ಡೈಲಿ ವಾರ್ತೆ: 28/ಜೂ./2024
ಗಿರಿ ಫ್ರೆಂಡ್ಸ್ (ರಿ )ಚಿತ್ರಪಾಡಿ ಸಂಸ್ಥೆಯ 2024-25 ನೇ ಸಾಲಿಗೆ ನೂತನ ಕಾರ್ಯಕಾರಿ ಮಂಡಳಿ ರಚನೆ
ಕೋಟ: ಗಿರಿ ಫ್ರೆಂಡ್ಸ್ (ರಿ )ಚಿತ್ರಪಾಡಿ ಸಂಸ್ಥೆಯ ಮಹಾಸಭೆಯು ಚಿತ್ರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ಮಹಾಸಭೆಯು ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಆಚಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಗೌರವಾಧ್ಯಕ್ಷರಾದ ದಿನೇಶ್ ಆಚಾರ್, ಸಂಚಾಲಕರಾದ ನಾಗೇಂದ್ರ ಆಚಾರ್, ಕಾರ್ಯದರ್ಶಿ ಸತೀಶ್ ಆಚಾರ್, ಕೋಶಾಧಿಕಾರಿ ಗಜೇಂದ್ರ ಆಚಾರ್ ರವರು ಉಪಸ್ಥಿತರಿದ್ದರು.
ಸಭೆಯಲ್ಲಿ 2023-24ರ ವಾರ್ಷಿಕ ವರದಿ ಯನ್ನು ಕಾರ್ಯದರ್ಶಿ ಸತೀಶ್ ಆಚಾರ್ ವಾಚಿಸಿದರು, ಕೋಶಾಧಿಕಾರಿ ಗಜೇಂದ್ರ ಆಚಾರ್ 2023-24ರ ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಿದರು.
2024-25 ರ ನೂತನ ಕಾರ್ಯಕಾರಿ ಮಂಡಳಿ ರಚನೆ ಮಾಡಲಾಯಿತು. ನೂತನ ಕಾರ್ಯಕಾರಿ ಮಂಡಳಿ ರಚನೆಯನ್ನು ಮಾಧವ ಪೈ ರವರು ಸಂಸ್ಥೆಯ ಸದಸ್ಯರ ಸಂಮುಖದಲ್ಲಿ ನಡೆಸಿಕೊಟ್ಟರು.
2024-25ಕ್ಕೆ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ನಾವುಡ, ಕಾರ್ಯದರ್ಶಿ ಹರೀಶ್ ಆಚಾರ್, ಕೋಶಾಧಿಕಾರಿ ನಾಗೇಂದ್ರ ಆಚಾರ್ , ಗೌರವಾಧ್ಯಕ್ಷ ಮಂಜುನಾಥ್ ಆಚಾರ್, ಸಂಚಾಲಕರಾಗಿ ರವಿ ಪೂಜಾರಿ, ಉಪಾಧ್ಯಕ್ಷ ಉದಯ ಆಚಾರ್ ಜೊತೆಕಾರ್ಯದರ್ಶಿ ರಾಜೇಶ ಪೂಜಾರಿ, ಲೆಕ್ಕಪರಿಶೋಧಕ ಮಾಧವ ಪೈ, ಮುಖ್ಯ ಸಲಹೆಗಾರರಾಗಿ ಸತ್ಯನಾರಾಯಣ ನಾಯರಿ, ಗೌರವ ಸಲಹೆಗಾರರಾಗಿ ಸೀತಾರಾಮ್ ಆಚಾರ್ ಮತ್ತು ರಾಘವೇಂದ್ರ ಆಚಾರ್, ವಿಶೇಷ ಪ್ರತಿನಿಧಿಯಾಗಿ ಗಣಪತಿ ಆಚಾರ್ ರವರು ಆಯ್ಕೆಯಾಗಿ ಹೊಸ ಕಾರ್ಯಕಾರಿ ಮಂಡಳಿಗೆ 2024-25ನೇ ಸಾಲಿಗೆ ಹಸ್ತಾಂತರ ಮಾಡಲಾಯಿತು.
ಈ ಮಹಾ ಸಭೆಯನ್ನು ಸತ್ಯ ನಾರಾಯಣ ನಾಯರಿ ನಿರೂಪಿಸಿದರು, ಹರೀಶ್ ಆಚಾರ್ ರವರು ಪ್ರಾರ್ಥಿಸಿದರು, ಕಾರ್ಯದರ್ಶಿ ಸತೀಶ್ ಆಚಾರ್ ರವರು ವಂದಿಸಿದರು. ರಾಷ್ಟ್ರ ಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.