ಡೈಲಿ ವಾರ್ತೆ: 12/ಜೂ./2024

ಎಕ್ಸಲೆಂಟ್ ಪದವಿಪೂರ್ವ ಕಾಲೇಜ್ ಸುಣ್ಣಾರಿ ಇದರ ಪ್ರಸ್ತುತ ಸಾಲಿನ PCMB ಹಾಗೂ PCMC ವಿಭಾಗದ ವಿದ್ಯಾರ್ಥಿ ಪಾಲಕರ ಮತ್ತು ಶಿಕ್ಷಕರ ಸಭೆ.

ಕುಂದಾಪುರ: ಎಕ್ಸಲೆಂಟ್ ಪದವಿಪೂರ್ವ ಕಾಲೇಜ್ ಸುಣ್ಣಾರಿ ಇದರ ಪ್ರಸ್ತುತ ಸಾಲಿನ PCMB ಹಾಗೂ PCMC ವಿಭಾಗದ ವಿದ್ಯಾರ್ಥಿ ಪಾಲಕರ ಮತ್ತು ಶಿಕ್ಷಕರ ಸಭೆ ಜೂ. 12 ರಂದು ಬುಧವಾರ ಎಕ್ಸಲೆಂಟ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಎಂ. ಹೆಗ್ಡೆ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ವಹಿಸಿದ್ದರು.

PCMB ಮತ್ತು PCMC ವಿಭಾಗದ ವಿದ್ಯಾರ್ಥಿಗಳ ಪಾಲಕರ ಮತ್ತು ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ನ ಆಡಳಿತ ಪ್ರಾಂಶುಪಾಲರಾಗಿರುವ ನಾಗರಾಜ್ ಶೆಟ್ಟಿ ಅವರು ಎಂ.ಎಂ. ಹೆಗ್ಡೆ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕರಾದ ಮಹೇಶ್ ಹೆಗ್ಡೆ ಮತ್ತು ಅವರ ಧರ್ಮಪತ್ನಿ ದ್ವೀಪ ಎಂ. ಹೆಗ್ಡೆ ಅವರ ಕನಸಿನ ಕೂಸು ಈ ಎಕ್ಸಲೆಂಟ್ ಸಂಸ್ಥೆಯಾಗಿದೆ.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳನ್ನು ಒಂದು ಉತ್ತಮ ಡಾಕ್ಟರ್, ಇಂಜಿನಿಯರನ್ನಾಗಿ  ನೋಡುವ ಮಹದಾಸೆಯಿಂದ ಈ ಒಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯನ್ನು ಕಟ್ಟಿಸಿ 2012ರಲ್ಲಿ ಪ್ರಾರಂಭಿಸಿದರು.
ಈ ಸಂಸ್ಥೆಯಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ, ದೇಶ ವಿದೇಶಗಳಲ್ಲಿ  ಡಾಕ್ಟರ್, ಇಂಜಿನಿಯರ್, ಆಗಿ ಅಲ್ಲದೆ ಉತ್ತಮವಾದ ಬೇರೆ ಬೇರೆ ಉದ್ಯೋಗದಲ್ಲಿದ್ದಾರೆ. ಆ ಕೀರ್ತಿಯು ಈ ಸಂಸ್ಥೆಯನ್ನು ಹುಟ್ಟು ಹಾಕಿದ ಮಹೇಶ್ ಹೆಗ್ಡೆ, ಹಾಗೂ ಅವರ ಧರ್ಮಪತ್ನಿ ದೀಪ ಎಂ.ಹೆಗ್ಡೆ ಸಲ್ಲುತ್ತದೆ ಎಂದು ಹೇಳಿದರು.

ಸದ್ರಿ ವರ್ಷದಲ್ಲಿ ಹಿಂದಿನಂತೆ ಎಲ್ಲಾ ಬೋಧಕರು ಲಭ್ಯರಿರುತ್ತಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.
ಎಕ್ಸಲೆಂಟ್ ವಿದ್ಯಾಸಂಸ್ಥೆ ಕಳೆದ ಬಾರಿ 10 ರ‍್ಯಾಂಕ್ ನ್ನು ಪಡೆದರೆ ಈ ಬಾರಿ 17 ರ‍್ಯಾಂಕ್ ಪಡೆದಿದೆ. ಎಂದು ಹೇಳಿ ಅವರು ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯವೈಖರ್ಯ ಕುರಿತು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಮಾತನಾಡಿ
ಶಿಸ್ತು ಬದುಕನ್ನು ರೂಪಿಸುತ್ತದೆ.
ಇಲ್ಲಿ ಕಲಿತ ಪ್ರತಿ ವಿದ್ಯಾರ್ಥಿಯೂ ಕೂಡ ಉನ್ನತ ಸ್ಥಾನ ಪಡೆದು ಪೋಷಕರಿಗೂ ಹಾಗೂ ನಮ್ಮ ವಿದ್ಯಾ ಸಂಸ್ಥೆಗೆ ಶ್ರೇಯಸ್ಸನ್ನು ನೀಡುವುದರೊಂದಿಗೆ ಇಲ್ಲಿನ ಶಿಸ್ತು ಮಾತು ನಿಯಮಗಳಿಗೆ ಬದ್ಧರಾಗಿರಬೇಕು ಎನ್ನುವ ಮಾತುಗಳನ್ನಾಡಿದರು. ಅಲ್ಲದೇ ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿ 600 ಅಂಕಕ್ಕಿಂತ ಹೆಚ್ಚು ಪಡೆದ 50 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಪಿ.ಸಿ.ಎಂ.ಬಿ. ಮತ್ತು ಪಿ. ಸಿ.ಎಂ.ಸಿ. ವಿಭಾಗದ ಮುಖ್ಯಸ್ಥರಾಗಿರುವ  ವಿದ್ಯಾ ಮೇಡಂ, ರಜಿನಿ ಮೇಡಂ, ಸ್ಮಿತ್ತಲ್ ಮೇಡಂ, ಶ್ರೀ ಹರಿ ಶರ್ಮ, ಹಾಗೂ ಝಹಿರ್ ಅಬ್ಬಾಸ್ ಇವರುಗಳು ವಿದ್ಯಾರ್ಥಿಗಳ ಯಶಸ್ವಿಗೆ ಮುನ್ನುಡಿಯಾಗಿ ಪ್ರಸ್ತುತ ಶೈಕ್ಷಣಿಕ ವರ್ಷದ ಪಠ್ಯ ವಿಷಯಗಳ ಬಗ್ಗೆ ತಮ್ಮ  ಯೋಜನೆ, ಯೋಚನೆಗಳನ್ನು ಪಾಲಕರಿಗೆ,ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು ಭಾಗಿಯಾಗಿದ್ದರು.
ಅಧ್ಯಾಪಕ ಶ್ರೀನಿವಾಸ ವೈದ್ಯ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.