ಡೈಲಿ ವಾರ್ತೆ: 10/ಜುಲೈ /2024

ಕೋಟತಟ್ಟು ಗ್ರಾ. ಪಂ. ನ 2024 – 25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜು. 10 ರಂದು ಬುಧವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಸತೀಶ್ ಕುಂದರ್ ಬಾರಿಕೆರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇಕಡಾ 25ರ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಂತ್ಯ ಸಂಸ್ಕಾರಕ್ಕೆ ಸಹಾಯ ಧನ, ವೈದ್ಯಕೀಯ ನೆರವಿಗೆ ಸಹಾಯ ಧನ, ಮದುವೆ ಸಹಾಯ ಧನ, ದಿವ್ಯಾಂಗ ಚೇತನರಿಗೆ ಶೇಕಡಾ 5ರಡಿಯಲ್ಲಿ ವೈದ್ಯಕೀಯ ಸಹಾಯಧನ ಮತ್ತು ಕ್ರೀಡಾಪಟುಗಳಿಗೆ ಶೇಕಡಾ 2ರಡಿಯಲ್ಲಿ ಸಹಾಯ ಧನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಹಾಗೂ ಕೋಟತಟ್ಟು ಶಾಲೆಗಳಿಗೆ ಕ್ರೀಡಾ ಪರಿಕಾರಕ್ಕೆ ಚೆಕ್ ವಿತರಿಸಲಾಯಿತು.

ಈ ಹಿಂದಿನ ಗ್ರಾಮ ಸಭೆಯಲ್ಲಿ ಸೂಚಿಸಿದ ಹಂದಟ್ಟು ಸಂಪರ್ಕ ರಸ್ತೆ ಪುನಃ ನವೀಕರಣಗೊಳಿಸಿದ್ದು, ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮ ಪಂಚಾಯತ್ ಎದುರು ಹಾದು ಹೋಗುವ ರಸ್ತೆಗೆ ದಾನಿಗಳಾದ ಆನಂದ್ ಸಿ ಕುಂದರ್ ಅವರ ಸಹಕಾರದಿಂದ ಅಗಲೀಕರಣ ಹಾಗೂ ಸರಕಾರಿ ದಾಖಲೆಯಲ್ಲಿ ಕೋಟತಟ್ಟು ಎನ್ನುವ ಬದಲು ಕೋಡತಟ್ಟು ಇದ್ದ ಹೆಸರನ್ನು ವಿವಿಧ ಇಲಾಖೆಗಳ ಸಮನ್ವಯ ಸಹಕಾರದಿಂದ ಬದಲಾಯಿಸಿದ ಬಗ್ಗೆ ಮತ್ತು ಈ ರೀತಿ ಅನೇಕ ಹಿಂದಿನ ಗ್ರಾಮ ಸಭೆಯಲ್ಲಿ ಚರ್ಚಿಸಲಾದ ವಿಚಾರ ಅನುಷ್ಠಾನಗೊಳಿಸಿದ ಬಗ್ಗೆ ಸಭೆಯಲ್ಲಿ ಶ್ಲಾಘನೆ ವ್ಯಕ್ತಪಡಿಸಿದರು.
ಅಧಿವೃದ್ದಿ ಕಾರ್ಯಗಳ ಬಗ್ಗೆ ಉತ್ತಮ ಚರ್ಚೆಗಳ ಮೂಲಕ ಮಾದರಿ ಗ್ರಾಮ ಸಭೆಯಾಗಿ ಮಾರ್ಪಟ್ಟಿತು.

ಈ ಸಂಧರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಸರಸ್ವತಿ, ಸದಸ್ಯರಾದ ಎಚ್. ಪ್ರಮೋದ್ ಹಂದೆ, ವಾಸು ಪೂಜಾರಿ, ಶ್ರೀಮತಿ ಜ್ಯೋತಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ಶ್ರೀಮತಿ ಅಶ್ವಿನಿ, ಶ್ರೀಮತಿ ಕೆ. ಸೀತಾ, ರೋಬರ್ಟ್ ರೊಡ್ರಿಗಸ್, ಶ್ರೀಮತಿ ವಿದ್ಯಾ ಪಿ, ಶ್ರೀಮತಿ ಸಾಹಿರಾ ಬಾನು, ನೋಡಲ್ ಅಧಿಕಾರಿಗಳಾದ (ಹಿರಿಯ ಪಶು ವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ ಕೋಟ) ಡಾ. ಅನಿಲ್ ಕುಮಾರ್ ಎಚ್., ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಾಧವ ಪೈ, ಮೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರರಾದ ಪ್ರಶಾಂತ್ ಶೆಟ್ಟಿ, ಶಿಶು ಅಭಿವದ್ದಿ ಯೋಜನೆಯ ಮೇಲ್ವಿಚಾರಕರಾದ ಶ್ರೀಮತಿ. ಮೀನಾಕ್ಷಿ, ಗ್ರಾಮ ಆಡಳಿತಾಧಿಕಾರಿಗಳಾದ ರಾಘವೇಂದ್ರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ರಾದ ಆಕಾಶ್ ಶೆಟ್ಟಿ, ಕೃಷಿ ಇಲಾಖೆ ಬ್ರಹ್ಮಾವರದ ಸುರೇಶ್ ನಾಯ್ಕ, ಕೋಟ ಸಿಎ ಬ್ಯಾಂಕ್ ನ ಸಹಾಯಕ ಕಾರ್ಯನಿರ್ವಹಕ ಅಧಿಕಾರಿಗಳಾದ ಶ್ರೀಮತಿ. ರಾಧಾ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಹಾಗೂ ಕೋಟತಟ್ಟುವಿನ ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕರು, ಗ್ರಾಮಸ್ಥರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್ ಅವರು ಗ್ರಾಮಸಭೆ ನಿರೂಪಿಸಿದರು ಹಾಗೂ ಕಾರ್ಯದರ್ಶಿ ಶ್ರೀಮತಿ ಸುಮತಿ ಅಂಚನ್ ಅವರು ಸ್ವಾಗತಿಸಿ ವಂದಿಸಿದರು.