ಡೈಲಿ ವಾರ್ತೆ: 20/ಮೇ /2024
ಹೆಲಿಕಾಪ್ಟರ್ ಪತನ- ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ದುರ್ಮರಣ
ಇರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ (ಮೇ.19) ವಾಯುವ್ಯ ಇರಾನ್‌ನ ಜೋಲ್ಪಾದಲ್ಲಿ ಪತನವಾಗಿದೆ. ಈ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷರು ಸಾವನ್ನಪ್ಪಿದ್ದಾರೆ.
ಇರಾನ್ ಅಧ್ಯಕ್ಷ ಹಾಗು ವಿದೇಶಾಂಗ ಸಚಿವ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿರುವುದಾಗಿ ವರದಿಯಾಗಿದೆ. ರಕ್ಷಣಾ ತಂಡದ ಕಾರ್ಯಾಚರಣೆ ಮುಂದುವರಿದಿರುವ ಕುರಿತು ಮಾಹಿತಿಗಳು ಹೊರಬಿದ್ದಿದೆ.
ಪ್ರತಿಕೂಲ ಹವಾಮಾನ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಅಧ್ಯಕ್ಷ ರೈಸಿ ಜತೆ ಇರಾನ್ ವಿದೇಶಾಂಗ ಸಚಿವ ಹುಸೇನ್ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ದಟ್ಟ ಮಂಜು ಆವರಿಸಿರುವುದರಿಂದ ಹೆಲಿಕಾಪ್ಟರ್ ಅವಘಡದ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನಲೆ ಭೂಮಾರ್ಗದ ಮೂಲಕ ತಲುಪಿ ಕಾರ್ಯಾಚರಣೆ ನಡೆಸಲು ತೀರ್ಮಾನ ಮಾಡಲಾಗಿದೆ.
63 ವರ್ಷದ ರೈಸಿ ಅವರು 2021 ರಲ್ಲಿ ಎರಡನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇವರು ಅಮೆರಿಕಾ ಹಾಗೂ ಇಸ್ರೇಲ್‌ನ ಕಟು ವಿರೋಧಿಯಾಗಿದ್ದಾರೆ. ಜಾಗತಿಕವಾಗಿ ಖಟ್ಟರ್ ಮುಸ್ಲಿಂ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಈ ರೈಸಿ ಈ ಹಿಂದೆ ದೇಶದ ನ್ಯಾಯಾಂಗವನ್ನು ಮುನ್ನಡೆಸಿದ್ದ ಕಟುವಾದಿ ಇತ.