ಡೈಲಿ ವಾರ್ತೆ: 28/ಜೂ./2024
ಮಾರುತಿ ವಿದ್ಯಾ ಸಂಸ್ಥೆ(ರಿ). ಬಾಲೇಹೊಸೂರು ಇದರ ಶಾಲಾ ಸಂಸತ್ ಚುನಾವಣೆ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೇಹೊಸೂರಿನ ಶ್ರೀ ಮಾರುತಿ ವಿದ್ಯಾಸಂಸ್ಥೆಯ* ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2024 25 ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ನೆರವೇರಿಸಲಾಯಿತು.
ಭಾರತೀಯ ಚುನಾವಣಾ ವ್ಯವಸ್ಥೆಯ ಅಣುಕು ಪ್ರದರ್ಶನವೆಂಬತೆ ಶಾಲಾ ಸಂಸತ್ ಚುನಾವಣೆಯನ್ನು ವಿದ್ಯುನ್ಮಾನ ಮತ ಯಂತ್ರ ಮಾದರಿಯ ಮೊಬೈಲ್ ಆಪ್ ನೊಂದಿಗೆ ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ಸದರಿ ಕಾರ್ಯದ ಮುಖಾಂತರ ಮಕ್ಕಳಿಗೆ ಮತದಾನದ ಮಹತ್ವ ಮತದಾರರ ಜವಾಬ್ದಾರಿ ಹಾಗೂ ಮತ ಚಲಾವಣೆಯ ಕುರಿತು ಮಾಹಿತಿ ಮತ್ತು ಪ್ರಾಯೋಗಿಕ ಜ್ಞಾನವನ್ನು ನೀಡಲಾಯಿತು. ಮತದಾನದಲ್ಲಿ ವಯಸ್ಕ ಮತದಾನವೆಂಬ ಪರಿಕಲ್ಪನೆಯೊಂದಿಗೆ ಐದು ಆರು ಮತ್ತು ಏಳನೇ ತರಗತಿಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪ್ರಧಾನ ಗುರುಗಳಾದ ಶ್ರೀ ಆರ್ ಎಚ್ ಹಾಲಣ್ಣನವರ್ ,ಶ್ರೀಮತಿ ಎ ಬಿ ಕೆಂಪೇಗೌಡರ, ಶ್ರೀಮತಿ ಬಿ ಎನ್ ನದಾಫ್, ಶ್ರೀ ಎಚ್ ಪಿ ತಳವಾರ್ ಮತ್ತು ಶ್ರೀಮತಿ ಸುಜಾತ ಅತ್ತಿಗೇರಿ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.CRP ಗಳಾದ ಶ್ರೀ ಎಲ್ ಎಫ್ ಮಠದರವರು ಚುನಾವಣಾ ವೀಕ್ಷಕರಾಗಿ ಕಾರ್ಯ ನಿರ್ವಹಿಸಿದರು.
ಮತ ಎಣಿಕೆ ಸಿಬ್ಬಂದಿಗಳಾಗಿ ಶ್ರೀ ವಿಜಿ ಅಂಗಡಿ ಶ್ರೀ ಎಸ್ ಜಿ ಅಂಗಡಿ ಶ್ರೀ ಟಿ ಡಿ ಮಣ್ಣವಡ್ಡರ ಕಾರ್ಯನಿರ್ವಹಿಸಿದರು ಪ್ರಧಾನಿಯಾಗಿ ಕುಮಾರ್ ಸಂತೋಷ ಮಲ್ಲಪ್ಪ ಮತ್ತೂರ ಮತ್ತು ಉಪ ಪ್ರಧಾನಿಯಾಗಿ ಕುಮಾರಿ ಪ್ರೇಮಾ ಹಾಲನಗೌಡ ಪಾಟೀಲ್ ಆಯ್ಕೆಯಾದರು.