ಡೈಲಿ ವಾರ್ತೆ: 21/ಜೂ./2024

ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಬಾಯಾರು: ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯು ಶುಕ್ರವಾರ ಬೆಳಗ್ಗೆ ಶ್ರೀ ಸಾಯಿ ರಜತಾಂಗಣದಲ್ಲಿ ಜರುಗಿತು.

ಮನಸ್ಸು ಪಂಚೇಂದ್ರಿಗಳ ಜೊತೆಗೆ ಸೇರಿ ಕೆಲಸವಾದಾಗ ಆರೋಗ್ಯ ಪೂರ್ಣ ಜೀವನ ನಮ್ಮದಾಗುತ್ತದೆ ಯೋಗ್ಯ ಗುರುಗಳ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸ ಮಾಡುವುದೇ ಉತ್ತಮ ಸಂಪೂರ್ಣ ಜ್ಞಾನವೇ ಯೋಗದ ಪ್ರಮುಖ ಫಲಿತಾಂಶ. ಬುದ್ಧಿಯ ಚುರುಕುತನ ವಾಗಬೇಕಾದರೆ ಪ್ರಾಥಮಿಕ ಸ್ಥಾನದಲ್ಲೇ ಯೋಗ ಅಭ್ಯಾಸ ಮಾಡುವುದು ಸೂಕ್ತ ಅದುವೇ ಜೀವನ ಕ್ರಮವಾಗಬೇಕು. ಸಾತ್ವಿಕವಾದ ಆಹಾರದಿಂದ ಶಾರೀರಿಕ ಅಭ್ಯಾಸಕ್ಕೆ ಮತ್ತು ಮಾನಸಿಕವಾದ ಆರೋಗ್ಯಕ್ಕೆ ಸುಗಮವಾದ ಶಕ್ತಿ ದೊರಕುತ್ತದೆ. ಭಾಹ್ಯ ಆರೋಗ್ಯವಾದಂತೆ ಆಂತರಿಕ ಶುದ್ಧತಾ ಕಾರ್ಯವು ಈ ಯೋಗಾಭ್ಯಾಸದಿಂದ ಸಾಧ್ಯವಾಗುತ್ತದೆ. ಪರಂಪರಾಗತ ವಾದ ಮಹಾ ಸಾಧಕರು, ಮುನಿಗಳು ಈ ಜೀವನ ಕ್ರಮವನ್ನು ಪಾಲಿಸಿಕೊಂಡು ಅನೇಕ ವರ್ಷಗಳವರೆಗೆ ಆರೋಗ್ಯಪೂರ್ಣ ಜೀವನವನ್ನು ನಡೆಸಿದ್ದಾರೆ. ಮನುಷ್ಯನ ಆಕಾರಗಳು ಬದಲಾವಣೆಯಾಗಲು ಮುಖ್ಯ ಕಾರಣ ದಿನದಲ್ಲಿ ನಾವು ಆಚರಣೆ ಮಾಡುವ ಆಚರಣೆಗಳು, ಜೀವನ ಶೈಲಿಗಳು, ಹಿತಮಿತ ಆಹಾರದ ಸೇವನೆಗಳು ಈ ಬದಲಾವಣೆ ಅನಾಹುತಕ್ಕೆ ಕಾರಣವಾಗುತ್ತದೆ. ದಿನನಿತ್ಯ ಆಯೋಗ ಅಭ್ಯಾಸ ಮಾಡುವುದರಿಂದ ನಮ್ಮ ಜೀವನ ಶೈಲಿ ಬದಲಾವಣೆಯಾಗಿ ಆರೋಗ್ಯಪೂರ್ಣ ವಾತಾವರಣ ಜೊತೆಗೆ ಆರೋಗ್ಯಪೂರ್ಣವಾದ ಜೀವನ ನಮ್ಮದಾಗುತ್ತದೆ”. ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದಂತಹ ಆಯುರ್ವೇದ ವೈದ್ಯರು,ಯೋಗ ತರಬೇತುದಾರರಾಗಿರುವಂತಹ ಡಾಕ್ಟರ್ ಕೆ ಗಣೇಶ್ ಭಟ್ ಅವರು ಅತಿಥಿಗಳಾಗಿ ಮಾತನಾಡಿದರು.

ಈ ಸಮಾರಂಭದಲ್ಲಿ ಸಮಾರಂಭದ ಅಧ್ಯಕ್ಷರಾಗಿ ಪ್ರಶಾಂತಿ ಸೇವಾ ಟ್ರಸ್ಟ್ ಬಾಯಾರು ಇದರ ಉಪಾಧ್ಯಕ್ಷರಾಗಿರುವ ಶ್ರೀ ಪೆಲತಡ್ಕ ರಾಮಕೃಷ್ಣ ಭಟ್, ಪ್ರಶಾಂತಿ ವಿದ್ಯಾ ಕೇಂದ್ರದ ಸಂಚಾಲಕರಾದ ಶ್ರೀ ಎಚ್ ಮಹಾಲಿಂಗ ಭಟ್, ಪ್ರಾಂಶುಪಾಲರಾದ ಶ್ರೀ ವಾಮನನ್ ಎ, ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಪ್ರಶಾಂತಿ ವಿದ್ಯಾ ಕೇಂದ್ರದ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಸಾಯಿ ಬಂಧುಗಳು, ವಿದ್ಯಾರ್ಥಿಗಳು ಪಾಲ್ಗೊಂಡರು.ಗಣಿತ ಅಧ್ಯಾಪಕರಾದ ಶ್ರೀ ಮಹೇಶ್ ಪೈ ನಿರೂಪಿಸಿ, ಪ್ರಾಂಶುಪಾಲರಾದ ಶ್ರೀ ವಾಮನ ಸ್ವಾಗತಿಸಿ, ವಿದ್ಯಾರ್ಥಿಗಳ ವೇದದೊಂದಿಗೆ ಪ್ರಾರಂಭಿಸಿ, ಶಿಕ್ಷಕಿಯಾಗಿರುವಂತಹ ಶ್ರೀಮತಿ ಜ್ಯೋತಿ ಲಕ್ಷ್ಮಿ ಧನ್ಯವಾದವಿತ್ತರು ನಂತರದಲ್ಲಿ ದೈಹಿಕ ಶಿಕ್ಷಕರಾದ ಶ್ರೀ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳ ಯೋಗಾಭ್ಯಾಸ ಪ್ರದರ್ಶನ ನಡೆಯಿತು.