ಡೈಲಿ ವಾರ್ತೆ: 11/ಜುಲೈ/2025

ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದಾಗಲೇ ಬೆಳಗಾವಿ ಯೋಧ ಕುಸಿದು ಬಿದ್ದು ಸಾವು.!

ಬೆಳಗಾವಿ : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ
ಯೋಧನೊಬ್ಬ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಅನಗೋಳ ನಿವಾಸಿ ಇಬ್ರಾಹಿಂ ದೇವಲಾಪುರ (35) ಮೃತ ಯೋಧ.

ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ರಾಹಿಂ ರಜೆಯಲ್ಲಿ ಊರಿಗೆ ಬಂದಿದ್ದು ರಸ್ತೆಯಲ್ಲಿ ಹೋಗುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಇಬ್ರಾಹಿಂ ಅವರು ತಲೆಸುತ್ತು ಬಂದ ರೀತಿ ಎಲ್ಲರೂ ನೋಡುತ್ತಿದ್ದಾಗಲೇ ರಸ್ತೆ ಪಕ್ಕ ನಿಂತಿದ್ದ ಯುವಕನ ಕೈ ಹಿಡಿಯುತ್ತ ನೆಲಕ್ಕೆ ಉರುಳಿದ್ದಾರೆ. ಕೂಡಲೇ ಅಲ್ಲಿದ್ದ ಜನರು ಸೇರಿದ್ದು ಆರೈಕೆ ಮಾಡಿದ್ದಾರೆ. ಇಬ್ರಾಹಿಂ ಕುಸಿದು ರಸ್ತೆಗೆ ಬಿದ್ದಿದ್ದು ಕೆಲವೇ ಹೊತ್ತಲ್ಲಿ ಸಾವು ಕಂಡಿದ್ದಾರೆ. ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಎಚ್ಚರವಾಗದ ಕಾರಣ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ಇಬ್ರಾಹಿಂ ಉಸಿರು ನಿಲ್ಲಿಸಿದ್ದರು. ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.