ಡೈಲಿ ವಾರ್ತೆ: 19/April/2024
ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು ಪ್ರಕರಣಕ್ಕೆ ಹೊಸ ತಿರುವು – ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ!
ಶ್ರೀರಂಗಪಟ್ಟಣ: ತಾಲೂಕಿನ ಬೆಟ್ಟಹಳ್ಳಿಯಲ್ಲಿ ಬುಧವಾರ ಐಸ್‌ಕ್ರೀಂ ತಿಂದು ಒಂದೂವರೆ ವರ್ಷದ ಅವಳಿ ಮಕ್ಕಳ ಸಾವು ಹಾಗೂ ತಾಯಿ ಅಸ್ವಸ್ಥಳಾದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ತಿರುವುದು ಪಡೆದುಕೊಂಡಿದದು, ಮಕ್ಕಳನ್ನು ತಾಯಿಯೇ ಕೊಂದಿರುವ ಆತಂಕಕಾರಿ ಸಂಗತಿ ಅರೆಕೆರೆ ಠಾಣೆ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ.
ಪೂಜಾ (22) ತನ್ನಿಬ್ಬರು ಅವಳಿ ಮಕ್ಕಳಾದ ತ್ರಿಶೂಲ್ ಹಾಗೂ ತನಿಷಾಗೆ ಕೀಟನಾಶಕ ಬೆರೆಸಿದ್ದ ಐಸ್‌ಕ್ರೀಂ ನೀಡಿದ್ದಳು. ಬಳಿಕ ತಾನೂ ಐಸ್‌ಕ್ರೀಂ ಸೇವಿಸಿದ್ದಳು. ಐಸ್‌ಕ್ರೀಂ ಸೇವನೆ ಬಳಿಕ ಸ್ವಲ್ಪ ಹೊತ್ತಿನಲ್ಲೇ ಮಕ್ಕಳು ಮೃತಪಟ್ಟಿದ್ದು, ಅಸ್ವಸ್ಥಳಾಗಿದ್ದ ಪೂಜಾಳನ್ನು ಚಿಕಿತ್ಸೆಗಾಗಿ ಮಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೌಟುಂಬಿಕ ಕಲ ಹಕ್ಕೆ ಬೇಸತ್ತು ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಪೂಜಾ ಒಪ್ಪಿಕೊಂಡಿದ್ದಾಳೆ.