ಡೈಲಿ ವಾರ್ತೆ: 15/ಆಗಸ್ಟ್/ 2025

ಬೈಂದೂರು ಹಿಂದುಸ್ತಾನಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಸ್ಟಾಫ್ ರೂಂ ಉದ್ಘಾಟನೆ

79ನೆಯ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಬೈಂದೂರು ಹಿಂದುಸ್ತಾನಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಸ್ಟಾಫ್ ರೂಮನ್ನು ಉದ್ಘಾಟಿಸಲಾಯಿತು.

ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ನಂತರ ಮಾಜಿ ಪಂಚಾಯತ್ ಸದಸ್ಯೆ ಹಸೀನಾ ಬಾನು ಇವರು ನವೀಕೃತ ಸ್ಟಾಫ್ ರೂಮ್ ಅನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಸ್ಟಾಫ್ ರೂಮಿನ ನವೀನ ಪೀಠೋಪಕರಣಗಳನ್ನು ಮಾಜಿ ಪಂಚಾಯತ್ ಸದಸ್ಯ ಡಿ. ಅಬ್ದುಲ್ ಖಾದಿರ್ ಬಾಪು ಸಾಹೇಬ್ ಇವರು ಉದ್ಘಾಟಿಸಿದರು.

ಈ ಸುಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ಯಾಮಲದೇವಾಡಿಗ ಹಾಗೂ ಉಳಿದ ಬೋಧಕ ವೃಂದದವರು, ಶಾಲೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು, ಊರಿನ ದಾನಿಗಳು ಹಾಗೂ ಶಾಲೆಯ ಹಿತೈಷಿಗಳು ಹಾಜರಿದ್ದರು.