ಡೈಲಿ ವಾರ್ತೆ: 13/ಮೇ /2024

ಕಾಸರಗೋಡು ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರು ‘ಸಿಬಿಎಸ್ಸಿ’ 10 ನೇ ತರಗತಿಯಲ್ಲಿ ಶೇ. 100% ಫಲಿತಾಂಶ

ಕಾಸರಗೋಡು:ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರು. ಕೇಂದ್ರೀಯ ಪರೀಕ್ಷಾ ಮಂಡಳಿಯು (ಸಿಬಿಎಸ್ಸಿ) ನಡೆಸಿದ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರವು ಸತತ 19ನೇ ಬಾರಿಗೆ ನೂರು ಶೇಕಡ ಫಲಿತಾಂಶ ಪಡೆದಿದೆ.
ಒಟ್ಟು 79 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು  42 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
491 ಅಂಕಗಳೊಂದಿಗೆ ಶಶಾಂಕ್ ಎಸ್ ಗೌಡ ಪ್ರಥಮ ಸ್ಥಾನ ಪಡೆದಿರುತ್ತಾನೆ. ಉತ್ತಮ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದೆ.