ತೆ: 11/April/2024

ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇಖಡಾ 99 ಫಲಿತಾಂಶ, ಗ್ರಾಮೀಣ ಕಾಲೇಜಿನಲ್ಲಿ ಉತ್ತಮ ಸಾಧನೆ – ಶಮ ಅವರಿಗೆ ವಾಣಿಜ್ಯ ವಿಭಾಗದಲ್ಲಿ 590 ಅಂಕ

ಬಂಟ್ವಾಳ : ಗ್ರಾಮೀಣ ಪ್ರದೇಶದ ವಾಮದಪದವು ಪದವಿಪೂರ್ವ ಕಾಲೇಜು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 99 ಫಲಿತಾಂಶ ದಾಖಲಿಸುವ ಮೂಲಕ ಉತ್ತಮ ಸಾಧನೆಗೈದಿದೆ.

   ಪರೀಕ್ಷೆಗೆ ಹಾಜರಾದ 192 ವಿದ್ಯಾರ್ಥಿಗಳ ಪೈಕಿ 190 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 32 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಹಾಗೂ 129 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

   ವಾಣಿಜ್ಯ ವಿಭಾಗದ ಶಮ 590, ಸಹನಾ 587, ರಕ್ಷಾ ಕೆ. ಪೂಜಾರಿ 583 ಅತ್ಯಧಿಕ ಅಂಕ ಪಡೆಯುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ.

    ಕಲಾ ವಿಭಾಗದಲ್ಲಿ 38 ರಲ್ಲಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 100℅ ಫಲಿತಾಂಶ ಸಾಧಿಸಿದೆ. 2 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಮತ್ತು 28 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ದೀಪ್ತಿ 579, ಹರೀಶ್ 513, ಕಾರ್ತಿಕ್ 497 ಅಂಕಗಳನ್ನು ಪಡೆದಿದ್ದಾರೆ.

  ವಾಣಿಜ್ಯ ವಿಭಾಗದಲ್ಲಿ 89 ವಿದ್ಯಾರ್ಥಿಗಳಲ್ಲಿ 87 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಖಡಾ 98 ಫಲಿತಾಂಶ ದಾಖಲಾಗಿದೆ.18 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಮತ್ತು 55 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಮಾ 590, ಸಹನಾ 587, ರಕ್ಷಾ ಕೆ.ಪೂಜಾರಿ 583 ಅಂಕ ಪಡೆದಿದ್ದಾರೆ. ಎಕಾನೊಮಿಕ್ಸ್ ನಲ್ಲಿ ಸಹನಾ ಕುಮಾರಿ ಶೇಖಡಾ 100, ಎಕೊಟೆಂಟ್ಸಿಯಲ್ಲಿ ಸಹನಾ ಕುಮಾರಿ, ಶಮ, ಸುಮಂತ್ ಎಂ.ಪೂಜಾರಿ ಶೇಖಡಾ 100 ಫಲಿತಾಂಶ ದಾಖಲಿಸಿದ್ದಾರೆ.

  ವಿಜ್ಞಾನ ವಿಭಾಗದಲ್ಲಿ 65 ರಲ್ಲಿ 65 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಖಡಾ 100 ಫಲಿತಾಂಶ ಬಂದಿದೆ.12 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಮತ್ತು 46 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪೂಜಾ 577, ಮನೋಜ್ 556, ರಶ್ಮಿತಾ 553 ಅಂಕ ಪಡೆದಿದ್ದಾರೆ. ಬಯೊಲಾಜಿಯಲ್ಲಿ ಪೂಜಾ 100 ರಲ್ಲಿ 100 ಅಂಕ ಪಡೆದಿದ್ದಾರೆ.