ಡೈಲಿ ವಾರ್ತೆ: 28/ಜೂ./2024
ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರಿನಲ್ಲಿ ಈ ವರ್ಷದ ನೂತನ ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭವು ಶುಕ್ರವಾರ ಜರಗಿತು.
ಸಮಾರಂಭದಲ್ಲಿ ಪೈವಳಿಕೆ ಗ್ರಾಮ ಪಂಚಾಯತ್ ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವಂತಹ ಶ್ರೀ Z A ಕಯ್ಯಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, “ಶಾಲಾ ಅಭಿವೃದ್ಧಿ ಮತ್ತು ಕೆಲಸ ಕಾರ್ಯಗಳು ಸುರಕ್ಷಿತವಾಗಿ ಉನ್ನತಿಯ ಮಟ್ಟಕ್ಕೆ ತಲುಪಲು ನಾಯಕರ ಆಯ್ಕೆ ಪ್ರಾಮುಖ್ಯವಾಗಿದೆ. ನೀವು ಸರಿಯಾದ ನಾಯಕರನ್ನೇ ಆಯ್ಕೆ ಮಾಡಿದ್ದೀರಿ, ಜವಾಬ್ದಾರಿಯುತವಾಗಿ ಕೆಲಸ ನೆರವೇರಿಸುವುದು ನಾಯಕರ ಕರ್ತವ್ಯವಾಗಿದೆ, ನೆರವೇರಿಸುತ್ತಾರೆ ಅನ್ನುವ ಭರವಸೆ ಮತ್ತುಎಲ್ಲರಿಗೂ ದೇವರ ಆಶೀರ್ವಾದವಿರಲಿ, ಆಯ್ಕೆಯಾದ ಎಲ್ಲರಿಗೂ ಅಭಿನಂದನೆಗಳು, “ಎಂದು ಶುಭಾಶಂಸನೆಗೈದರು.
ಈ ಸಮಾರಂಭದ ಅಧ್ಯಕ್ಷರಾದ ಪ್ರಶಾಂತಿ ಸೇವಾ ಟ್ರಸ್ಟ್ ಬಾಯಾರಿನ ಉಪಾಧ್ಯಕ್ಷರಾಗಿರುವ ಶ್ರೀ ಪೆಲತ್ತಡ್ಕ ರಾಮಕೃಷ್ಣ ಭಟ್, ಪ್ರಶಾಂತಿ ಸೇವಾ ಟ್ರಸ್ಟ್ ಬಾಯಾರು ಇದರ ಮ್ಯಾನೇಜಿಂಗ್ ಟ್ರಸ್ಟಿ ಆಗಿರುವಂತಹ ಶ್ರೀ ಎಚ್ ಮಹಾಲಿಂಗ ಭಟ್, ಪ್ರಶಾಂತಿ ವಿದ್ಯಾ ಕೇಂದ್ರದ ಪ್ರಾಂಶುಪಾಲರಾದ ಶ್ರೀ ವಾಮನನ್ ಎ, ಮತ್ತು ಪ್ರಶಾಂತಿ ವಿದ್ಯಾ ಕೇಂದ್ರದ ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಕ್ ಉಪಸ್ಥಿತರಿದ್ದರು.
ಸಮಾಜ ವಿಜ್ಞಾನ ಶಿಕ್ಷಕರಾಗಿರುವ ಶ್ರೀ ಸೇಸು ಪಿ ಸಂಸತ್ತಿನ ಪ್ರಾಧಾನ್ಯತೆಯ,ನಾಯಕರ ಜವಾಬ್ದಾರಿಯ ಬಗ್ಗೆ ಪ್ರಾಸ್ತಾವಿಕ ನುಡಿಯನ್ನಾಡಿದರು.
ಮಾರ್ಗದರ್ಶಕರಾಗಿರುವ ಶ್ರೀ ಕೃಷ್ಣ ನಾಯಕ್ ಪ್ರತಿಜ್ಞಾ ಸ್ವೀಕಾರ ವನ್ನು ನೆರವೇರಿಸಿ ಕೊಟ್ಟರು.ನಾಯಕರಾಗಿ ಆಯ್ಕೆಯಾದ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಶಾಂತಿ ವಿದ್ಯಾ ಕೇಂದ್ರದ ಪ್ರಾಂಶುಪಾಲರಾದ ಶ್ರೀ ವಾಮನನ್ ಸ್ವಾಗತಿಸಿ, ಕನ್ನಡ ಶಿಕ್ಷಕರಾಗಿರುವ ಶ್ರೀ ನಿತ್ಯಾನಂದ ಕೆ ಆರ್ ಧನ್ಯವಾದಗೈದರು. ಕಾರ್ಯಕ್ರಮವನ್ನು ಆಂಗ್ಲ ಆಧ್ಯಾಪಿಕಿಯರಾದ ಶ್ರೀಮತಿ ವಿದ್ಯಾ ಜ್ಯೋತಿ ಮತ್ತು ಶ್ರೀಮತಿ ಹರ್ಷಿತ ನಿರೂಪಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು .