ಡೈಲಿ ವಾರ್ತೆ: 20/ಮೇ /2024

ಕೋಟತಟ್ಟು ಗ್ರಾ. ಪಂ. ವ್ಯಾಪ್ತಿಯ ಗಣಪತಿ ದೇವಸ್ಥಾನದ ಹಿಂದಿನ ಸರಕಾರಿ ಕೆರೆಯ ಹೂಳೆತ್ತುವ ಕಾಮಗಾರಿಗೆ ಚಾಲನೆ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾರಿಕೆರಿಯಲ್ಲಿ ಸರಕಾರಿ ಕೆರೆಯಾದ ಗಣಪತಿ ದೇವಸ್ಥಾನ ಹಿಂದಿನ  ಬಾಯರಿ ಕೆರೆಯನ್ನು ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಮೇ. 20 ರಂದು ಸೋಮವಾರ ಚಾಲನೆ ನೀಡಲಾಯಿತು.

ಈ ಕೆರೆ ಸುಮಾರು ದಶಕಗಳಿಂದ ಯಾವುದೇ ಅಭಿವೃದ್ದಿ ಕೆಲಸ ಕೈಗೊಳ್ಳದೆ ಶಿಥಿಲಾವಸ್ಥೆಯಲ್ಲಿದ್ದು ಸದ್ರಿ ಕೆರೆಯನ್ನು ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಬಾಯರಿ ಕೆರೆ ಹೂಳೆತ್ತಿ ಕೆರೆಗೆ ಮರುಜೀವ ನೀಡುವ ಕಾರ್ಯವನ್ನು ಕೈಗೊಳ್ಳಲಾಯಿತು.

ಈ ಸಂಧರ್ಭದಲ್ಲಿ ಅಧ್ಯಕರು  ಸತೀಶ್ ಕುಂದರ್ ಬಾರಿಕೆರೆ  ಮಾತನಾಡಿ ಕೆರೆ ಅಭಿವೃದ್ಧಿ ಮಾಡುವುದರಿಂದ ಸುತ್ತಮುತ್ತಲಿನ ಪರಿಸರಕ್ಕೆ ಉತ್ತಮ ಅಂತರ್ಜಲ ಸಿಗುವ ಮೂಲಕ ಕೃಷಿ ಚಟವಟಿಕೆಗೂ ಸಹಕಾರಿಯಾಗಿದೆ. ಪಂಚಾಯತ್ ಅಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಈ ಕಾರ್ಯಕ್ಕೆ ಸಹಕರಿಸಿದ್ದು, ಇನ್ನು ಮುಂದಿನ ದಿನಗಳಲ್ಲಿ MGNREGA ಯೋಜನೆಯಡಿ ಇನ್ನು ಹೆಚ್ಚಿನ ಕೆರೆ ಹಾಗೂ ಇತರೆ ಅಭಿವೃದ್ದಿ ಕಾರ್ಯ ಮಾಡುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶ್ರೀಮತಿ ಸರಸ್ವತಿ,  ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ಸಾಹಿರ ಬಾನು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್, ಕಾರ್ಯದರ್ಶಿ ಸುಮತಿ ಅಂಚನ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್, ಕೋಟ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ರಂಜಿತ್ ಕುಮಾರ್ ಬಾರಿಕೆರೆ, ಮಾಜಿ ಅಧ್ಯಕ್ಷ ಪ್ರಭಾಕರ್ ಕಾಂಚನ್, ಸ್ಥಳೀಯರಾದ ಮಹೇಶ್ ಬಾಯರಿ, ಸುರೇಶ್ ಬಾಯರಿ, ರವಿ ಬಾರಿಕೆರೆ ಹಾಗೂ ಗ್ರಾಮಸ್ಥರು ಹಾಗೂ MGNREGA ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.