ಡೈಲಿ ವಾರ್ತೆ: 19/ಜೂ./2024

ಬಂಟ್ವಾಳ ನಾಪತ್ತೆಯಾದ ವ್ಯಕ್ತಿ ಶವವಾಗಿ ಪತ್ತೆ

ಬಂಟ್ವಾಳ : ಕಳೆದ 2 ದಿನದಿಂದ ನಾಪತ್ತೆಯಾಗಿದ್ದ ಬಿ.ಸಿ.ರೋಡ್ ಕೈಕಂಬ ನಿವಾಸಿಯೋರ್ವರ ಮೃತ ದೇಹ ಬಿ.ಸಿ. ರೋಡ್ ತಲಪಾಡಿ ಮೆಸ್ಕಾಂ ಸಬ್ ಸ್ಟೇಷನ್ ಬಳಿ ನದಿಯಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ.

ಮೃತ ವ್ಯಕ್ತಿ ಅಬ್ದುಲ್ ಕರೀಂ (61) ಎಂಬವರಾಗಿದ್ದು ಬಕ್ರೀದ್ ದಿವಸ ಸಂಜೆ ಮನೆಯಿಂದ ಹೊರ ಹೋದವರು ಕಾಣೆಯಾಗಿದ್ದರು. ಮೃತ ದೇಹ ಬಂಟ್ವಾಳ ಸರಕಾರಿ ಆಸ್ಪತ್ರೆ ಯ ಸಾಗಿಸಲಾಗಿದ್ದು, ಆತ್ಮಹತ್ಯೆಯೋ , ಅಕಸ್ಮಿಕವಾಗಿ ನದಿಗೆ ಜಾರಿ ಬಿದ್ದಿದ್ದೋ ಎಂದು ಇನ್ನಷ್ಟೇ ತಿಳಿಯಬೇಕಿದೆ.