



ಡೈಲಿ ವಾರ್ತೆ: 26/ಮೇ /2024


ಹಕ್ಲಾಡಿ ಶ್ರೀ ಲಕ್ಷ್ಮಿ ಚನ್ನಕೇಶವ ಭಜನಾ ಮಂಡಳಿ ಮಣಿಕೊಳಲ್ ಇವರ ವತಿಯಿಂದ ಶಂಕರ ಜಯಂತಿ ಆಚರಣೆ
ಕುಂದಾಪುರ: ಶ್ರೀ ಲಕ್ಷ್ಮಿ ಚನ್ನಕೇಶವ ಭಜನಾ ಮಂಡಳಿ, ಮಣಿಕೊಳಲ್ ಹಕ್ಲಾಡಿ ಇವರ ವತಿಯಿಂದ ಶಂಕರ ಜಯಂತಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಭಜನಾ ಮಂಡಳಿ ಗಳ ಒಕ್ಕೂಟ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀಯುತ ನಿತಿನ್ ವಿಠಲವಾಡಿ, ಹಾಗೂ ತಾಲೂಕು ಭಜನಾ ಮಂಡಳಿಗಳ ಒಕ್ಕೂಟ ಕುಂದಾಪುರ ಇದರ ಪ್ರಧಾನ ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಹಕ್ಲಾಡಿ ಭಾಗವಹಿಸಿದ್ದರು.
ಭಜನಾ ಮಂಡಳಿಯ ಸದಸ್ಯರು ಹಾಗೂ ಪೋಷಕರ ಪಾಲ್ಗೊಳ್ಳುವಿಕೆಯಲ್ಲಿ ಭಜನಾ ಮಂಡಳಿಯಲ್ಲಿ ಶಂಕರ ಜಯಂತಿಯನ್ನು ಆಚರಿಸಲಾಯಿತು.