ಡೈಲಿ ವಾರ್ತೆ: 26/ಮೇ /2024
ಸಾಲಿಗ್ರಾಮ-ಪಾರಂಪಳ್ಳಿ ಸಂಪರ್ಕ ಸೇತುವೆಯ ತಡೆಗೋಡೆ ಕಿಡಿಗೇಡಿಗಳಿಂದ ಧ್ವಂಸ
ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಸಂಪರ್ಕಿಸುವ ಸೇತುವೆಯ ಮೇಲ್ ಭಾಗದ ತಡೆ ಆವರಣವನ್ನು ಪುಡಿಗೈದ ಘಟನೆ ಭಾನುವಾರ ನಡೆದಿದೆ.
ಸಾಕಷ್ಟು ವರ್ಷಗಳ ಹಿಂದೆ ನಿರ್ಮಾಣಗೊಂಡ ಪಾರಂಪಳ್ಳಿ ಹಾಗೂ ಕೋಡಿ ಸಂಪರ್ಕಿಸುವ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು ಹೊಸದಾಗಿ ಸೇತುವೆ ನಿರ್ಮಾಣಕ್ಕೆ ಆಗ್ರಹ ಕೇಳಿಬಂದಿತು.
ಆದರೆ ಕಿಡಿಗೆಡಿಗಳು ರಾತ್ರಿಹೊತ್ತಿನಲ್ಲಿ ಸೇತುವೆಯ ಮೇಲ್ಭಾಗ ಹಾನಿಗೊಳಿಸಿರುವ ಬಗ್ಗೆ ಪಟ್ಟಣಪಂಚಾಯತ್ ಬೇಸರ ವ್ಯಕ್ತಪಡಿಸಿದ್ದು ಕಿಡಿಗೆಡಿಗಳ ವಿರುದ್ಧ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದೆ.
ಅಪಾಯಕಾರಿ ಸೇತುವೆ:
ಈ ಸೇತುವೆ ಹೊಸದಾಗಿ ನಿರ್ಮಿಸಲು ವಾಹನ ಚಾಲಕರು ಪಾದಚಾರಿಗಳು ಸಾಕಷ್ಟು ಬಾರಿ ಆಗ್ರಹಿಸಿದ್ದರು. ಅಲ್ಲದೆ ಸೇತುವೆ ಮೇಲ್ಭಾಗದಲ್ಲಿ ಹೊಂಡಗುಂಡಿಗಳು ನಿರ್ಮಾಣಗೊಂಡ ಸಂದರ್ಭದಲ್ಲೂ ಆಟೋ ಚಾಲಕರು ಕಾಂಕ್ರೀಟ್ ಎರೆದು ಹೊಂಡಗುಂಡಿಗಳಿಗೆ ಮುಕ್ತಿ ದೊರಕಿಸಿದ್ದರು. ಆದರೆ ಇದೀಗ ಸೇತುವೆ ಹಾನಿಗೊಳಿಸಿದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಇದರಿಂದಾಗಿ ಸಂಚಾರಕ್ಕೆ ಕುತ್ತು ಬರಲಿದೆ. ಸೇತುವೆಯ ಇಕ್ಕೆಲಗಳಲ್ಲಿ ರಕ್ಷಣಾ ಗೋಡೆ ಇಲ್ಲದಿರುವುದು ಅಪಾಯಕ್ಕೆಡೆ ಮಾಡಿದೆ. ಶೀಘ್ರದಲ್ಲಿ ಸೇತುವೆ ಕಾಮಗಾರಿ ಆರಂಭಿಸಿ ಅಥವಾ ಮೇಲ್ಭಾಗದಲ್ಲಿ ತಾತ್ಕಾಲಿಕ ರಿಪೇರಿ ಮಾಡಿ ಸಂಚಾರಕ್ಕೆ ಅಡಚಣೆಯಾಗುವುದನ್ನು ತಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಸ್ಥಳೀಯ ಪಟ್ಟಣಪಂಚಾಯತ್ ಸದಸ್ಯೆ ಅನುಸೂಯ ಹೇರ್ಳೆ,ರೇಖಾ ಕೇಶವ ಕರ್ಕೆರ,ಕರುಣಾಕರ ಪೂಜಾರಿ,ಬಿಜೆಪಿ ಮುಖಂಡರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.