ಡೈಲಿ ವಾರ್ತೆ: 20/ಮೇ /2024
ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ
ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರಿನಲ್ಲಿ ನಡೆದ ಎರಡು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಶ್ರೀ ಶ್ರೀ ಜಿತಾಕಾಮಾನಂದ ಮಹಾರಾಜ್, ಅಧ್ಯಕ್ಷರು ಶ್ರೀ ರಾಮಕೃಷ್ಣ ಮಠ ಮಂಗಳೂರು
ಮನುಷ್ಯ ಮುಂದೆ ಸಾಧನೆ ಮಾಡಬೇಕಾದರೆ ಇಚ್ಛಾ ಶಕ್ತಿ ಬೇಕು,ಅವರು ಇವರು ಮಾತುಗಳನ್ನು ಹೇಳುತ್ತಾರೆ ಆದರೆ ನಮ್ಮ ಧನಾತ್ಮಕ ಚಿಂತನೆಯಿಂದ ಮನಸ್ಸು ಆಲೋಚಿಸಿದರೆ ಸನ್ಮಾರ್ಗ ದ ದಾರಿ ಮುಂದೆ ಬೆಳಕಾಗುತ್ತದೆ .ಬಾವನೆಗಳು ಚೆನ್ನಾಗಿದ್ದರೆ ಭಾಷೆ ಚೆನ್ನಾಗಿರುತ್ತದೆ ಭಾಷೆ ಚೆನ್ನಾಗಿದ್ದರೆ ಭಾಂದವ್ಯ ಚೆನ್ನಾಗಿರುತ್ತದೆ ಈ ಉತ್ತಮ ಭಾಂದವ್ಯವೇ ಮನುಷ್ಯತ್ವ, ಒಟ್ಟಿನಲ್ಲಿ ಬಾಹ್ಯ ಸ್ವಚ್ಛತೆ ಯಿಂದ ಗುರುತಿಸಬೇಕಾದರೆ ಆಂತರಿಕ ಸ್ವಚ್ಛತೆ ಮುಖ್ಯ ಅದರ ಉನ್ನತಿಗೆ ಯೋಗ, ಧ್ಯಾನ,ಭಜನೆ,ಸತ್ಸಂಗ ಪ್ರಾಮುಖ್ಯ ವಹಿಸುತ್ತಿದೆ ಇದರಿಂದ ವ್ಯಕ್ತಿಯ ವ್ಯಕ್ತಿತ್ವ ಗುರುತಿಸಲ್ಪಡುತ್ತಿದೆ,ಜಗತ್ತಿಗೆ ಮಾದರಿ ವ್ಯಕ್ತಿಯಾಗಿ,ಆದರ್ಶ ವ್ಯಕ್ತಿಯಾಗಿ ಗುರುತಿಸಲ್ಪಡುತ್ತಾನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಉಪಾಧ್ಯಕ್ಷರಾದ ಶ್ರೀ ಪೆಲತ್ತಡ್ಕ ರಾಮಕೃಷ್ಣ ಭಟ್, ಸಂಚಾಲಕರಾದ ಶ್ರೀ ಹಿರಣ್ಯ ಮಹಾಲಿಂಗ ಭಟ್ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು ಕರ್ನಾಟಕ ಉತ್ತರ ಇದರ ಶೈಕ್ಷಣಿಕ ಸಂಯೋಜಕರಾದ ಶ್ರೀ ಜಗನ್ನಾಥ್ ನಾಡಿಗೆರ್, ಟ್ರಸ್ಟಿನ ಸದಸ್ಯರಾದ ಶ್ರೀ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಶ್ರೀ ವಾಮನನ್ ಸ್ವಾಗತಿಸಿ ಅಧ್ಯಾಪಕರಾದ ಶ್ರೀ ಶೇಷು ವಂದಿಸಿದರು. ಅಧ್ಯಾಪಕರಾದ ಶ್ರೀ ರಾಮಕೃಷ್ಣ ಬಲ್ಲಾಲ್ ಕಾರ್ಯಕ್ರಮ ನಿರೂಪಿಸಿದರು