ಡೈಲಿ ವಾರ್ತೆ: 09/ಮೇ /2024

ಸಾಲಿಗ್ರಾಮ: ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ – ಮಕ್ಕಳು ನಮ್ಮ ನಡೆಯನ್ನು ಗಮನಿಸುತ್ತಾರೆ ಎಂಬ ಎಚ್ಚರ ಪೋಷಕರಲ್ಲಿರಬೇಕು – ಡಾ.ಕಾರಂತ

ಸಾಲಿಗ್ರಾಮ: ಸಂಸ್ಕಾರಯುತ ನಡವಳಿಕೆಯು ಮನೆಯಿಂದಲೇ, ಅದರಲ್ಲೂ ಹೆತ್ತವರಿಂದಲೇ ದೊರಕಬೇಕಾದದ್ದು ಇಂದಿನ ಸಂಕೀರ್ಣ ಕಾಲಘಟ್ಟದಲ್ಲಿ ಅತ್ಯಂತ ಅವಶ್ಯಕವಾಗಿದ್ದು, ಮಕ್ಕಳು ನಮ್ಮ ಮಾತನ್ನು ಕೇಳುವುದಿಲ್ಲವೆಂದು ದೂರುವ ಬದಲು ಅವರು ನಮ್ಮನ್ನು ಗಮನಿಸುತ್ತಾರೆಂಬ ಅರಿವು  ಇರಬೇಕೆಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಕಿವಿ ಮಾತನ್ನು ವಸಂತ ವೇದ
ಶಿಬಿರದ ಸಮಾರೋಪ ಸಮಾರಂಭದಲ್ಲಿ ಹೇಳಿದರು.

ಔಪಚಾರಿಕ ಶಿಕ್ಷಣವು ಪರಿಣಾಮಕಾರಿಯಾಗಬೇಕಂದಲ್ಲಿ ಬದುಕಿನ ಕೌಶಲವನ್ನು ಅಳವಡಿಸಬೇಕಾಗಿದ್ದು, ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ವೇದ ಶಿಬಿರಗಳು ಈ ನಿಟ್ಟಿನಲ್ಲಿ ಪೂರಕ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸಬಲ್ಲದು ಎಂದು ಅವರು ಅಭಿಪ್ರಾಯ ಪಟ್ಟರು. ಅವರು ವಸಂತ ವೇದ ಶಿಬಿರದ ಸಮಾರೋಪ ಸಮಾರಂಭವು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಜ್ಞಾನಮಂದಿರದಲ್ಲಿ ಕೂಟ ಮಹಾಜಗತ್ತು (ರಿ)ಸಾಲಿಗ್ರಾಮ ಅಂಗ ಸಂಸ್ಥೆಯ ಸಹಕಾರದೊಂದಿಗೆ ಹಮ್ಮಿಕೊಂಡಿರುವ 24 ನೇ ವರ್ಷದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 9/5/24ರ ಬೆಳ್ಳಿಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಡಾ। ಕೆ. ಎಸ್ . ಕಾರಂತರ ಅಧ್ಯಕ್ಷತೆಯಲ್ಲಿ ಜರಗಿತು.

ಸಮಾರಂಭದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀ ಲಕ್ಷ್ಮಿನಾರಾಯಣ ತುಂಗ ,ಶ್ರೀ ದೇವಳದ ಆಡಳಿತ ಮಂಡಳಿಯ ಕೋಶಾಧಿಕಾರಿ ಶ್ರೀ ಪರಶುರಾಮ ಭಟ್ಟರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ,ಶ್ರೀ ಸದಾಶಿವ ಐತಾಳರು ಕೂಟಮಹಾಜಗತ್ತು ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ,ಶ್ರೀ ಕೆ.ತಾರಾನಾಥ ಹೊಳ್ಳ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀಪತಿ ಅಧಿಕಾರಿ  ಹಾಗೂ ಶಿಬಿರದ ಮುಖ್ಯ ಗುರುಗಳಾದ ಶ್ರೀ ವಾದಿರಾಜ ಐತಾಳರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಲ್ಲಿ ಕೆಲವರು ಮಾತಾಡಿ ಶಿಬಿರದ ವ್ಯವಸ್ಥೆಯಬಗ್ಗೆ ಶ್ಲಾಘಿಸಿದರು. ದೇವಳದ ಗಣೇಶ ಭಟ್ಟ,ವ್ಯವಸ್ಥಾಪಕ ಶ್ರೀ ನಾಗರಾಜ ಹಂದೆ. ಕೂ ಮ ಜ ಸಾಲಿಗ್ರಾಮ ಅಂಗಸಂಸ್ಥೆಯ ಚಿದಾನಂದ ತುಂಗ,ಕೇಂದ್ರ ಸಂಸ್ಥೆಯ ಮಾಜಿ ಕಾರ್ಯದರ್ಶಿ ಶ್ರೀ ಮಂಜುನಾಥ ಉಪಾಧ್ಯ , ಕೂ ಮ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ ಮಹಾಬಲ ಹೇರ್ಳೆ,ಶಿಬಿರಕ್ಕೆ ಸಹಕರಿಸಿದರು.
350 ಕ್ಕೂ ಹೆಚ್ಚು ವಿಪ್ರ ವಟುಗಳು ವಸಂತ ವೇದ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದ ಗುರುಗಳನ್ನು ಸಭೆಯಲ್ಲಿ ಗೌರವಿಸಲಾಯಿತು.
ಶ್ರೀ ದೇವಳದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗರು ವಂದಿಸಿದರು. ಶ್ರೀ ಅಕಿಲೇಶ್ ಐತಾಳ ಕಾರ್ಯಕ್ರಮ ನಿರೂಪಿಸಿದರು.