ಡೈಲಿ ವಾರ್ತೆ: 06/ಜೂ./2024
ಬಜಪೆ: ಅಕ್ರಮವಾಗಿ ದನ ಸಾಗಾಟ – ಪೊಲೀಸರಿಂದ 9 ಜಾನುವಾರುಗಳ ರಕ್ಷಣೆ, ವಾಹನ ಸೇರಿ 8 ಲಕ್ಷ ಮೌಲ್ಯದ ಸೊತ್ತುಗಳು ವಶಕ್ಕೆ
ಬಜಪೆ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ಬಜಪೆ ಪೊಲೀಸರು ತಡೆದು ಜಾನುವಾರುಗಳನ್ನು ರಕ್ಷಿಸಿದ ಘಟನೆ ಮಂಗಳೂರು ತಾಲೂಕು ಬಜಪೆ ಗ್ರಾಮದ ಶಾಂತಿಗುಡ್ಡೆ ಚೆಕ್ ಪೋಸ್ಟ್ ಬಳಿ ನಡೆದಿದೆ.
ಬಜಪೆ ಕಡೆಯಿಂದ ಇಬ್ಬರು ವ್ಯಕ್ತಿಗಳು ದನಗಳನ್ನು ಹತ್ಯೆ ಮಾಡಿ ಮಾಂಸ ಮಾಡುವ ಉದ್ದೇಶದಿಂದ ಬಿಳಿ ಬಣ್ಣದ ಗೂಡ್ಸ್ ವಾಹನದಲ್ಲಿ ತುಂಬಿಸಿ ಜೋಕಟ್ಟೆ ಕಡೆಗೆ ಶಾಂತಿಗುಡ್ಡೆ ಮಾರ್ಗವಾಗಿ ಸಾಗಾಟ ಮಾಡುತ್ತಿದ್ದು. ಬಜಪೆ ಪೊಲೀಸರು ಶಾಂತಿಗುಡ್ಡೆ ಚೆಕ್ ಪೋಸ್ಟ್ ಬಳಿ ಗೂಡ್ಸ್ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಆರೋಪಿಗಳು ವಾಹನವನ್ನು ನಿಲ್ಲಿಸಿ ಓಡಿ ಹೋಗಿರುತ್ತಾರೆ. ಸಿಬ್ಬಂದಿಯವರು ಅವರನ್ನು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದಾಗ, ಅವರು ಪಕ್ಕದಲ್ಲಿದ್ದ ಗುಡ್ಡೆಯಲ್ಲಿ ತಪ್ಪಿಸಿಕೊಂಡಿರುತ್ತಾರೆ.
ಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ ಹಿಂಸಾತ್ಮಕ ಸ್ಥಿತಿಯಲ್ಲಿದ್ದ 7 ದನಗಳು, 2 ಕೋಣಗಳು ಹಾಗೂ ಮಿನಿ ಗೂಡ್ಸ್ ವಾಹನವನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.
ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 8 ಲಕ್ಷ ರೂಪಾಯಿ ಆಗಬಹುದು. ದನ ಹಾಗೂ ಕೋಣಗಳನ್ನು ಎಲ್ಲಿಂದಲೋ ಕಳವು ಮಾಡಿ, ಅವುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಮಿನಿ ಗೂಡ್ಸ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದ ಆಪಾಧಿತರ ವಿರುದ್ದ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಆರೋಪಿತರ ಪತ್ತೆಗೆ ಬಾಕಿಯಿದ್ದು ಇವರ ಪತ್ತೆಯ ಬಗ್ಗೆ ವಿಶೇಷ ತಂಡ ರಚನೆ ಮಾಡಲಾಗಿರುತ್ತದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರದಲ್ಲಿ ಕಾನೂನು ಸುವೆವಸ್ಥೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್ IPS ರವರ ಮಾರ್ಗದರ್ಶನದಂತೆ, ಮಾನ್ಯ DCP ಯವರಾದ ಶ್ರೀ ಸಿದ್ದಾರ್ಥ ಗೋಯೆಲ್ (ಕಾ&ಸು) ಮತ್ತು ಶ್ರೀ ದಿನೇಶ್ ಕುಮಾರ್ (ಅಪರಾಧ ಮತ್ತು ಸಂಚಾರ) ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀ ಮನೋಜ್ ಕುಮಾರ್ ಮತ್ತು ಪೊಲೀಸ್ ನಿರೀಕ್ಷಕರಾದ ಶ್ರೀ ನಂದೀಶ್ವರ ಬಿ ಕುಂಬಾರ್ ರವರ ನೇತೃತ್ವದಲ್ಲಿ ಪಿ.ಎಸ್.ಐ ರೇವಣಸಿದ್ದಪ್ಪ, ಬಜಪೆ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಯವರಾದ ASI ರಾಮ ಪೂಜಾರಿ, ಸುಜನ್, ರಶೀದ ಶೇಖ್, ಚಿನ್ನಪ್ಪ, ಮಂಜುನಾಥ, ದೇವಪ್ಪ, ಬಸವರಾಜ್ ಪಾಟೀಲ್, ಅನಿಲ್ ಕುಮಾರ್, ಮಧೂ, ಮಧು ಮೂಡಿಗೇರೆ, ಪ್ರಕಾಶ್, ವಿರುಪಾಕ್ಷ, ರಮೇಶ್, ಚೇತನ್ ಮಾಳಿ, ವಿರೇಶ್, ಭರಮಪ್ಪ ಮತ್ತು ಇತರ ಸಿಬ್ಬಂದಿಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.