



ಡೈಲಿ ವಾರ್ತೆ: 11/ಜುಲೈ /2024


SDPI ಬೈಂದೂರ್ ಕ್ಷೇತ್ರ ಸಮಿತಿ ವತಿಯಿಂದ ಗಂಗೊಳ್ಳಿ ಯಲ್ಲಿ ಪ್ರತಿಭಟನೆ

ಎನ್‌ಡಿಎ ಆಡಳಿತದಲ್ಲಿ ನಡೆಯುತ್ತಿರುವ ವ್ಯಾಪಕ ಗುಂಪು ಹತ್ಯೆ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೈಂದೂರ್ ಕ್ಷೇತ್ರ ಸಮಿತಿ ವತಿಯಿಂದ ಗಂಗೊಳ್ಳಿ ಯಲ್ಲಿ ಪ್ರತಿಭಟನೆ ನಡೆಸಲಾಯಿತು
ಈ ಪ್ರತಿಬಟನೆಯಲ್ಲಿ ಅತಿಥಿಯಾಗಿ ಬಾಗವಹಿಸಿ ಮಾತನಾಡಿದ SDPI ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ತೌಫೀಕ್ ಬ್ಯಾರಿಯವರು ಬಿಜೆಪಿ ಸರಕಾರ ಬಂದ ನಂತರ ಗುಂಪು ಹತ್ಯೆಯಂತಹ ಘೋರವಾದ ಕೃತ್ಯಕ್ಕೆ ಚಾಲನೆ ನೀಡಿದಂತಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಇಂತಹ ಕೃತ್ಯ ಮರುಕಳಿಸಿದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬೈಂದೂರ್ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಿದ್ದೀಕ್ ಗಂಗೊಳ್ಳಿ, ಜೊತೆ ಕಾರ್ಯದರ್ಶಿಯಾದ ಸಮೀರ್ ಗಂಗೊಳ್ಳಿ, ಗಂಗೊಳ್ಳಿ ಗ್ರಾಮ ಸಮಿತಿ ಅಧ್ಯಕ್ಷರಾದ ರಜಬ್ ಗಂಗೊಳ್ಳಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.