ಡೈಲಿ ವಾರ್ತೆ: 30/ಜೂ./2024

ಮೆಲ್ಕಾರ್ ಮಹಿಳಾ ಪ.ಪೂ ಕಾಲೇಜು ವಿದ್ಯಾರ್ಥಿ ಸಂಸತ್ತು ಚುನಾವಣೆ.

ಬಂಟ್ವಾಳ : ಮೆಲ್ಕರ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಸಂಸತ್ತು ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸಾರ ಆನ್ಫಾ ಹಾಗೂ ಕಾರ್ಯದರ್ಶಿಯಾಗಿ ಸೌಧ ನಾಫಿಯಾ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಚುನಾವಣಾ ಪ್ರಕ್ರಿಯೆ ಬಗ್ಗೆ ಮಾಹಿತಿಗಾಗಿ ವಿದ್ಯಾರ್ಥಿ ಸಂಸತ್ತು ಚುನಾವಣೆ ನಡೆಸಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ, ಜೊತೆ ಕಾರ್ಯದರ್ಶಿ ಸ್ಥಾನಕ್ಕೆ ವಾಣಿಜ್ಯ, ಕಲಾ ಮತ್ತು ವಿಜ್ಞಾನ ವಿಭಾಗದಿಂದ ತಲಾ ಎರಡು ವಿದ್ಯಾರ್ಥಿಗಳಂತೆ ನಾಮಪತ್ರ ಸಲ್ಲಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ವಿದ್ಯಾರ್ಥಿ ಸಂಸತ್ತು ಚುನಾವಣೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಾರ ಆನ್ಫಾ ಆಯ್ಕೆಯಾದರು. ಈಕೆ ಕಲ್ಲಡ್ಕ – ಕೆ.ಸಿ. ರೋಡ್ ನಿವಾಸಿ
ವಿ. ಅಬ್ದುಲ್ ಜಲೀಲ್ – ಅಪ್ಸಾ ದಂಪತಿಯ ಪುತ್ರಿ.

ಕಾರ್ಯದರ್ಶಿ ಸ್ಥಾನಕ್ಕೆ ನಡೆದ  ಚುನಾವಣೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸೌಧ ನಾಫಿಯ ಜಯಗಳಿಸಿದರು. ಈಕೆ ಅಹಮದ್ ಮತ್ತು ರಜಿಯಾ ದಂಪತಿಯ ಪುತ್ರಿ. 

 ಚುನಾವಣಾ ಅಧಿಕಾರಿಯಾಗಿ   ಅಬ್ದುಲ್ ಮಜೀದ್, ಉಪ ಚುನಾವಣಾ ಅಧಿಕಾರಿಯಾಗಿ ಉಪನ್ಯಾಸಕಿ ಕು.ನಿಶಾ, ಮತ ಎಣಿಕೆಯ ಅಧಿಕಾರಿಯಾಗಿ ಉಪ ಪ್ರಾಂಶುಪಾಲೆ ಅಂಜಲಿನಾ ಸುನೀತ ಪಿರೇರಾ, ಹಾಗೂ ಸಹಾಯಕರಾಗಿ ಉಪನ್ಯಾಸಕರಾದ ಅಂಕಿತ, ಸಂಪ್ರೀತಾ, ತಾಜುನ್ನಿಸಾ, ವಿಜಯ, ಅಶ್ವಿತಾ  ಕಾರ್ಯನಿರ್ವಹಿಸಿದರು.

  ಪ್ರಾಂಶುಪಾಲ ಫಯಾಜ್ ದೊಡ್ಡಮನೆ ಚುನಾವಣೆಯ ವೀಕ್ಷಕರಾಗಿ ಕಾರ್ಯ ನಿರ್ವಹಿಸಿದರು.