ಡೈಲಿ ವಾರ್ತೆ: 07/ಜುಲೈ /2024

ಹಗರಿಬೊಮ್ಮನಹಳ್ಳಿ: ರೋವರ್ಸ ಮತ್ತು ರೇಂಜರ್ಸ ಘಟಕಗಳ ವಿದ್ಯಾರ್ಥಿಗಳಿಗೆ “ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ” ಕುರಿತು ಒಂದು ದಿನದ ಕಾರ್ಯಾಗಾರ

ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಜಿ.ವಿ.ಪಿ.ಪಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ವಿಜಯನಗರ ಜಿಲ್ಲೆ ಇವರ ಸಹಯೋಗದಲ್ಲಿ
ರಾಷ್ಟ್ರೀಯ ಸೇವಾ ಯೋಜನೆ ಎ ಮತ್ತು ಬಿ ಘಟಕಗಳು, ಆಂತರಿಕ ಗುಣಮಟ್ಟ ಭರವಸೆ ಕೋಶ (ಆಯ್.ಕ್ಯೂ.ಎ.ಸಿ), ರೋವರ್ಸ ಮತ್ತು ರೇಂಜರ್ಸ ಘಟಕಗಳ ವಿದ್ಯಾರ್ಥಿಗಳಿಗೆ “ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ” ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಸಸಿಗೆ ನೀರುಣಿಸಿ ಉದ್ಘಾಟಿಸುತ್ತಿರುವ ಶ್ರೀ ಭಾಲಚಂದ್ರ ಜಾಬಶೆಟ್ಟಿ ಮತ್ತು ಪ್ರಾಚಾರ್ಯ ಡಾ. ಕೆ. ವೆಂಕಟೇಶ ಮತ್ತು ಇತರ ಉಪನ್ಯಾಸಕರು.

ತ್ಯಾಜ್ಯ ನಿರ್ವಹಣೆಯಲ್ಲಿ ಸಮುದಾಯದ ಸಹಯೋಗಕ್ಕಾಗಿ ವಿದ್ಯಾರ್ಥಿಗಳು ಅನುಸರಿಸಬೇಕಾದ ತಂತ್ರಗಳ ಹಾಗೂ ಜೈವಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ನಗರ ತ್ಯಾಜ್ಯದಿಂದ ಸಿದ್ಧಗೊಳ್ಳುವ ಉತೃಷ್ಟ ಗೊಬ್ಬರದಿಂದ ಭೂಮಿಯ ಫಲವತ್ತತೆ ಹೆಚ್ಚಿಸುವುದರ ಜೊತೆಗೆ ರಸಾಯನ ಮುಕ್ತ ಆಹಾರ ಧಾನ್ಯ ಬೆಳೆದು ಸುಸ್ಥಿರ ಕೃಷಿಯನ್ನು ಪುನರುಜ್ಜೀವನ ಗೊಳಿಸಬಹುದೆಂದು ತಿಳಿಸಿದರು.
ಕ್ರಯ ಪರಿಣಾಮಕಾರಿ ಪರಿಸರ ಸ್ನೇಹಿ ಸೂಕ್ಷ್ಮಾಣು ಬಳಕೆಯಿಂದ ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸುವ ಕುರಿತು ಸಮಗ್ರ ಮಾಹಿತಿ ನೀಡಿದರು.

ಪ್ರಾಚಾರ್ಯ ಡಾ. ಕೆ. ವೆಂಕಟೇಶ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ಸಮುದಾಯದಲ್ಲಿ ಬದಲಾವಣೆ ತರುವ ಹರಿಕಾರರಾಬೇಕು, ತ್ಯಾಜ್ಯ ನಿರ್ವಹಣೆ ಕುರಿತು ಇತರರಿಗೆ ಮಾದರಿಯಾಗಿರಬೇಕೆಂದು ಕರೆ ನೀಡಿದರು.

ರಾಷ್ಟ್ರೀಯ ಸೇವಾ ಘಟಕ ‘ಎ’ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಎಂ. ಮಲ್ಲಿಕಾರ್ಜುನ, ‘ಬಿ’ ಘಟಕದ ಕಾರ್ಯಕ್ರಮಾಧಿಕಾರಿ ವೀರೇಶ ಬಡಿಗೇರ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಮನ್ವಯಾಧಿಕಾರಿ ಪ್ರಶಾಂತ. ಕೆ. ಮೋರೆ, ರೋವರ್ಸ ಮತ್ತು ರೇಂಜರ್ಸ್ ಘಟಕದ ಸಮನ್ವಯಾಧಿಕಾರಿ ಡಾ. ಪ್ರೀತಿ ಉಪಸ್ಥಿತರಿದ್ದರು.

ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರೊಫೆಸರ್ ಗಳು ಭಾಗವಹಿಸಿದ್ದರು