ಡೈಲಿ ವಾರ್ತೆ: 17/April/2024

ಪ್ರೈಮ್ ಸಕ್ಸಸ್ ಆನ್ ಲೈನ್ ತರಬೇತಿ ತರಗತಿ ಉದ್ಘಾಟನೆ

ಉಡುಪಿ : ಕಳೆದ 17 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಫ್ ಲೈನ್ ಮೂಲಕ ತರಬೇತಿ ನೀಡುವಲ್ಲಿ ಯಶಸ್ವಿಯಾಗಿರುವ ಉಡುಪಿ ಪ್ರೈಮ್ ಸಂಸ್ಥೆ, ಇದೀಗ ತನ್ನ ಶೈಕ್ಷಣಿಕ ಜಾಲವನ್ನು ಆನ್ ಲೈನ್  ಮೂಲಕ ಕರ್ನಾಟಕ ರಾಜ್ಯಾದಂತ ವಿಸ್ತರಿಸುವಲ್ಲಿ ಮುಂದಾಗಿದ್ದು, ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮಣಿಪಾಲ್ ಮಾಹೆಯ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯಿತು.

ಮಾಹೆಯ ಸಹ ಕುಲಾಧಿಪತಿ ಡಾ॥ ಎಚ್. ಎಸ್ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ  ವಿದ್ಯಾರ್ಥಿಗೆ ಅವಕಾಶಗಳು ಸಾಕಷ್ಟಿದ್ದು, ಅವರ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಲು ಪ್ರೈಮ್ ಸಂಸ್ಥೆಯ ಆನ್ ಲೈನ್ ತರಗತಿ ಉತ್ತೇಜಿಸುತ್ತದೆ ಎಂದು ಭಾವಿಸಿದ್ದೇನೆ. ಇಂದಿನ ತಂತ್ರಜ್ಞಾನವನ್ನು ಭೌಗೋಳಿಕ ಅಡೆತಡೆಗಳಿಲ್ಲದೆ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಈ ತರಬೇತಿ ಪ್ರೇರಕವಾಗಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೌರವ ಅತಿಥಿಯಾಗಿ ಭಾಗವಹಿಸಿದ ಮಾಹೆ ಮಣಿಪಾಲದ ಸಹ ಉಪಕುಲಪತಿ ಡಾ. ನಾರಾಯಣ್ ಸಬಾಹಿತ್ ಮಾತನಾಡಿ ಆನ್ ಲೈನ್ ಶಿಕ್ಷಣದಲ್ಲಿ ವಿವೇಚನಾಯುತವಾದಂತಹ ನಿಯೋಜಿತ ಚಿಂತನೆ ಮತ್ತು ಟೈಮ್ ಮ್ಯಾನೇಜ್ಮ್ಂಟ್ ನ್ನು ಬಹಳ ಕ್ಲಿಷ್ಟವಾಗಿ ಕಳೆಯಲು ಸಹಕಾರಿಯಾಗಿರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರೈಮ್ ಸಂಸ್ಥೆ ತಮ್ಮ ಹೆಜ್ಜೆಯನ್ನು ಮುಂದಿಟ್ಟಿದೆ ಎಂದರು

ಇನ್ನೊರ್ವ ಗೌರವ ಅತಿಥಿ ಇಸ್ರೋ ನಿವೃತ್ತ ಹಿರಿಯ ವಿಜ್ಞಾನಿ ಶ್ರೀ ಇ.ಜನಾರ್ದನ್ ಮಾತನಾಡುತ್ತಾ ಸ್ಪರ್ಧಾತ್ಮಕ ಪರೀಕ್ಷೆಯ ಎದುರಿಸುವಲ್ಲಿ ಆನ್ ಲೈನ್ ತರಗತಿಗಳು ಉಪಯುಕ್ತ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕರಾದ ಶ್ರೀ ರತ್ನಕುಮಾರ್ ಸಿಬ್ಬಂದಿ ಉದಯಕುಮಾರ್, ಧನುಶ್ರೀ, ಅಭಿಜ್ಞಾ ಲರ್ನಿಂಗ್ ಸೊಲ್ಯೂಷನ್ ನ ಮಾಲಕರಾದ ಶ್ರೀ ಜಯಂತ್ ಐತಾಳ್, ಶ್ರೀಮತಿ ಅಪರ್ಣಾ ಉಪಸ್ಥಿತರಿದ್ದರು.

ಡಾ. ಸಿ. ಕೆ. ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.  ಕು. ಅನುರಾಧಾ ಪ್ರಾರ್ಥಣೆ ಮಾಡಿದರು. ಪ್ರೊ. ಗೋಪಾಲಕೃಷ್ಣ ಸಾಮಗ    ದನ್ಯವಾದ ಸಮರ್ಪಿಸಿದರು.