ಡೈಲಿ ವಾರ್ತೆ: 10/ಆಗಸ್ಟ್/2024

ಪಠ್ಯದ ಜೊತೆಯಲ್ಲಿ ಮಾನಸಿಕವಾಗಿ ದೃಢ ಸಿಗಬೇಕಾದರೆ ಇಂತಹ ಶಾರೀರಿಕ ಅಗತ್ಯ: ಶಾಸಕ ಕೊಡ್ಗಿ

ಕುಂದಾಪುರ:(ಆ:10) ಪಠ್ಯದ ಜೊತೆಯಲಿ ಮಾನಸಿಕ ದೃಢ ಸಿಗಬೇಕಾದರೆ ಇಂತಹ ಶಾರೀರಿಕ ಕೆಲಸಗಳಲ್ಲಿ ತಮ್ಮನ್ನು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು, ಇದರಲ್ಲಿ ಸೋಲು, ಗೆಲ್ಲುವು ನಂತರದ ವಿಚಾರ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಬೇಕು ಇದರ ತಯಾರಿಗಳನ್ನು ಕೂಡ ನಿರಂತರ ಮಾಡುತ್ತ ಇರಬೇಕು ಸೋಲು ಗೆಲುಗಳನ್ನು ಸಮಾನವಾಗಿ ಸ್ವೀಕರಿಸಬೇಕು ಸಂಸ್ಥೆಯಲ್ಲಿ ಇಂತಹ ಒಂದು ಕುಸ್ತಿ ಪಂದ್ಯಾಟ ಆಯೋಜನೆ ಮಾಡಿದ್ದಕ್ಕೆ ಖುಷಿ ಪಡುತ್ತಾ ನಿಯಮಗಳಿಗೆ ಬದ್ಧರಾಗಿ ಎಂದು ಶುಭ ಹಾರೈಸಿ ಕುಸ್ತಿ ಪಂದ್ಯಾಟವನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿಯವರು ಉದ್ಘಾಟಿಸಿ ಏನು ಈ ಕ್ರೀಡಾಕೂಟದ ನಿಯಮ ಇದೆ ಇದನ್ನು ಮನಸಾರೆ ಒಪ್ಪಿಕೊಂಡು ಯಾವುದೇ ಆಕ್ಷೇಪಣೆ ಇಲ್ಲದೆ ನಿಯಮಗಳನ್ನು ಪಾಲಿಸಿ, ವಿಜೇತರಾಗುವಂತೆ ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢಶಾಲಾ ವಿಭಾಗ) ಕೋಟೇಶ್ವರ ಇವರ ಸಹಯೋಗದಲ್ಲಿ ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗ ಕುಸ್ತಿ ಪಂದ್ಯಾಟ.
ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಶೀಲ ಇವರು ವಹಿಸಿದರು.
ಸತ್ಯನಾರಾಯಣ (t.p.e.o)
ಪ್ರಸ್ತಾವಿಕ ಮಾತುಗಳನ್ನಾಡಿದರು. ಉಪ ಪ್ರಾಂಶುಪಾಲರಾದ
ಚಂದ್ರಶೇಖರ್ ಶೆಟ್ಟಿಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ ದಿವ್ಯಪ್ರಭಾ /ಅನುರಾಧ ನಿರ್ವಹಿಸಿದರು.ಮಂಜುನಾಥ ಹೊಳ್ಳ ವಂದನಾರ್ಪಣೆಗೈದರು.
ಕಾರ್ಯಕ್ರಮದ ವೇದಿಕೆಯಲ್ಲಿ
ಕುಸುಮಕರ ಶೆಟ್ಟಿ,,ಬಾಲಕೃಷ್ಣ ಶೆಟ್ಟಿ,ಕಿಶನ್ ಶೆಟ್ಟಿ,, ಶ್ರೀಮತಿ ವತ್ಸಲ್ಲ ದಯಾನಂದ ಶೆಟ್ಟಿ, ಮಂಜುಶ್ರೀ ಕನ್ಸ್ಟಕ್ಷನ್,, ಮತ್ತು ಮಕ್ಕಳ ಪೋಷಕರು, ವಿದ್ಯಾರ್ಥಿಗಳು ಗ್ರಾಮಸ್ಥರು ಹಾಗೂ ಮುಂತಾದವರು ಉಪಸ್ಥಿತರಿದ್ದರು.