ಡೈಲಿ ವಾರ್ತೆ: 22/April/2024
ಮಣೂರು ಪಡುಕರೆಯ ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಎಳೆಬಿಸಿಲು ಬೆಸಿಗೆ ಶಿಬಿರದ ಸಮಾರೋಪ ಸಮಾರಂಭ
ಮಣೂರು ಪಡುಕರೆ:- ಇಲ್ಲಿನ ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಎಳೆಬಿಸಿಲು ಬೆಸಿಗೆ ಶಿಬಿರದ ಸಮಾರೋಪ ಸಮಾರಂಭವು ನೆರವೆರಿತು ಕಾರ್ಯಕ್ರಮದಲ್ಲಿ ಗೀತಾನಂದ ಪೌಂಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್, ವಿಶ್ವಸ್ಥರಾದ ವ್ಯೆಷ್ಣವಿ ರಕ್ಷಿತ್ ಕುಂದರ್, ಮತ್ಸೊದ್ಯಮಿ ರಮೇಶ್ ಕುಂದರ್, ಸರಕಾರಿ ಸಂಯುಕ್ತ ಪ್ರೌಢಶಾಲೆಯ ಎಸ್ ಡಿ ಎಮ್ ಸಿ ಅದ್ಯಕ್ಷರಾದ ಜಯರಾಮ ಶೆಟ್ಟಿ, ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಸತ್ಯನಾರಾಯಣ ಅವರು ಭಾಗವಹಿಸಿದ್ದರು.
‘ಮಕ್ಕಳಿಗೆ ಬೆಸಿಗೆ ಶಿಬಿರಗಳಲ್ಲಿ ಕಲಿಸುವ ಕಲಿಕೆಯು ಬದುಕು ಕಟ್ಟಿಕೊಳ್ಳಲು ಬೇಕಾದ ಹಲವು ವಿಚಾರಗಳ ಬಗ್ಗೆ ತಿಳಿಸಿ ಕೊಡುತ್ತದೆ ಮತ್ತು ಸರಕಾರಿ ಶಾಲೆಯ ಮಕ್ಕಳಿಗೆ ಇಂತಹ ಅವಕಾಶಗಳನ್ನು ಒದಗಿಸಿ ಅವರನ್ನು ಎಲ್ಲಾ ರೀತಿಯಲ್ಲಿ ಅಣಿಗೊಳಿಸುವುದು ಅಯೋಜಕರಾದ ನಮ್ಮೆಲ್ಲರ ಕನಸು’ ಎಂದು ತಿಳಿಸಿದರು
ಸಮಾರೋಪ ಸಮಾರಂಭದ ನಂತರ ಶಿಭಿರಾರ್ಥಿಗಳು ತಯಾರಿಸಿದ ಗಾಳಿಪಟವನ್ನು ತಮ್ಮ ಪೋಷಕರೊಂದಿ್ಗೆ ಪಡುಕರೆ ಸಮುದ್ರ ತೀರದಲ್ಲಿ ಹಾರಿಸುವುದರ ಜೊತೆಗೆ ಶಿಬಿರದ ಅಂಗವಾಗಿ ಸ್ಥಳೀಯ ಮರಳು ಶಿಲ್ಪ ಕಲಾವಿದರು ರಚಿಸಿದ ಮರಳು ಶಿಲ್ಪ ಪ್ರದರ್ಶನ ಏರ್ಪಡಿಸಲಾಗಿತ್ತು
ಶಿಬಿರದ ಸಮನ್ವಯಧಿಕಾರಿಯಾದ ರವಿಕಿರಣ್ ಜನತಾ ಸಿಬ್ಬಂದಿ ಅಶ್ವಿನಿ , ವಾಣಿಶ್ರೀ ರಾಘವೇಂದ್ರ ಮತ್ತು ಶಿಭಿರಾರ್ಥಿಗಳು ಹಾಜರಿದ್ದರು.