ಡೈಲಿ ವಾರ್ತೆ: 22/ಜುಲೈ /2024

ಯುವತಿ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಯುವಕ ನನ್ನು ಹಿಡಿದ ಸ್ಥಳೀಯರು

ಉಪ್ಪಿನಂಗಡಿ: ಯುವತಿಯೊರ್ವಳು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಮಾಡಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಕೊಟ್ಟ ಘಟನೆ ಜುಲೈ 21ರಂದು ಉಪ್ಪಿನಂಗಡಿಯಲ್ಲಿ ನಡೆದಿದೆ.

ಉಪ್ಪಿನಂಗಡಿಯ ಪೆರಿಯಡ್ಕದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಮಾಡುತ್ತಿದ್ದಾಗ ರಹಿಮಾನ್ ಎನ್ನುವ ಯುವಕನನ್ನು ಸ್ಥಳೀಯರು ಹಿಡಿದು ಉಪ್ಪಿನಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿನ್ನಲೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿದ ಅರುಣ್ ಕುಮಾರ್ ಪುತ್ತಿಲ, ಆರೋಪಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈಗಾಗಲೇ ಉಪ್ಪಿನಂಗಡಿಯಲ್ಲಿ ಹಿಂದೂಗಳನ್ನು ಕೇಂದ್ರೀಕರಿಸಿ ಹಲವು ಘಟನೆಗಳು ನಡೆದಿದ್ದು, 2 ವರ್ಷದ ಹಿಂದೆ ಮೀನು ಅಂಗಡಿಗೆ ಬೆಂಕಿ ಹಾಕಿದ್ದು ಇನ್ನೂ ಪತ್ತೆಯಾಗಿಲ್ಲ. ಈ ಘಟನೆಯಲ್ಲಿ ಆರೋಪಿಯನ್ನು ಊರಾವರೇ ಹಿಡಿದುಕೊಟ್ಟಿದ್ದಾರೆ. ಪೆರಿಯಡ್ಕ ಜಂಕ್ವನ್ ನಲ್ಲಿ ಪೊಲೀಸ್ ಇಲಾಖೆಯ ಸಿಸಿಟಿವಿ ಅಗತ್ಯತೆ ಇದೆ ಎಂದು ಠಾಣಾಧಿಕಾರಿಯಲ್ಲಿ ಮನವಿ ಮಾಡಿದರು.