ಡೈಲಿ ವಾರ್ತೆ: 11/ಜುಲೈ /2024
ಹಗರಣಗಳ ವಿರುದ್ಧ ಸಿಡಿದೆದ್ದ ಬಿಜೆಪಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ – ಜುಲೈ 15 ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ.!
ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ, ರಾಜ್ಯ ಸರ್ಕಾರದ ವಿರುದ್ಧ ಜು.15 ರಂದು ವಿಧಾನಸೌಧ ಮುತ್ತಿಗೆ ಹಾಕುವುದಾಗಿ ರಾಜ್ಯ ಬಿಜೆಪಿ ಘೋಷಿಸಿದೆ.
ಇಂದು ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನ ಮಾಡಿದೆ. ಬಳಿಕ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಜು.15 ರಂದು ವಿಧಾನಸೌಧ ಮುತ್ತಿಗೆ ಚಲೋ ಕರೆ ನೀಡಲಾಗಿದೆ. ವಾಲ್ಮೀಕಿ ಸಮುದಾಯದ ದೊಡ್ಡ ಸಂಖ್ಯೆಯಲ್ಲಿ ಬರಲಿದೆ. ಸಿದ್ದರಾಮಯ್ಯ ಅವರ ನಿಲುವು ಖಂಡಿಸಿ ಮುತ್ತಿಗೆ ಹಾಕಲಿದೆ. ದಲಿತರ ಹಣ ಲೂಟಿ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ದಲಿತರ ಕ್ಷಮೆಯಾಚಿಸಬೇಕು. 15 ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನ ಮಾಡಿದ್ದೇವೆ ಎಂದರು.
ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ವಾಲ್ಮೀಕಿ ಹಗರಣ ಬಗ್ಗೆ ಚರ್ಚೆ ಆಯ್ತು. ಬಿಜೆಪಿ ಸರ್ಕಾರ ಈ ವರ್ಗದ ಮೀಸಲಾತಿ ಹೆಚ್ಚು ಮಾಡಿತ್ತು. ಆದರೆ ಇಂದಿನ ಕಾಂಗ್ರೆಸ್ ಸರ್ಕಾರ, ದಲಿತರ ಹೆಸರೇಳಿ ದಲಿತರ ಹೆಸರಲ್ಲಿ ಭ್ರಷ್ಟಾಚಾರ ಮಾಡಿದೆ. ಕ್ಯಾಪ್ಟನ್ ಆಗಿ ಸಿದ್ದರಾಮಯ್ಯ, ಇಡೀ ಸಚಿವ ಸಂಪುಟ ದಲಿತರ ಹಣ ನುಂಗಲು ತಯಾರಿ ಮಡಿಕೊಂಡಿರೋದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ಯೋಜನೆ ಮೂಲಕ, ದಲಿತ ಸಮುದಾಯದ ಏಳಿಗೆ ಮಾಡಬೇಕಿತ್ತು. ದಲಿತರಿಗೆ ಮೀಸಲಿಟ್ಟ ಹಣವನ್ನ ಲೂಟಿ ಮಾಡಿದೆ ಅಂತಾ ಬಿಜೆಪಿ ಒತ್ತಿ ಹೇಳಲಿದೆ. ವಾಲ್ಮೀಕಿ ಹಗರಣ, ಕಾರ್ಮಿಕರ ಇಲಾಖೆ ಹಗರಣ, SCSP-TSP ಹಗರಣಗಳ ಸರಮಾಲೆಯ ಸರ್ಕಾರ ಇದಾಗಿದೆ ಅಂತಾ ವಾಗ್ದಾಳಿ ನಡೆಸಿದರು.