ಡೈಲಿ ವಾರ್ತೆ: 17/April/2024

ಬೆಳ್ಳಟ್ಟಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ರಜೆ ಬಿಸಿಯೂಟ ಕೇಂದ್ರದಲ್ಲಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಿಸುವ ಕಾರ್ಯಕ್ರಮ

ಬರಗಾಲದ ನಿಮಿತ್ತ ಬೇಸಿಗೆ ರಜೆ ಅವಧಿಯಲ್ಲಿ 1 ರಿಂದ 10 ನೇಯ ತರಗತಿ ಮಕ್ಕಳಿಗೆ ಬಿಸಿಯೂಟ ಕೊಡುವ ಯೋಜನೆಯನ್ನು ಹಾಕಿಕೊಂಡಿದ್ದು  ಈ ಶಾಲೆಯ ಬಹುತೇಕ ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳು ತ್ತಿದ್ದು ಈ ಕಾರ್ಯಕ್ರಮ ಸಮಯೋಚಿತವಾಗಿದೆ. ಮಕ್ಕಳು ಕೇವಲ ಊಟ ಮಾತ್ರ ಮಾಡದೆ ಊಟದ ಜೊತೆ ಕಲಿಕೆಯು ಆಗಬೇಕೆಂಬ ಉದ್ದೇಶದಿಂದ ಇಲ್ಲಿಯ ಗುರುಬಳಗ ಈ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಿಸುವ ಕೆಲಸ ಮಾಡುತ್ತಿರುವದು ಅಭಿನಂದನಾರ್ಹ ಎಂದು ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕರಾದ ಎಚ್ ಎಸ್ ರಾಮನಗೌಡ್ರ ಹೇಳಿದರು. ಅವರು ಬೆಳ್ಳಟ್ಟಿಯ ಕಿರಿಯ ಪ್ರಾಥಮಿಕ ಶಾಲೆ ಹೊಸ ಬಡಾವಣೆಯ ಬೇಸಿಗೆ ರಜೆ ಬಿಸಿಯೂಟ ಕೇಂದ್ರದಲ್ಲಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅವರು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಿರೀಶ ಕೋಡಬಾಳ ಮಾತನಾಡಿ ಊಟಕ್ಕೆ ಬಂದ ಮಕ್ಕಳು ಕಲಿಕೆಯಲ್ಲಿ ತೊಡಗಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯವನ್ನು ನಮ್ಮೆಲ್ಲ ಗುರುಬಳಗ ಸೇರಿ ಹಾಕಿಕೊಂಡಿದ್ದೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್ ಎಫ್ ಮಠದ ಸಿ ಆರ್ ಪಿ ಆರ್ ಮಹಾಂತೇಶ ಶಿಕ್ಷಕರಾದ ಎಂ.ಬಿ ಹಾವೇರಿ ಎನ್ ಕೆ ಕಲಾಲ ಎಚ್ ಮಲ್ಲಿಕಾರ್ಜುನರೆಡ್ಡಿ ಎಸ್ ಎಚ್ ಕುಕನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮುಖ್ಯ ಅಡುಗೆಯವರಾದ ಜಯಶ್ರೀ ಗುತ್ತೆಮ್ಮನವರ ಕಾರ್ಯಕ್ರಮ ನಿರೂಪಿಸಿದರು ದೇವಮ್ಮ ಹಗ್ಗದ ಸ್ವಾಗತಿಸಿದರು. ಲಕ್ಷ್ಮಿ ಬಣಗಾರ ವಂದಿಸಿದರು.