ಡೈಲಿ ವಾರ್ತೆ: 13/ಜುಲೈ /2024
ದಕ್ಷಿಣ ಕನ್ನಡ: ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಂಜೂರಾತಿ ಆಗ್ರಹಿಸಿ ಜನಪರ ಹೋರಾಟಕ್ಕೆ ವಿಮೆನ್ ಇಂಡಿಯಾ ಮೂಮೆಂಟ್ ಸಂಪೂರ್ಣ ಬೆಂಬಲ ವ್ಯಕ್ತ
ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಂಜೂರಾತಿ ಆಗ್ರಹಿಸಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಜನಪರ ಹೋರಾಟಕ್ಕೆ ವಿಮೆನ್ ಇಂಡಿಯಾ ಮೂಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸಿದೆ.
ಈ ಹೋರಾಟದ ಭಾಗವಾಗಿ ನಡೆಯುತ್ತಿರುವ ಭಿತ್ತಿಪತ್ರ ಪ್ರದರ್ಶನ, ಪ್ರತಿಭಟನೆ, ಮುಖ್ಯ ಮಂತ್ರಿಯರಿಗೆ ಪತ್ರ, ಕಾರ್ಡ್ ಚಳವಳಿ ಸೇರಿದಂತೆ ವಿಭಿನ್ನ ರೀತಿಯ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನಡೆಸಲು ಉದ್ದೇಶಿಸಿರುವ ಎಲ್ಲಾ ಹೋರಾಟಗಳಲ್ಲೂ ವಿಮೆನ್ ಇಂಡಿಯಾ ಮೂಮೆಂಟ್ ಭಾಗವಹಿಸಿದೆ ಅಲ್ಲದೆ ನಮ್ಮ ಕಾರ್ಯಕರ್ತರೂ ಕೂಡ ಈ ಜನಪರ ಹೋರಾಟದಲ್ಲಿ ಭಾಗವಹಿಸಬೇಕೆಂದು ವಿಮೆನ್ ಇಂಡಿಯಾ ಮೂಮೆಂಟ್ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಶಾ ವಾಮಂಜೂರು ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.