ಡೈಲಿ ವಾರ್ತೆ: 25/ಮೇ /2024

ನೇರಳೆ ಹಣ್ಣು ಸೇವನೆಯಿಂದಾಗುವ ಆರೋಗ್ಯಕ್ಕೆ ಪ್ರಯೋಜನಗಳು

ಎಲ್ಲರ ಅಚ್ಚುಮೆಚ್ಚಿನ ನೇರಳೆ ಹಣ್ಣು ಪೋಷಕಾಂಶಗಳ ಆಗರವಾಗಿದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ. ಇದರಲ್ಲಿ ಮಧುಮೇಹ, ಕ್ಯಾನ್ಸರ್, ಹೃದಯಾಘಾತ, ಸಂಧಿವಾತ, ಹೊಟ್ಟೆಯ ಕಾಯಿಲೆಗಳಾಗಿರುವ ಭೇದಿ ಇತ್ಯಾದಿಗಳನ್ನು ನಿವಾರಿಸುವ ಗುಣಗಳು ಇವೆ. ಈ ಹಣ್ಣು ಕಾಮಾಸಕ್ತಿ ಕೂಡ ಹೆಚ್ಚಿಸುತ್ತದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ, ರಕ್ತಹೀನತೆಯನ್ನು ದೂರ ಮಾಡುತ್ತದೆ. ರಕ್ತದೊತ್ತಡ ತಗ್ಗಿಸಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ದೂರ ಮಾಡುತ್ತದೆ.

ನೇರಳೆ ಜ್ಯೂಸ್ ಕುಡಿಯುವುದರಿಂದಲು ಹಲವು ಲಾಭಗಳಿವೆ.
ಇದರ ಜ್ಯೂಸ್ ತಯಾರಿಸುವ ವೇಳೆ ಸಕ್ಕರೆ, ಚಿಟಿಕೆ ಉಪ್ಪು, ನಿಂಬೆರಸ, ಹಾಗೂ ಚಿಟಿಕೆ ಚಾಟ್ ಮಸಾಲೆ ಬೆರೆಸಿ. ಬೀಜ ತೆಗೆದ ನೇರಳೆ ಹಣ್ಣನ್ನು ರುಬ್ಬಿ. ಬಳಿಕ ಉಳಿದ ಸಾಮಾಗ್ರಿಗಳನ್ನು ಸೇರಿಸಿ. ಆರೋಗ್ಯಕರ ಈ ಜ್ಯೂಸ್ ಅನ್ನು ವಾರದಲ್ಲಿ ಮೂರು ಬಾರಿ ಸೇವಿಸಿ. ಮಧುಮೇಹಿಗಳು ಸಕ್ಕರೆ ಬೆರೆಸದೆ ಕುಡಿಯಿರಿ.

ಇದು ಜೀರ್ಣಕ್ರಿಯೆಯನ್ನು ಸರಾಗವಾಗಿಸುತ್ತದೆ. ಮಲಬದ್ಧತೆ ಸಮಸ್ಯೆಯನ್ನೂ ನಿವಾರಿಸುತ್ತದೆ. ಪೈಲ್ಸ್ ಸಮಸ್ಯೆ ಇರುವವರು ಇದನ್ನು ಆಗಾಗ ಕುಡಿಯುತ್ತಿರುವುದು ಒಳ್ಳೆಯದು.

ಕಣ್ಣಿನ ಆರೋಗ್ಯವನ್ನೂ ಕಾಪಾಡುವ ಈ ಪಾನೀಯವನ್ನು ಮಕ್ಕಳಿಗೂ ಕುಡಿಸಬಹುದು.